For Quick Alerts
ALLOW NOTIFICATIONS  
For Daily Alerts

ಕಳೆದ ವಾರದ ಟಾಪ್ 10 ಮೌಲ್ಯ: ರಿಲಯನ್ಸ್ ಸಂಸ್ಥೆಗೆ ಭರ್ಜರಿ ಲಾಭ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಒಟ್ಟಾರೆ 2,28,367.09 ಕೋಟಿ ರು ಮೌಲ್ಯ ಪಡೆದುಕೊಂಡಿವೆ. ಕಳೆದ ವಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಭಾರಿ ಲಾಭ ಗಳಿಸಿದೆ. ಎಚ್ ಡಿ ಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಎಚ್ ಡಿ ಎಫ್ ಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಲಾಭದತ್ತ ಮುಖ ಮಾಡಿವೆ.

 

ಬಿಎಸ್ಇಯಲ್ಲಿ 30 ಷೇರುಗಳು ಸೆನ್ಸೆಕ್ಸ್ 587.86 ಅಂಕ ಅಥವಾ ಶೇ 2.03 ರಷ್ಟು ಗಳಿಕೆ ಕಂಡಿತ್ತು. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚು ಕಂಪನಿ ಮೌಲ್ಯ ಗಳಿಸಿಕೊಂಡಿವೆ.

ಕೊರೊನಾವೈರಸ್ ಹೊಸ ರೂಪಾಂತರಿ ಅಲೆಯಿಂದ ಷೇರುಪೇಟೆ ವಹಿವಾಟು ಭಾರಿ ನಷ್ಟ ಅನುಭವಿಸಿದ್ದವು, ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ಆದರೆ, ಕಳೆದ ವಾರದಲ್ಲಿ ಓಮಿಕ್ರಾನ್ ಭೀತಿ ನಡುವೆ ಷೇರುಪೇಟೆಯಲ್ಲಿ ಸುಧಾರಣೆ ಕಂಡು ಬಂದಿದೆ.ರಿಲಯನ್ಸ್ ಇಂಡಸ್ಟ್ರೀಸ್ ಮಾತ್ರ ಟಾಪ್ 10 ಪಟ್ಟಿಯಲ್ಲಿ ಲಾಭ ಗಳಿಸಿದ ಸಾಧನೆ ಮಾಡಿದೆ.

ಕಳೆದ ವಾರದಲ್ಲಿ ಬಹುತೇಕ ಟಾಪ್ ಕಂಪನಿಗಳು ಹೆಚ್ಚಿನ ಲಾಭವನ್ನು ಕಂಡಿವೆ. ರಜೆಗಳ ನಡುವೆ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಹೆಚ್ಚಾಗಿದ್ದರೂ ಟಾಪ್ ಕಂಪನಿಗಳು ಲಾಭವನ್ನು ಅನುಭವಿಸಿವೆ. ಯಾವ ಕಂಪನಿ ಮೌಲ್ಯ ಏರಿಕೆಯಾಗಿದೆ ಹಾಗೂ ಯಾವ ಕಂಪನಿ ಮೌಲ್ಯ ಕುಸಿದಿದೆ ಎಂಬುದರ ವಿವರ ಮುಂದೆ ಓದಿ..

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ 1,35,204.46 ಕೋಟಿ ರು ಏರಿಕೆ ಕಂಡು 16,62,776.63 ರು ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 5,125.39 ಕೋಟಿ ರು ಏರಿಕೆ ಕಂಡು 8,43,528.19 ಕೋಟಿ ರು ತಲುಪಿದೆ. ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಕಳೆದ ಒಂದು ವಾರದಲ್ಲಿ 9,988.16 ಕೋಟಿ ರು ಮೌಲ್ಯ ಏರಿಸಿಕೊಂಡು 7,39,607.12 ಕೋಟಿ ರು ಮೌಲ್ಯ ಹೊಂದಿದೆ.

ಎಚ್‌ಡಿಎಫ್‌ಸಿ ಮೌಲ್ಯ ಹೆಚ್ಚಳ

ಎಚ್‌ಡಿಎಫ್‌ಸಿ ಮೌಲ್ಯ ಹೆಚ್ಚಳ

ಎಚ್‌ಡಿಎಫ್‌ಸಿ 7,050.11 ಕೋಟಿ ರು ಮೌಲ್ಯ ಹೆಚ್ಚಳ ಕಂಡು 5,08,612.95 ಕೋಟಿ ರು ತಲುಪಿದೆ. ಬಜಾಜ್ ಫೈನಾನ್ಸ್ 22,993.93 ಕೋಟಿ ರು ಏರಿಸಿಕೊಂಡು 4,49,747.2 ಕೋಟಿ ರುಗೆ ಹೆಚ್ಚಳ ಕಂಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 4,41,500.53 ಕೋಟಿ ರು ಏರಿಸಿಕೊಂಡು 19,187.91 ಕೋಟಿ ರು ಮೌಲ್ಯಕ್ಕೇರಿದೆ. ಇದೇ ವೇಳೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 1,146.7 ಕೋಟಿ ರು ಕುಸಿತ ಕಂಡು 13,45,178.53 ಕೋಟಿ ರು ಮೌಲ್ಯ ಕಂಡಿದೆ.

ಭಾರ್ತಿ ಏರ್ ಟೆಲ್

ಭಾರ್ತಿ ಏರ್ ಟೆಲ್

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 2,396 ಕೋಟಿ ರು ಇಳಿಕೆ ಕಂಡು 5,48,136.15 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ. ಭಾರ್ತಿ ಏರ್ ಟೆಲ್ ಮೌಲ್ಯ 4,256.32 ಕೋಟಿ ರು ಇಳಿಕೆ ಕಂಡು 3,90,263.46 ಕೋಟಿ ರು ಗೆ ಕುಸಿದಿದೆ.

ಒಟ್ಟಾರೆ, ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಾಗೂ ಭಾರ್ತಿ ಏರ್ ಟೆಲ್.

English summary

M-cap of seven most valued firms rises by Rs 2.28 trn, RIL gains most

Seven of the top-10 valued companies together added Rs 2,28,367.09 crore in market valuation last week, with Reliance Industries emerging as the biggest gainer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X