For Quick Alerts
ALLOW NOTIFICATIONS  
For Daily Alerts

ಪ್ರಮುಖ 10 ಕಂಪನಿಗಳ ಪೈಕಿ 8 ಕಂಪನಿಗಳಿಗೆ 2.48 ಕೋಟಿ ರು ನಷ್ಟ!

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಎಂಟು ಕಂಪನಿಗಳು ಒಟ್ಟಾರೆ, 2,48,372.97ಕೋಟಿ ರು ಮೌಲ್ಯ ಕಳೆದುಕೊಂಡಿವೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಆರ್ ಬಿಐ ರೆಪೋ ದರ ಏರಿಕೆ, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಬ್ಯಾಂಕ್ ಬಡ್ಡಿದರ ಏರಿಕೆ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ. ಕಳೆದ ಎರಡು ವಾರದಿಂದ ರಿಲಯನ್ಸ್ ಭಾರಿ ನಷ್ಟ ಅನುಭವಿಸಿದೆ.

 

ಜಾಗತಿಕ ವಿದ್ಯಮಾನ, ವಿದೇಶಿ ಫಂಡ್ ಹರಿವು, ಎಲ್ಐಸಿ ಐಪಿಒ, ಆರ್ ಬಿಐ ರೆಪೋ ದರ ಏರಿಕೆ ನಂತರದ ಬದಲಾವಣೆಗಳು ಹೆಚ್ಚಿನ ವಹಿವಾಟು ಕಾಣದಂತೆ ಮಾಡಿವೆ. ಕಳೆದ ವಾರ ಟಿಸಿಎಸ್, ಇನ್ಫೋಸಿಸ್ ಭಾರಿ ಲಾಭ ಗಳಿಸಿದರೆ, ಐಸಿಐಸಿಸಿ ಮಾತ್ರ ನಷ್ಟ ಅನುಭವಿಸಿದೆ.

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 1.03 ಮತ್ತು ಸ್ಮಾಲ್ ಕ್ಯಾಪ್ ಶೆಡ್ 0.94 ರಷ್ಟು ಕುಸಿದಿದ್ದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಕುಸಿತ ಕಂಡಿವೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಿಂದ ಸಂಕಲಿಸಲಾದ 15 ಸೆಕ್ಟರ್ ಗೇಜ್‌ಗಳಲ್ಲಿ ಏಳು ಕೆಂಪು ಬಣ್ಣದಲ್ಲಿ ನೆಲೆಗೊಂಡಿವೆ. ಉಪ-ಸೂಚ್ಯಂಕಗಳಾದ ನಿಫ್ಟಿ ಬ್ಯಾಂಕ್, ನಿಫ್ಟಿ ಫೈನಾನ್ಷಿಯಲ್ ಸರ್ವಿಸಸ್ ಮತ್ತು ನಿಫ್ಟಿ ಮೆಟಲ್ ಅನುಕ್ರಮವಾಗಿ ಶೇಕಡಾ 1.23, 1.26 ಮತ್ತು 2.08 ರಷ್ಟು ಕುಸಿಯುವ ಮೂಲಕ ಸೂಚ್ಯಂಕವನ್ನು ದುರ್ಬಲಗೊಳಿಸಿವೆ.

ಕೊರೊನಾವೈರಸ್ ಹೊಸ ರೂಪಾಂತರಿ ಅಲೆಯಿಂದ ಷೇರುಪೇಟೆ ವಹಿವಾಟು ಭಾರಿ ನಷ್ಟ ಅನುಭವಿಸಿದ್ದವು, ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿದ್ದವು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ರಿಲಯನ್ಸ್ ಮೌಲ್ಯ ಕುಸಿತ

ರಿಲಯನ್ಸ್ ಮೌಲ್ಯ ಕುಸಿತ

ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 1,30,627.7 ಕೋಟಿ ರು ಕಳೆದುಕೊಂಡು 16,42,568.98 ಕೋಟಿ ರು ಮೌಲ್ಯ ತಲುಪಿದೆ. ಟಾಪ್ 10 ಮೌಲ್ಯಯುತ ಕಂಪನಿಗಳ ಪೈಕಿ ರಿಲಯನ್ಸ್ ಅತಿ ಹೆಚ್ಚು ನಷ್ಟ ಅನುಭವಿಸಿದೆ. ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 7,153.45 ಕೋಟಿ ರು ಕಳೆದುಕೊಂಡು 12,48,998.89 ಕೋಟಿ ರು ಮೌಲ್ಯಕ್ಕೆ ಕುಸಿದಿದೆ.

ಇನ್ಫೋಸಿಸ್ ಮೌಲ್ಯ

ಇನ್ಫೋಸಿಸ್ ಮೌಲ್ಯ

ಇದೇ ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 35,073.72 ಕೋಟಿ ರು ಮೌಲ್ಯ ಇಳಿಕೆ ಕಂಡು 3,97,189.84 ಕೋಟಿ ರು ತಲುಪಿದೆ. ದೇಶದ ಎರಡನೇ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ 16,869.36 ಕೋಟಿ ರು ಕುಸಿತ ಕಂಡು 6,32,432.92 ಕೋಟಿ ರು ತಲುಪಿದೆ.

ಹಿಂದೂಸ್ತಾನ್ ಯೂನಿಲಿವರ್
 

ಹಿಂದೂಸ್ತಾನ್ ಯೂನಿಲಿವರ್

ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 1,231.33 ಕೋಟಿ ರು ಹೆಚ್ಚಳ ಕಂಡು 3,53,200.33 ಕೋಟಿ ರು ಗೇರಿದೆ. ಹಿಂದೂಸ್ತಾನ್ ಯೂನಿಲಿವರ್ 10,514.42 ಕೋಟಿ ರು ಸೇರಿಸಿಕೊಂಡು 5,15,582.56 ಕೋಟಿ ರು ಗೇರಿದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,ಎಚ್‌ಡಿಎಫ್‌ಸಿ, ಭಾರ್ತಿ ಏರ್ ಟೆಲ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್

English summary

Market Valuation Of 8 Of Top 10 Firms Falls ₹ 2.48 Lakh Crore

Eight of the top-10 most valued firms - based on market capitalisation - lost a combined ₹ 2,48,372.97.
Story first published: Sunday, May 15, 2022, 11:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X