For Quick Alerts
ALLOW NOTIFICATIONS  
For Daily Alerts

ಮರ್ಸಿಡೀಸ್ ಬೆಂಜ್ ಕಾರು ಆಫರ್: ಕಡಿಮೆ ಇಎಂಐ, 10 ವರ್ಷದ ರೀ ಪೇಮೆಂಟ್

|

ಮರ್ಸಿಡೀಸ್ ಬೆಂಜ್ ಕಾರನ್ನು ಖರೀದಿ ಮಾಡುವುದನ್ನು ಉತ್ತೇಜಿಸಬೇಕು ಎಂಬ ಕಾರಣಕ್ಕೆ ನಾನಾ ಆಫರ್ ಗಳನ್ನು ನೀಡಲಾಗುತ್ತಿದೆ. ಇಎಂಐ ಹಾಲಿಡೇಸ್, ಸಾಲ ಮರುಪಾವತಿ ಅವಧಿ ವಿಸ್ತರಣೆ, ಅತ್ಯಂತ ಕಡಿಮೆ ಇಎಂಐ ಸೇರಿದಂತೆ ವಿವಿಧ ಆಫರ್ ಗಳನ್ನು ನೀಡಲಾಗುತ್ತಿದೆ. ಮರ್ಸಿಡೀಸ್ ಬೆಂಜ್ ನಿಂದ 'ವಿಷ್ ಬಾಕ್ಸ್ 2.0' ಸಿದ್ಧಪಡಿಸಲಾಗಿದೆ.

 

ಇದರಲ್ಲಿ ಸಾಲದ ಅವಧಿಯನ್ನು 10 ವರ್ಷದ ತನಕ ನೀಡಲಾಗುತ್ತದೆ. ಇನ್ನು ಇಎಂಐ ವಿಚಾರಕ್ಕೆ ಬಂದರೆ ಲಕ್ಷ ರುಪಾಯಿಗೆ 1499 ರುಪಾಯಿ ಇಎಂಐ ಹಾಗೂ ಖರೀದಿಯ ನಂತರ ಮೊದಲ ಮೂರು ತಿಂಗಳು ಇಎಂಐ ಹಾಲಿಡೇ ಸಹ ಇದೆ. ವಿಷ್ ಬಾಕ್ಸ್ 2.0 ಮರ್ಸಿಡೀಸ್ ಬೆಂಜ್ ಸಿ ಕ್ಲಾಸ್, ಇ ಕ್ಲಾಸ್ ಮತ್ತು ಜಿಎಲ್ ಸಿ ಮಾಡೆಲ್ ಗಳಿಗೆ ಅನ್ವಯ ಆಗುತ್ತದೆ.

ಕೊರೊನಾ ಎಫೆಕ್ಟ್‌: ಆನ್‌ಲೈನ್‌ನಲ್ಲೇ BMW, ಮರ್ಸಿಡಿಸ್, ವೋಕ್ಸ್‌ವಾಗನ್ ಕಾರುಗಳ ಮಾರಾಟ

ವೈದ್ಯರಿಗೆ 1 ಲಕ್ಷ ರುಪಾಯಿಯ ಹೆಚ್ಚುವರಿ ಅನುಕೂಲ ನೀಡಲಾಗುತ್ತಿದೆ. ಕೊರೊನಾ ಕಾರಣಕ್ಕೆ ವಿಲಾಸಿ ಕಾರುಗಳ ಮಾರಾಟ ಕುಸಿದುಹೋಗಿರುವ ಸಂದರ್ಭದಲ್ಲಿ ಈ ಆಫರ್ ಗಳನ್ನು ನೀಡಲಾಗುತ್ತಿದೆ. ಜನವರಿ- ಮಾರ್ಚ್ ಮಧ್ಯೆ 7 ಸಾವಿರ ವಿಲಾಸಿ ಕಾರುಗಳನ್ನಷ್ಟೇ ಮಾರಲಾಗಿದೆ.

ಮರ್ಸಿಡೀಸ್ ಬೆಂಜ್ ಕಾರು ಆಫರ್: ಕಡಿಮೆ ಇಎಂಐ, 10 ವರ್ಷದ ರೀ ಪೇಮೆಂಟ್

ಆಡಿ ಇಂಡಿಯಾದಿಂದ ಸರ್ವೀಸ್ ಪ್ಯಾಕೇಜ್ ಗಳನ್ನು 8 ವರ್ಷ ಮತ್ತು ವಾರಂಟಿಯನ್ನು 7 ವರ್ಷ ಹಾಗೂ ರೋಡ್ ಸೈಡ್ ಅಸಿಸ್ಟೆನ್ಸ್ ಅನ್ನು 11 ವರ್ಷದ ತನಕ ವಿಸ್ತರಿಸಲಾಗಿದೆ. ಇದರ ಜತೆಗೆ ಸುಲಭವಾದ ಸಾಲ ಮರುಪಾವತಿ ಯೋಜನೆಗಳನ್ನು ಸಹ ರೂಪಿಸಲಾಗಿದೆ ಎಂದು ತಿಳಿಸಲಾಗಿದೆ.

ವೋಲ್ವೊದಿಂದ ಬಿಎಸ್ 4 ಬೆಲೆಗೆ ಬಿಎಸ್ 6 ಕಾರುಗಳನ್ನು ಮಾರಾಟ ಮಾಡಲಾಗುತ್ತದೆ.

English summary

Mercedes Benz Offering Attractive Offer For Car Purchase

Mercedes, Audi and Volvo providing attractive offers to customers during Corona days.
Story first published: Tuesday, May 26, 2020, 12:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X