For Quick Alerts
ALLOW NOTIFICATIONS  
For Daily Alerts

ಎಲ್ಲಾ ಕಾರುಗಳ ಬೆಲೆಯನ್ನ 1 ಲಕ್ಷ ರೂ.ವರೆಗೆ ಹೆಚ್ಚಿಸಿದ ಮಹೀಂದ್ರಾ

|

ಎಲ್ಲಾ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇದರಿಂದ ಕಾರುಗಳ ಬೆಲೆಗಳು ಹೊರತಾಗಿಲ್ಲ. ಈಗಾಗಲೇ ಅನೇಕ ಮೋಟಾರು ವಾಹನ ಕಂಪನಿಗಳು ಎರಡು ಬಾರಿಯಾದ್ರೂ ಬೆಲೆ ಹೆಚ್ಚಿಸಿವೆ. ಇದೇ ಸಾಲಿಗೆ ಮಹೀಂದ್ರಾ ಸೇರುತ್ತಿದ್ದು, ತನ್ನೆಲ್ಲಾ ಕಾರುಗಳ ಬೆಲೆ ಏರಿಕೆ ಮಾಡುತ್ತಿದೆ.

 

ಮಹೀಂದ್ರಾ ಕಂಪನಿಯು ಕಾರುಗಳ ಬೆಲೆ ಏರಿಕೆ ಮಾಡುತ್ತಿರುವುದು ಇದು ಮೂರನೇ ಬಾರಿ. ಕೊನೆಯ ಬಾರಿಗೆ ಮೇ 2021ರಲ್ಲಿ ಬೆಲೆ ಏರಿಕೆ ಮಾಡಲಾಗಿತ್ತು. ಅದರಲ್ಲೂ ಹೊಸ ಥಾರ್ ಎಸ್‌ಯುವಿ ಅತಿ ಹೆಚ್ಚು ಬೆಲೆ ಏರಿಕೆ ಪಡೆದಿದೆ.

ಮಹೀಂದ್ರಾ ಥಾರ್ ಬೆಲೆ ಭಾರೀ ಏರಿಕೆ

ಮಹೀಂದ್ರಾ ಥಾರ್ ಬೆಲೆ ಭಾರೀ ಏರಿಕೆ

ಹಿಂದೂಸ್ತಾನ ಟೈಮ್ಸ್‌ ಆಟೋ ವರದಿಯ ಪ್ರಕಾರ, ಥಾರ್ ಸುಮಾರು 1 ಲಕ್ಷ ರೂಪಾಯಿಗಳಷ್ಟು ದುಬಾರಿಯಾಗಿದೆ. ಹೊಸ ಎಸ್‌ಯುವಿ ಬೆಲೆ 42,300 ರೂಪಾಯಿಗಳಿಂದ 1,02,000 ದರದಲ್ಲಿ ಏರಿಕೆ ಕಂಡಿದೆ. ಎಸ್‌ಯುವಿಯ ಎಎಕ್ಸ್ ರೂಪಾಂತರವು 67,000 ರೂಪಾಯಿ ದುಬಾರಿಯಾಗಿದೆ.

ಎಸ್‌ಯುವಿಗಳ ಬೆಲೆಯೂ ಹೆಚ್ಚಳ

ಎಸ್‌ಯುವಿಗಳ ಬೆಲೆಯೂ ಹೆಚ್ಚಳ

ಮಹೀಂದ್ರಾ ಎಕ್ಸ್‌ಯುವಿ 500 ಕಡಿಮೆ ರೂಪಾಂತರಗಳಿಗೆ 2,912 ರೂಪಾಯಿ ಏರಿಕೆಯಾಗಿದೆ. ಇತರೆ ಹೆಚ್ಚಿನ ರೂಪಾಂತರಗಳಿಗೆ 3,188 ರೂಪಾಯಿವರೆಗೆ ಏರಿಕೆಯಾಗಿದೆ. ಮಿನಿ-ಎಸ್‌ಯುವಿ KUV 100 ಸಹ ಅಲ್ಪ ಬೆಲೆ ಏರಿಕೆ ಪಡೆದಿದೆ. KUV100 NXT ಯ ಬೆಲೆಯನ್ನು 3,016 ರಿಂದ 3,344 ರೂಪಾಯಿಗಳವರೆಗೆ ಹೆಚ್ಚಿಸಲಾಗಿದೆ.

ಮಹೀಂದ್ರಾ ಅಲ್ತುರಾಸ್ G4
 

ಮಹೀಂದ್ರಾ ಅಲ್ತುರಾಸ್ G4

ಟೊಯೋಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್‌ನ ಪ್ರತಿಸ್ಪರ್ಧಿ ಪ್ರೀಮಿಯಂ ಎಸ್‌ಯುವಿ ಅಲ್ತುರಾಸ್ ಎಸ್‌ಯುವಿ ಬೆಲೆಯಲ್ಲಿ ಸಣ್ಣ ಏರಿಕೆ ಕಂಡಿದೆ. ಈ ಎಸ್‌ಯುವಿಗಳ ಬೆಲೆಯನ್ನ 3,094 ರೂಪಾಯಿವರೆಗೆ ಹೆಚ್ಚಿಸಲಾಗಿದೆ.

ಇನ್ನು ಸಬ್-4 ಎಂ ಕಾಂಪ್ಯಾಕ್ಟ್ ಎಸ್‌ಯುವಿ ಎಕ್ಸ್‌ಯುವಿ 300 ಗಣನೀಯ ಏರಿಕೆ ಕಂಡಿದ್ದು, 24,266 ರೂಪಾಯಿವರೆಗೆ ಹೆಚ್ಚಾಗಿದೆ.

ಹೊಸ ಬೊಲೆರೊ ಬೆಲೆಯು ಏರಿಕೆ

ಹೊಸ ಬೊಲೆರೊ ಬೆಲೆಯು ಏರಿಕೆ

ಶೀಘ್ರದಲ್ಲೇ ಹೊಸ ನಿಯೋ ಆವೃತ್ತಿಯನ್ನು ಪಡೆಯುವ ನಿರೀಕ್ಷೆಯಿರುವ ಮಹೀಂದ್ರಾ ಬೊಲೆರೊ ಮಾಡೆಲ್‌ಗಳಿಗೂ 21,000 ರಿಂದ 22,600 ರುಪಾಯಿ ವ್ಯಾಪ್ತಿಯಲ್ಲಿ ಬೆಲೆ ಏರಿಕೆ ಆಗಲಿದೆ.

ಇದರ ಜೊತೆಗೆ ಪೆಟ್ರೋಲ್ ಪವರ್‌ಟ್ರೇನ್‌ನೊಂದಿಗೆ ಬರುವ ಡಬ್ಲ್ಯು 8 ಮತ್ತು ಡಬ್ಲ್ಯು 8 (ಒ) ರೂಪಾಂತರಗಳು ಕ್ರಮವಾಗಿ, 18,970 ಮತ್ತು 24,266 ರೂಪಾಯಿಗಳಷ್ಟು ಹೆಚ್ಚಳವನ್ನು ಪಡೆದಿವೆ. ಡೀಸೆಲ್ ರೂಪಾಂತರಗಳ ಬೆಲೆಯೂ ಇದೇ ಶ್ರೇಣಿಯಲ್ಲಿ ಹೆಚ್ಚಾಗಿದೆ, ಇದರ ಬೆಲೆಗಳು, 23,870 ರೂಪಾಯಿವರೆಗೆ ಹೆಚ್ಚು ದುಬಾರಿಯಾಗಿದೆ.

ಮಹೀಂದ್ರಾ ಮರಾಜ್ಜೊ ಮತ್ತು ಸ್ಕಾರ್ಪಿಯೋ

ಮಹೀಂದ್ರಾ ಮರಾಜ್ಜೊ ಮತ್ತು ಸ್ಕಾರ್ಪಿಯೋ

2018 ರಲ್ಲಿ ಬಿಡುಗಡೆಯಾದ ಮರಾಜ್ಜೋ ಎಂಪಿವಿ, ಬೆಲೆಯು 26,000 ರಿಂದ 30,000 ರೂಪಾಯಿಗಳವರೆಗೆ ಹೆಚ್ಚಳವನ್ನು ಕಂಡಿದೆ. ಮಹೀಂದ್ರಾ ಸ್ಕಾರ್ಪಿಯೋ ಸಹ ಹೆಚ್ಚು ದುಬಾರಿಯಾಗಿದೆ, ಹೊಸ ಎಕ್ಸ್ ಶೋರೂಂ ಬೆಲೆಗಳು 30,000 ದಿಂದ 40,000 ರೂಪಾಯಿವರೆಗೆ ಹೆಚ್ಚಾಗಿದೆ.

English summary

Mahindra Cars Prices Hiked By Up To Rs 1 Lakh: Check Latest Rates

Mahindra cars have received a substantial price hike in india. The cars are expensive by upto around Rs 1 Lakh.
Story first published: Saturday, July 10, 2021, 15:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X