For Quick Alerts
ALLOW NOTIFICATIONS  
For Daily Alerts

ಜಿಎಸ್‌ಟಿ ದಾಖಲೆ: ಮಾರ್ಚ್‌ನಲ್ಲಿ 1.23 ಲಕ್ಷ ಕೋಟಿ ರೂಪಾಯಿ ಆದಾಯ ಸಂಗ್ರಹ

|

ದೇಶದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಆದಾಯ ಸಂಗ್ರಹವು ಪ್ರತಿ ತಿಂಗಳು ಏರುತ್ತಾ ಸಾಗಿದ್ದು ಮಾರ್ಚ್ 2021 ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,23,902 ಕೋಟಿ ರೂಪಾಯಿ ನಷ್ಟಿದೆ. ಈ ಮೂಲಕ ಜಿಎಸ್‌ಟಿ ಪರಿಚಯಿಸಿದ ನಂತರ ಒಂದು ತಿಂಗಳಲ್ಲಿ ಸಂಗ್ರಹವಾದ ಅತಿ ದೊಡ್ಡ ಆದಾಯ ಸಂಗ್ರಹ ಇದಾಗಿದೆ.

 

ಇದರಲ್ಲಿ ಸಿಜಿಎಸ್‌ಟಿ 22,973 ಕೋಟಿ ರೂ., ಎಸ್‌ಜಿಎಸ್‌ಟಿ 29,329 ಕೋಟಿ ರೂ., ಐಜಿಎಸ್‌ಟಿ 62,842 ಕೋಟಿ ರೂ. ಮತ್ತು ಸೆಸ್ 8,757 ಕೋಟಿ ರೂ. ಎಂದು ಹಣಕಾಸು ಸಚಿವಾಲಯ ಪ್ರಕಟಿಸಿದೆ.

ಮಾರ್ಚ್‌ನಲ್ಲಿ 1.23 ಲಕ್ಷ ಕೋಟಿ ದಾಖಲೆಯ ಜಿಎಸ್‌ಟಿ ಆದಾಯ ಸಂಗ್ರಹ

ಕಳೆದ ವರ್ಷದ ಕೋವಿಡ್-19 ಲಾಕ್‌ಡೌನ್‌ನಲ್ಲಿ ಸಂಪೂರ್ಣ ನೆಲಕಚ್ಚಿದ್ದ ಆದಾಯ ಸಂಗ್ರಹವು ನಂತರ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಾ ಬಂದಿದ್ದು, ಇದೀಗ ಸತತ ಆರನೇ ತಿಂಗಳು ಜಿಎಸ್‌ಟಿ ಆದಾಯ ಸಂಗ್ರಹವು 1 ಲಕ್ಷ ಕೋಟಿ ರೂಪಾಯಿ ದಾಟಿದೆ. ಇದು ಆರ್ಥಿಕ ಚೇತರಿಕೆಯ ಸ್ಪಷ್ಟ ಸೂಚನೆಯಾಗಿದೆ ಮತ್ತು ತೆರಿಗೆ ಕುರಿತಾಗಿ ಆಡಳಿತವು ಕೈಗೊಂಡ ವಿವಿಧ ಕ್ರಮಗಳ ಪರಿಣಾಮವಾಗಿದೆ.

ಏಪ್ರಿಲ್‌ 1ರಿಂದ 50 ಕೋಟಿಗೂ ಅಧಿಕ ವಹಿವಾಟಿಗೆ ಜಿಎಸ್‌ಟಿ e-invoice ಕಡ್ಡಾಯ

ಸರ್ಕಾರವು ಸಿಜಿಎಸ್‌ಟಿಗೆ, 21,879 ಕೋಟಿ ಮತ್ತು ಐಜಿಎಸ್‌ಟಿಯಿಂದ ಎಸ್‌ಜಿಎಸ್‌ಟಿಗೆ, 17,230 ಕೋಟಿಗಳನ್ನು ಇತ್ಯರ್ಥಪಡಿಸಿದೆ. ಇದಲ್ಲದೆ, ಕೇಂದ್ರ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನಡುವಿನ 50:50 ಅನುಪಾತದಲ್ಲಿ ಐಜಿಎಸ್‌ಟಿ 28,000 ಕೋಟಿ ರೂಪಾಯಿಗಳನ್ನು ಇತ್ಯರ್ಥಪಡಿಸಿದೆ.

ಮಾರ್ಚ್ 2021 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್‌ಟಿಗೆ, 58,852 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ, 60,559 ಕೋಟಿ. ಜೊತೆಗೆ 30,000 ಕೋಟಿ ಪರಿಹಾರವನ್ನು ಬಿಡುಗಡೆ ಮಾಡಿದೆ.

English summary

March 2021 GST collection at Rs 1.23 lakh crore: Finance ministry

The GST revenues during March 2021 are the highest since introduction of GST. Rs 1.23 Lakh Crore
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X