ಉದ್ಯೋಗ ಬಿಟ್ಟು Youtube Channel ತೆರೆದವನ ತಿಂಗಳ ಆದಾಯ 17 ಲಕ್ಷ!
ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಸಂಬಳ ಬಂದು ಬೀಳುತ್ತಿರುವ ಉದ್ಯೋಗ ಸ್ಥಿರ ಬದುಕನ್ನು ಕಟ್ಟಿ ಕೊಟ್ಟಿರುತ್ತದೆ. ಇಂತಹ ಸಂದರ್ಭವನ್ನು ತ್ಯಜಿಸಿ ಉದ್ಯೋಗವನ್ನು ಬಿಟ್ಟು ಬೇರೊಂದು ಉದ್ಯಮ ಅಥವಾ ವ್ಯಾಪಾರವನ್ನು ಪ್ರಾರಂಭಿಸುವುದಕ್ಕೆ ಸಾಕಷ್ಟು ಧೈರ್ಯ ಬೇಕಾಗುತ್ತದೆ. ಇಂಥ ನಿರ್ಧಾರ ತೆಗೆದುಕೊಳ್ಳುವ ಎಲ್ಲರೂ ಯಶಸ್ಸಿನ ದಾರಿ ಸೇರುವುದಿಲ್ಲ. ಇಲ್ಲಿ ಬಿದ್ದವರೂ ಇದ್ದಾರೆ, ಎದ್ದು ಸಾಧನೆ ಶಿಖರವನ್ನು ಏರಿದವರೂ ಇದ್ದಾರೆ.
ಹೂಡಿಕೆಯ ಬ್ಯಾಂಕಿಂಗ್ ವಿಶ್ಲೇಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬೆನ್ ಚೋನ್ ಎಂಬ ವ್ಯಕ್ತಿ ಇಂದು ತಮ್ಮದೇ ಕಾಲಿನಲ್ಲಿ ನಿಂತುಕೊಂಡಿದ್ದಾರೆ. ಕಳೆದ 2018ರಲ್ಲಿ ಉದ್ಯೋಗವನ್ನು ತ್ಯಜಿಸಿದ ಅವರು ತಮ್ಮದೇ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.
ಡಿ.18ರಂದು ಕ್ರಿಪ್ಟೋ ಕರೆನ್ಸಿಗಳ ಮೌಲ್ಯದಲ್ಲಿ ಕೊಂಚ ಏರಿಕೆ
ತಿಂಗಳ ವೇತನಕ್ಕೆ ಕೈಚಾಚಿ ನಿಲ್ಲುತಿದ್ದ ವ್ಯಕ್ತಿ ಇಂದು ತಮ್ಮದೇ ಉದ್ಯೋಗಿಗಳಿಗೆ ವೇತನ ನೀಡುವ ಹಂತಕ್ಕೆ ತಲುಪಿದ್ದಾರೆ. ಸಾವಿರದ ಲೆಕ್ಕದಲ್ಲಿ ವೇತನ ಪಡೆಯುತ್ತಿದ್ದ ಬೆನ್ ಚೋನ್ ಆದಾಯ ಈಗ 17 ಲಕ್ಷದ ಗಡಿಯನ್ನೂ ದಾಟಿದೆ. ಅವರ ಯಶೋಗಾಥೆಯನ್ನು ಓದಿ ತಿಳಿಯಿರಿ.

ಉದ್ಯೋಗ ಬಿಟ್ಟು ಯುಟ್ಯೂಬ್ ತೆರೆದ ಬೆನ್
ಬೆನ್ ಅವರು ರೇರ್ ಲಿಕ್ವಿಡ್ (Rareliquid) ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ವೊಂದನ್ನು ಪ್ರಾರಂಭಿಸಿದರು. ತಮಗೆ ಚೆನ್ನಾಗಿ ತಿಳಿದಿರುವ ಹಣಕಾಸು ಪ್ರಪಂಚದಲ್ಲಿ ವಿಷಯಗಳ ಮೇಲೆ ಅದನ್ನು ಕೇಂದ್ರೀಕರಿಸಲು ನಿರ್ಧರಿಸಿದರು. ಹಣಕಾಸು, ತಂತ್ರಜ್ಞಾನ ಮತ್ತು ಕ್ರಿಪ್ಟೋಕರೆನ್ಸಿಗಳಲ್ಲಿ ಒಬ್ಬರು ತಮ್ಮ ವೃತ್ತಿಜೀವನವನ್ನು ಹೇಗೆ ಪ್ರಾರಂಭಿಸಬಹುದು ಮತ್ತು ಬೆಳೆಯಬಹುದು ಎಂಬುದರ ಕುರಿತು ವಿಡಿಯೋಗಳಲ್ಲಿ ವಿವರಿಸುತ್ತಾ ಹೋದರು.

ಒಂದೇ ತಿಂಗಳಿನಲ್ಲಿ 17 ಲಕ್ಷ ರೂಪಾಯಿ ಆದಾಯ
ಈಗ, ಬೆನ್ ಚೋನ್ ತನ್ನದೇ ಆಗಿರುವ ಚಾನೆಲ್ಗೆ 71,000 ಚಂದಾದಾರನ್ನು ಹೊಂದಿದ್ದು ಒಬ್ಬ ವೃತ್ತಿಪರ ಯೂಟ್ಯೂಬರ್ ಆಗಿ ಬೆಳೆದು ನಿಂತಿದ್ದಾರೆ. ಇದಷ್ಟೇ ಅಲ್ಲದೇ ಅವರು ನವೆಂಬರ್ ತಿಂಗಳಿನಲ್ಲಿ $26,000 ಅಂದರೆ 17 ಲಕ್ಷ ರೂಪಾಯಿಗೂ ಹೆಚ್ಚು ಆದಾಯವನ್ನು ಗಳಿಸಿದ್ದಾರೆ.

ಬೆನ್ ಚೋನ್ ಯೂಟ್ಯೂಬ್ ವಿಶೇಷತೆ?
ತನ್ನ YouTube ಚಾನಲ್ ಮೂಲಕ, ಚೋನ್ ತನ್ನ ವೀಕ್ಷಕರಿಗೆ ಷೇರುಗಳು, ಉದ್ಯೋಗ, ಹೊಸ ಉದ್ಯಮ, ವೃತ್ತಿಗಳು ಮತ್ತು ಕ್ರಿಪ್ಟೋಕರೆನ್ಸಿಗಳ ಬಗ್ಗೆ ಸಲಹೆ ನೀಡುತ್ತಾರೆ. "ನಾನು ರೇರ್ ಲಿಕ್ವಿಡ್ ಅನ್ನು ನಿಜವಾಗಿಯೂ ಒಂದು ಯೂಟ್ಯೂಬ್ ಚಾನೆಲ್ ಆಗಿ ನೋಡುವುದಿಲ್ಲ. ಆದಾಯ ಗಳಿಕೆಗೆ ನಮ್ಮ ಬಳಿ ಸಾಕಷ್ಟು ಐಡಿಯಾಗಳಿವೆ. ಸಣ್ಣ ವ್ಯಾಪಾರದಿಂದ ದೊಡ್ಡ ವ್ಯಾಪಾರಗಳವರೆಗೂ ಆದಾಯದ ಮೂಲವನ್ನು ಕಂಡುಕೊಳ್ಳುವ ಬಗ್ಗೆ ನಾನು ವಿವರಿಸುತ್ತಾ ಹೋಗುತ್ತೇನೆ," ಎಂದು ಬೆನ್ ಚೋನ್ ಹೇಳುತ್ತಾರೆ.

ಯೂಟ್ಯೂಬ್ ಚಾನೆಲ್ ಆದಾಯ ಹೆಚ್ಚಳಕ್ಕೆ ಕಾರಣ?
ಬೆನ್ ಚೋನ್ ಅವರ ರೇರ್ ಲಿಕ್ವಿಡ್ ಯೂಟ್ಯೂಬ್ ಚಾನೆಲ್ ನಲ್ಲಿ ಸಿಗುವ ಗಮನಾರ್ಹ ವಿಷಯಗಳು ಅವರಿಗೆ ಬ್ರ್ಯಾಂಡ್ ಅನ್ನು ನೀಡಿತು. ಇದರಿಂದ ಪ್ರಾಯೋಜಕತ್ವ, ಜಾಹೀರಾತು, ಪುನರಾರಂಭದ ಸಲಹೆ ಮತ್ತು ಕೋರ್ಸ್ ಕೊಡುಗೆಗಳನ್ನು ಪಡೆಯುವಂತೆ ಮಾಡಿತು. ಇದರಿಂದ 2021ರ ಜುಲೈನಲ್ಲಿ ಚಾನೆಲ್ ಆದಾಯವು 19,000 ಡಾಲರ್ ದಾಟಲು ಸಹಾಯವಾಯಿತು. ಚೋನ್ ಯಾವಾಗಲೂ ಷೇರುಗಳಲ್ಲಿ ಹೂಡಿಕೆಯಲ್ಲಿ ಆಸಕ್ತಿ ಹೊಂದಿದ್ದು, ಇತರೆ ಸಹ ಹೂಡಿಕೆದಾರರಿಗೆ ಅವರ ಚಾನಲ್ ಮೂಲಕ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದರು.
ಯೂಟ್ಯೂಬರ್ ಆಗಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. "ಈಗ ನಾನು ಯೂಟ್ಯೂಬ್ಗೆ ತೆರಳಿದ್ದೇನೆ, ನಾನು ವಿದ್ಯಾರ್ಥಿಗಳಿಗೆ ಮತ್ತು ಚಂದಾದಾರರಿಗೆ ಕಲಿಸಲು ಸಮರ್ಥನಾಗಿದ್ದೇನೆ ಆದರೆ ಮತ್ತಷ್ಟು ಸೃಜನಶೀಲಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದು ವಿವಿಧ ಆದಾಯದ ಮೂಲಗಳು ಹೆಚ್ಚಾಗುವುದಕ್ಕೆ ಕಾರಣವಾಗಿದೆ," ಎಂದಿದ್ದಾರೆ. ಈ ಹಿನ್ನೆಲೆಯಲ್ಲೇ ನವೆಂಬರ್ ತಿಂಗಳಲ್ಲಿ ಚೋನ್ ತನ್ನ ಚಾನೆಲ್ ಮೂಲಕ 17 ಲಕ್ಷ ರೂಪಾಯಿ ದಾಟಿದೆ.