For Quick Alerts
ALLOW NOTIFICATIONS  
For Daily Alerts

ಕಳೆದ ವಾರದ ಟಾಪ್ 10 ಮೌಲ್ಯ: ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಭಾರಿ ಲಾಭ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಒಂಭತ್ತು ಕಂಪನಿಗಳು ಒಟ್ಟಾರೆ 1,11,012.63 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡಿವೆ. ಕಳೆದ ವಾರದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಭಾರಿ ಲಾಭ ಗಳಿಸಿವೆ. ಕಳೆದ ವಾರ ರಿಲಯನ್ಸ್ ಭಾರಿ ನಷ್ಟ ಅನುಭವಿಸಿದೆ.

 

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕಡಿಮೆ ಕಂಪನಿ ಮೌಲ್ಯ ಗಳಿಸಿಕೊಂಡಿವೆ. ಟಾಪ್ 10 ರಲ್ಲಿ 9 ಕಂಪನಿಗಳ ಮೌಲ್ಯ ಬದಲಾಗಿದೆ. ಓಮಿಕ್ರಾನ್ ಭೀತಿ ನಡುವೆ ಷೇರುಪೇಟೆಯಲ್ಲಿ ಸುಧಾರಣೆ ಕಂಡು ಬಂದಿದೆ.

ಕೊರೊನಾವೈರಸ್ ಹೊಸ ರೂಪಾಂತರಿ ಅಲೆಯಿಂದ ಷೇರುಪೇಟೆ ವಹಿವಾಟು ಭಾರಿ ನಷ್ಟ ಅನುಭವಿಸಿದ್ದವು, ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ಟಿಸಿಎಸ್ ಅಲ್ಲದೆ, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ವಿಪ್ರೋ ಲಾಭ ಗಳಿಸಿವೆ. ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಎಸ್ ಬಿ ಐ ಮೌಲ್ಯ ಕುಸಿತ ಕಂಡಿದೆ. ಯಾವ ಕಂಪನಿ ಮೌಲ್ಯ ಏರಿಕೆಯಾಗಿದೆ ಹಾಗೂ ಯಾವ ಕಂಪನಿ ಮೌಲ್ಯ ಕುಸಿದಿದೆ ಎಂಬ ವಿವರ ಮುಂದೆ ಓದಿ..

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 24,635.68 ಕೋಟಿ ರು ಕುಸಿತ ಕಂಡು 13,82,280.01 ಕೋಟಿ ರು ಮೌಲ್ಯ ಕಂಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 22,554.33 ಕೋಟಿ ರು ಇಳಿಕೆ ಕಂಡು 8,20,164.27 ಕೋಟಿ ರು ತಲುಪಿದೆ. ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 14,391.25 ಕೋಟಿ ರು ಏರಿಕೆ ಕಂಡು 5,54,444.80 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ.

ಇನ್ಫೋಸಿಸ್

ಇನ್ಫೋಸಿಸ್

ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಕಳೆದ ಒಂದು ವಾರದಲ್ಲಿ 10,934.61 ಕೋಟಿ ರು ಮೌಲ್ಯ ಏರಿಸಿಕೊಂಡು 7,94,714.60 ಕೋಟಿ ರು ಮೌಲ್ಯ ಹೊಂದಿದೆ. ಇದೇ ವೇಳೆ ಎಚ್‌ಡಿಎಫ್‌ಸಿ 9,641.77 ಕೋಟಿ ರು ಮೌಲ್ಯ ಇಳಿಕೆ ಕಂಡು 4,68,480.66 ಕೋಟಿ ರು ತಲುಪಿದೆ.

ವಿಪ್ರೋ ಮೌಲ್ಯ
 

ವಿಪ್ರೋ ಮೌಲ್ಯ

ವಿಪ್ರೋ ಮೌಲ್ಯ 9,164.13 ಕೋಟಿ ರು ಏರಿಕೆ ಕಂಡು 3,92,021.38 ಕೋಟಿ ರು ಗೆ ಏರಿಕೆಯಾಗಿದೆ. ಐಸಿಐಸಿಐ ಬ್ಯಾಂಕ್ 8,902.89 ಕೋಟಿ ರು ಏರಿಕೆ ಕಂಡು 5,13,973.22 ಕೋಟಿ ರು ತಲುಪಿದೆ. ಬಜಾಜ್ ಫೈನಾನ್ಸ್ 7,575.11 ಕೋಟಿ ರು ಏರಿಸಿಕೊಂಡು 4,21,121.74 ಕೋಟಿ ರುಗೆ ಹೆಚ್ಚಳ ಕಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3,212.86 ಕೋಟಿ ರು ಇಳಿಸಿಕೊಂಡು 4,10,933.74 ಕೋಟಿ ರು ಮೌಲ್ಯಕ್ಕೆ ಇಳಿದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ 2,772.49 ಕೋಟಿ ರು ಇಳಿಕೆ ಕಂಡು 16,01,382.07 ರು ಆಗಿದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ವಿಪ್ರೋ.

English summary

M-cap of nine of top-10 most-valued firms jumps over Rs 1.11 trillion

Nine of the top-10 most-valued firms together added Rs 1,11,012.63 crore in market valuation last week, with Tata Consultancy Services and HDFC Bank emerging as the biggest gainers.
Story first published: Sunday, January 2, 2022, 14:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X