For Quick Alerts
ALLOW NOTIFICATIONS  
For Daily Alerts

ಟಾಪ್ 10ರಲ್ಲಿ 9 ಕಂಪನಿಗಳ ಮೌಲ್ಯ 1.33 ಲಕ್ಷ ಕೋಟಿ ರು ಕುಸಿತ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳಲ್ಲಿ ಒಂಭತ್ತು ಕಂಪನಿಗಳು ಮಾರುಕಟ್ಟೆ ಮೌಲ್ಯ ಕಳೆದ ವಾರ 1.33 ಲಕ್ಷ ಕೋಟಿ ರುಪಾಯಿ ಇಳಿಕೆ ಕಂಡಿವೆ. ಈ ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ(ಟಿಸಿಎಸ್) 30, 887.07 ಕೋಟಿ ರು ಹಾಗೂ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 34, 914.58 ಕೋಟಿ ರು ಮೌಲ್ಯವನ್ನು ಕಳೆದ ವಾರ ಕಳೆದುಕೊಂಡಿವೆ.

 

ಕುಸಿತ ಕಂಡ ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಭಾರ್ತಿ ಏರ್ ಟೆಲ್, ಇನ್ಫೋಸಿಸ್ ಕೋಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.

ಐಸಿಐಸಿಐ ಬ್ಯಾಂಕ್ ಮಾತ್ರ 2,412.18 ಕೋಟಿ ರು ಏರಿಕೆ ಕಂಡು 3,94,315.01 ಕೋಟಿ ರು ಏರಿಕೆ ಕಂಡಿದೆ.

ಟಾಪ್ 10ರಲ್ಲಿ 9 ಕಂಪನಿಗಳ ಮೌಲ್ಯ 1.33 ಲಕ್ಷ ಕೋಟಿ ರು ಕುಸಿತ

ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 18, 764.75 ಕೋಟಿ ರು ಕುಸಿತವಾಗಿ 12,07,283.32 ಕೋಟಿ ರು ಆಗಿದೆ. ಎಚ್‌ಡಿಎಫ್‌ಸಿ ಮೌಲ್ಯ 13,755.09 ಕೋಟಿ ರು ಕುಸಿತ ಕಂಡು 4,50,499.54 ಕೋಟಿ ರು ಆಗಿದೆ. ಭಾರ್ತಿ ಏರ್ ಟೆಲ್ ಮೌಲ್ಯ 10, 270.09 ಕೋಟಿ ರು ಇಳಿಸಿಕೊಂಡು 2,86,601.44 ಕೋಟಿ ರು ಗೇರಿದೆ. ಇನ್ಫೋಸಿಸ್ 7,967.43 ಕೋಟಿ ರು ಏರಿಕೆ ಕಂಡು 5,68,308.25ಕೋಟಿ ರು ಆಗಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ 7,800.58 ಕೋಟಿ ರು ಇಳಿಕೆಯಾಗಿ 7,79,671.98 ಕೋಟಿ ರು ಮುಟ್ಟಿದೆ.

ಹಿಂದೂಸ್ತಾನ್ ಯೂನಿಲಿವರ್ ಲಿಮೆಟೆಡ್ ಮೌಲ್ಯ ಕಳೆದು ಕಂಡು 5,42,292 ಕೋಟಿ ರುಗೆ ಕುಸಿದಿದೆ. ಟಿಸಿಎಸ್ 30, 887.07 ಕೋಟಿ ರು ಕಳೆದುಕೊಂಡು 11,50, 331 ಕೋಟಿ ರು ಆಗಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 5,995.06 ಕೋಟಿ ರು ಕುಸಿತಗೊಂಡು 3,43, 907.94 ಕೋಟಿ ರು ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3,078.99 ಕೋಟಿ ರು ಕುಸಿತಗೊಂಡು 3,00,268.56 ಕೋಟಿ ರು ಆಗಿದೆ.

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಭಾರ್ತಿ ಏರ್‌ಟೆಲ್.

English summary

M-cap of nine of the 10 most valued companies sink over Rs 1.33 lakh cr

Nine of the 10 most valued companies lost over Rs 1,33,433.64 crore to their total market valuation last week.
Story first published: Sunday, April 25, 2021, 12:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X