For Quick Alerts
ALLOW NOTIFICATIONS  
For Daily Alerts

ಮಾರುತಿ ಸುಜುಕಿಯಿಂದ ಬೆಂಗಳೂರಿನಲ್ಲೂ ಶುರುವಾಯಿತು ಕಾರು ಸಬ್ ಸ್ಕ್ರಿಪ್ಷನ್ ಸ್ಕೀಮ್

|

ಭಾರತದ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಇಂಡಿಯಾದಿಂದ ಗುರುವಾರ (ಸೆಪ್ಟೆಂಬರ್ 24, 2020) ಕಾರು ಸಬ್ ಸ್ಕ್ರಿಪ್ಷನ್ ಯೋಜನೆಯನ್ನು ಆರಂಭಿಸಿದೆ. ದೆಹಲಿ, ಎನ್ ಸಿಆರ್ (ನೋಯ್ಡಾ, ಗಾಜಿಯಾಬಾದ್, ಫರೀದಾಬಾದ್, ಗುರುಗ್ರಾಮ್) ಮತ್ತು ಬೆಂಗಳೂರಿನಲ್ಲಿ ಆರಂಭಿಸಿದೆ. ಗ್ರಾಹಕರು ಮಾಲೀಕತ್ವ ಪಡೆದುಕೊಳ್ಳದೆ ಹೊಸ ಕಾರನ್ನು ಬಳಸಬಹುದು.

ಎಲ್ಲ ಮೊತ್ತವನ್ನು ಒಳಗೊಂಡಂತೆ ತಿಂಗಳಿಗೆ ಇಂತಿಷ್ಟು ಶುಲ್ಕ ಎಂದು ಬರುತ್ತದೆ. ಅದರಲ್ಲಿ ಸಂಪೂರ್ಣ ನಿರ್ವಹಣೆ, ಇನ್ಷೂರೆನ್ಸ್, ರಸ್ತೆ ಬದಿ ನೆರವು ಒಳಗೊಂಡಿರುತ್ತದೆ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಹಾಗೂ ORIX ಆಟೋ ಇನ್ ಫ್ರಾಸ್ಟ್ರಕ್ಚರ್ ಸರ್ವೀಸಸ್ ಇಂಡಿಯಾ ಸಹಯೋಗದಲ್ಲಿ ಈ ಸಬ್ ಸ್ಕ್ರಿಪ್ಷನ್ ಪ್ಲಾನ್ ತರಲಾಗಿದೆ.

ಯಾವೆಲ್ಲ ಕಾರುಗಳ ಸಬ್ ಸ್ಕ್ರಿಪ್ಷನ್ ದೊರೆಯುತ್ತದೆ
 

ಯಾವೆಲ್ಲ ಕಾರುಗಳ ಸಬ್ ಸ್ಕ್ರಿಪ್ಷನ್ ದೊರೆಯುತ್ತದೆ

ಮಾರುತಿ ಸುಜುಕಿ ಅರೇನಾದಿಂದ ಹೊಸ ಸ್ವಿಫ್ಟ್, ಡಿಜೈರ್, ವಿಟಾರಾ ಬ್ರೆಜಾ, ಎರ್ಟಿಗಾ ಹಾಗೂ ನೆಕ್ಸಾದಿಂದ ಹೊಸ ಬಲೆನೋ, ಸಿಯಾಜ್ ಹಾಗೂ XL6 ಗ್ರಾಹಕರು ಆರಿಸಿಕೊಳ್ಳಬಹುದು. ಇನ್ನು ಎಷ್ಟು ಸಮಯ ಕಾರನ್ನು ಇರಿಸಿಕೊಳ್ಳುತ್ತಾರೆ ಎಂಬುದಕ್ಕೆ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅದು ಒಂದರಿಂದ ನಾಲ್ಕು ವರ್ಷ ಎಂದು ಆರಿಸಿಕೊಳ್ಳಬಹುದು. ಎಲ್ಲ ತೆರಿಗೆಯೂ ಸೇರಿ ಆರಂಭಿಕ ದರ ತಿಂಗಳಿಗೆ 14,463 ರುಪಾಯಿಯಿಂದ ಶುರುವಾಗುತ್ತದೆ. ಈ ಸಬ್ ಸ್ಕ್ರಿಪ್ಷನ್ ನಲ್ಲಿ ನಿರ್ವಹಣೆ, ಶೂನ್ಯ ಸವಕಳಿ (ಡಿಪ್ರಿಸಿಯೇಷನ್) ಇನ್ಷೂರೆನ್ಸ್ ಮತ್ತು 24X7 ರಸ್ತೆ ಬದಿ ನೆರವನ್ನು ಒಳಗೊಂಡಿರುತ್ತದೆ.

ಬಿಳಿ ಹಾಗೂ ಕಪ್ಪು ಬಣ್ಣದ ನಂಬರ್ ಪ್ಲೇಟ್

ಬಿಳಿ ಹಾಗೂ ಕಪ್ಪು ಬಣ್ಣದ ನಂಬರ್ ಪ್ಲೇಟ್

ಸಬ್ ಸ್ಕ್ರಿಪ್ಷನ್ ಅವಧಿ ಮುಗಿದ ಮೇಲೆ ಬೇರೆ ವಾಹನವನ್ನು ಗ್ರಾಹಕರು ಆರಿಸಿಕೊಳ್ಳಬಹುದು. ಅವಧಿ ವಿಸ್ತರಿಸಿಕೊಳ್ಳಬಹುದು ಅಥವಾ ಮಾರುಕಟ್ಟೆ ಬೆಲೆ ಎಷ್ಟಿದೆಯೋ ಅಷ್ಟು ಮೊತ್ತಕ್ಕೆ ಖರೀದಿ ಮಾಡಬಹುದು. ಮಾರುತಿ ಸುಜುಕಿ ಸಬ್ ಸ್ಕ್ರೈಬ್ ಅಡಿಯಲ್ಲಿ ಗ್ರಾಹಕರು ಬಿಳಿಯ ಬಣ್ಣದ ನಂಬರ್ ಪ್ಲೇಟ್ ಆಯ್ಕೆ ಮಾಡಬಹುದು. ಆಗ ಅದು ಆಕೆ ಅಥವಾ ಆತನ ಹೆಸರಲ್ಲಿ ನೋಂದಣಿ ಆಗುತ್ತದೆ. ಅಥವಾ ಕಪ್ಪು ಬಣ್ಣದ ನಂಬರ್ ಪ್ಲೇಟ್ ಆದಲ್ಲಿ ORIX ಹೆಸರಲ್ಲಿ ನೋಂದಣಿ ಆಗುತ್ತದೆ. ಮುಂದಿನ ಎರಡರಿಂದ ಮೂರು ವರ್ಷದಲ್ಲಿ 60 ನಗರಗಳಲ್ಲಿ ಈ ಸ್ಕೀಮ್ ತರಲು ಯೋಜನೆ ರೂಪಿಸಿದೆ. ಕಳೆದ ತಿಂಗಳು ಮಾರುತಿ ಸುಜುಕಿ ಇಂಡಿಯಾದಿಂದ ಮೈಲ್ಸ್ ಆಟೊಮೋಟಿವ್ ಟೆಕ್ನಾಲಜೀಸ್ ಸಹಯೋಗದಲ್ಲಿ ಹೈದರಾಬಾದ್ ಮತ್ತು ಪುಣೆಯಲ್ಲೂ ಪ್ರಾಯೋಗಿಕವಾಗಿ ಸಬ್ ಸ್ಕ್ರಿಪ್ಷನ್ ಪ್ರೋಗ್ರಾಂ ತಂದಿತ್ತು.

English summary

Maruti Suzuki India Launches Car Subscription Plan In Bengaluru And Other Cities

Maruti Suzuki India Limited (MSIL) has launched car subscription plan in Bengaluru and other cities on September 24, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X