For Quick Alerts
ALLOW NOTIFICATIONS  
For Daily Alerts

ಕಳೆದ ವಾರದ ಟಾಪ್ 10 ಮೌಲ್ಯ: ರಿಲಯನ್ಸ್ ಸಂಸ್ಥೆಗೆ ಭಾರಿ ನಷ್ಟ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಒಟ್ಟಾರೆ 2,61,812.14 ಕೋಟಿ ರು ಮೌಲ್ಯ ಪಡೆದುಕೊಂಡಿವೆ. ಕಳೆದ ವಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಭಾರಿ ನಷ್ಟ ಅನುಭವಿಸಿದೆ. ಕಳೆದ ವಾರ ರಿಲಯನ್ಸ್ ಭಾರಿ ಲಾಭ ಗಳಿಸಿತ್ತು. ಇನ್ಫೋಸಿಸ್ ಹಾಗೂ ವಿಪ್ರೋ ಭಾರಿ ಲಾಭ ಗಳಿಸಿವೆ.

 

ಬಿಎಸ್ಇಯಲ್ಲಿ 30 ಷೇರುಗಳು ಸೆನ್ಸೆಕ್ಸ್ 1,774.93 ಅಂಕ ಅಥವಾ ಶೇ 3.01 ರಷ್ಟು ಗಳಿಕೆ ಕಂಡಿತ್ತು. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚು ಕಂಪನಿ ಮೌಲ್ಯ ಗಳಿಸಿಕೊಂಡಿವೆ. ಟಾಪ್ 10 ರಲ್ಲಿ 8 ಕಂಪನಿಗಳ ಮೌಲ್ಯ ಬದಲಾಗಿದೆ. ಓಮಿಕ್ರಾನ್ ಭೀತಿ ನಡುವೆ ಷೇರುಪೇಟೆಯಲ್ಲಿ ಸುಧಾರಣೆ ಕಂಡು ಬಂದಿದೆ.

ಕೊರೊನಾವೈರಸ್ ಹೊಸ ರೂಪಾಂತರಿ ಅಲೆಯಿಂದ ಷೇರುಪೇಟೆ ವಹಿವಾಟು ಭಾರಿ ನಷ್ಟ ಅನುಭವಿಸಿದ್ದವು, ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ರಿಲಯನ್ಸ್ ಇಂಡಸ್ಟ್ರೀಸ್ ಮಾತ್ರ ಟಾಪ್ 10 ಪಟ್ಟಿಯಲ್ಲಿ ಲಾಭ ಗಳಿಸಿದ ಸಾಧನೆ ಮಾಡಿದೆ. ಕಳೆದ ವಾರ ಹೆಚ್ಚಿನ ಲಾಭವನ್ನು ಟಾಪ್ ಕಂಪನಿಗಳು ಕಂಡಿವೆ. ರಜೆಗಳ ನಡುವೆ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಹೆಚ್ಚಾಗಿದ್ದರೂ ಟಾಪ್ ಕಂಪನಿಗಳು ಸುಧಾರಣೆ ಅನುಭವಿಸಿವೆ. ಯಾವ ಕಂಪನಿ ಮೌಲ್ಯ ಏರಿಕೆಯಾಗಿದೆ ಹಾಗೂ ಯಾವ ಕಂಪನಿ ಮೌಲ್ಯ ಕುಸಿದಿದೆ ಎಂಬ ವಿವರ ಮುಂದೆ ಓದಿ..

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ 79,658.02 ಕೋಟಿ ರು ಇಳಿಕೆ ಕಂಡು 15,83,118.61 ರು ಆಗಿದೆ. ಎಚ್‌ಡಿಎಫ್‌ಸಿ 34,690.09 ಕೋಟಿ ರು ಮೌಲ್ಯ ಹೆಚ್ಚಳ ಕಂಡು 4,73,922.86 ಕೋಟಿ ರು ತಲುಪಿದೆ. ಬಜಾಜ್ ಫೈನಾನ್ಸ್ 33,152.42 ಕೋಟಿ ರು ಇಳಿಸಿಕೊಂಡು 4,16,594.78 ಕೋಟಿ ರುಗೆ ಹೆಚ್ಚಳ ಕಂಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 27,298.3 ಕೋಟಿ ರು ಇಳಿಕೆ ಕಂಡು 8,16,229.89 ಕೋಟಿ ರು ತಲುಪಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 24,083.31ಕೋಟಿ ರು ಇಳಿಕೆ ಕಂಡು 5,24,052.84 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 24,051.83 ಕೋಟಿ ರು ಇಳಿಸಿಕೊಂಡು 4,17,448.70 ಕೋಟಿ ರು ಮೌಲ್ಯಕ್ಕೇರಿದೆ.

ಐಸಿಐಸಿಐ ಬ್ಯಾಂಕ್
 

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್ 20,623.35 ಕೋಟಿ ರು ಇಳಿಕೆ ಕಂಡು 5,05,547.14 ಕೋಟಿ ರು ತಲುಪಿದೆ. ಇದೇ ವೇಳೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 18,254.82 ಕೋಟಿ ರು ಕುಸಿತ ಕಂಡು 13,26,923.71 ಕೋಟಿ ರು ಮೌಲ್ಯ ಕಂಡಿದೆ.

ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ

ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ

ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಕಳೆದ ಒಂದು ವಾರದಲ್ಲಿ 26,515.92 ಕೋಟಿ ರು ಮೌಲ್ಯ ಏರಿಸಿಕೊಂಡು 7,66,123.04 ಕೋಟಿ ರು ಮೌಲ್ಯ ಹೊಂದಿದೆ. ವಿಪ್ರೋ ಮೌಲ್ಯ 17,450.39 ಕೋಟಿ ರು ಏರಿಕೆ ಕಂಡು 3,67,126.39 ಕೋಟಿ ರು ಗೆ ಏರಿಕೆಯಾಗಿದೆ.

ಒಟ್ಟಾರೆ, ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್ ಹಾಗೂ ವಿಪ್ರೋ.

English summary

Mcap of eight of top-10 most valued companies erodes by over Rs 2.61 lakh cr

Eight of the top-10 most valued companies suffered a combined erosion of Rs 2,61,812.14 crore in market valuation last week, with Reliance Industries emerging as the biggest laggard.
Story first published: Sunday, December 19, 2021, 12:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X