For Quick Alerts
ALLOW NOTIFICATIONS  
For Daily Alerts

ಹೊಸ ರೂಪದ SUV Astor ಕಾರು ಬಿಡುಗಡೆ ಮಾಡಿದ ಎಂಜಿ ಮೋಟಾರ್

|

ಪ್ರಮುಖ ಕಾರು ಉತ್ಪಾದಕ ಸಂಸ್ಥೆಗಳಲ್ಲಿ ಒಂದಾದ MG ಮೋಟಾರ್ ಆಸ್ಟರ್( Astor) ಸ್ಯಾವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

 

ಇದು ಕಳೆದ ಕೆಲ ತಿಂಗಳಿಂದ ಈ ಎಸ್‌ಯುವಿ ಕಾರಿನ ಬಗ್ಗೆ ಸಾಕಷ್ಟು ಚರ್ಚೆ ಹಾಗೂ ಕುತೂಹಲಗಳು ಏರ್ಪಟ್ಟಿದ್ದವು. ಭಾರತದಲ್ಲಿ ಈ ಎಸ್‌ಯುವಿ ಕಾರು ಬಿಡುಗಡೆಯಾಗಿದ್ದು,ಆರಂಭಿಕ ದರವು 9.78. ಲಕ್ಷ ರೂ.ದ್ದಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸ ಒಳಗೊಂಡಿರುವ ಆಸ್ಟರ್ ವಾಹನವು ಪ್ರೀಮಿಯಂ ಮಧ್ಯಮ ಗಾತ್ರದ ಎಸ್ಯುವಿ ವಿಭಾಗದಲ್ಲಿ ಸ್ಥಾನ ಪಡೆದಿದೆ. ಸ್ಟೈಲ್‌ ಸೇರಿದಂತೆ ಸೂಪರ್, ಸ್ಮಾರ್ಟ್, ಮತ್ತು ಟಾಪ್-ಆಫ್-ದಿ-ಲೈನ್ ಶಾರ್ಪ್‌ ಶ್ರೇಣಿಗಳಲ್ಲಿ ಗ್ರಾಹಕರು ಈ ವಾಹನವನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೊಸ ರೂಪದ SUV Astor ಕಾರು ಬಿಡುಗಡೆ ಮಾಡಿದ ಎಂಜಿ ಮೋಟಾರ್

ಎಂಜಿ ಆಸ್ಟರ್ ಪ್ರಮಾಣಿತ 3-3-3 ಪ್ಯಾಕೇಜ್‌ನೊಂದಿಗೆ ಬರುತ್ತದೆ. ಇದರಲ್ಲಿ ಮೂರು ವರ್ಷಗಳ ಖಾತರಿ/ಅನಿಯಮಿತ ಕಿಲೋಮೀಟರ್, ಮೂರು ವರ್ಷಗಳ ರಸ್ತೆಬದಿಯ ಸಹಾಯ ಮತ್ತು ಮೂರು ಕಾರ್ಮಿಕರಹಿತ ಆವರ್ತಕ ಸೇವೆಗಳು.

ಅನನ್ಯ ವೈ ಎಂಜಿ ಶೀಲ್ಡ್ ಪ್ರೋಗ್ರಾಂನೊಂದಿಗೆ ಆಸ್ಟರ್ ಗ್ರಾಹಕರು ತಮ್ಮ ಮಾಲೀಕತ್ವದ ಪ್ಯಾಕೇಜ್ ಅನ್ನು ಖಾತರಿ ವಿಸ್ತರಣೆ ಮತ್ತು ಸಂರಕ್ಷಣಾ ಯೋಜನೆಗಳೊಂದಿಗೆ ಆಯ್ಕೆ ಮಾಡಲು ಮತ್ತು ವೈಯಕ್ತೀಕರಿಸಲು ನಮ್ಯತೆಯನ್ನು ಹೊಂದಿದ್ದಾರೆ.

ಆಸ್ಟರ್‌ನ ಮಾಲೀಕತ್ವ ವೆಚ್ಚವು ಪ್ರತಿ ಕಿಲೋಮೀಟರಿಗೆ 47 ಪೈಸೆ ಮಾತ್ರ ಇದ್ದು ಒಂದು ಲಕ್ಷ ಕಿಲೋಮೀಟರ್‌ಗಳವರೆಗೆ ಇದೇ ವೆಚ್ಚವನ್ನು ಗ್ರಾಹಕರು ಭರಿಸಬೇಕಾಗುತ್ತದೆ. ಆಸ್ಟರ್ ಸೆಗ್ಮೆಂಟ್ ಮೊದಲ 3-60 ಪ್ರೋಗ್ರಾಂನೊಂದಿಗೆ ಬರುತ್ತದೆ. ಖಾತರಿಯ ಮರುಪಾವತಿ ಯೋಜನೆ ಅಡಿಯಲ್ಲಿ ಗ್ರಾಹಕರು ಮೂರು ವರ್ಷಗಳ ಖರೀದಿಯ ನಂತರ ಆಸ್ಟರ್‌ನ ಎಕ್ಸ್-ಶೋರೂಂ ಬೆಲೆಯ 60 ಪ್ರತಿಶತವನ್ನು ಪಡೆಯುತ್ತಾರೆ.

ಕಾರ್ಯಕ್ರಮದ ಕಾರ್ಯಗತಗೊಳಿಸಲು ಎಂಜಿ ಇಂಡಿಯಾ ಕಾರ್ಡೆಖೋ ಜೊತೆ ಪಾಲುದಾರಿಕೆ ಹೊಂದಿದೆ ಮತ್ತು ಆಸ್ಟರ್ ಗ್ರಾಹಕರು ಇದನ್ನು ಪ್ರತ್ಯೇಕವಾಗಿ ಪಡೆಯಬಹುದು.

ಆಸ್ಟರ್ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ, ಹಾಗೆಯೇ ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಮತ್ತು ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ವಿವಿಧ ವೆರಿಯೆಂಟ್‌ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.78 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.78 ಲಕ್ಷ ಬೆಲೆ ಹೊಂದಿದೆ.

 

ನೂತನ ಕಾರಿನಲ್ಲಿರುವ 1.5-ಲೀಟರ್ ಪೆಟ್ರೋಲ್ ಮಾದರಿಯು 5 ಸ್ಪೀಡ್ ಮ್ಯಾನುವಲ್ ಅಥವಾ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 108-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.3-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 138-ಬಿಎಚ್‌ಪಿ, 220-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಶಾರ್ಪ್ ವೆರಿಯೆಂಟ್, ಸ್ಟೈಲ್, ಸೂಪರ್, ಸ್ಮಾರ್ಟ್ ಬಿಡುಗಡೆ ಮಾಡಿದ್ದ ಎಂಜಿ ಕಂಪನಿಯು ಇದೀಗ ಹೊಸದಾಗಿ ಸ್ಯಾವಿ ಎನ್ನುವ ಟಾಪ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಸ್ಮಾರ್ಟ್ ಮತ್ತು ಶಾರ್ಪ್ ನಡುವಿನ ಸ್ಥಾನದೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 16.78 ಲಕ್ಷ ಬೆಲೆ ಹೊಂದಿದೆ.

ಈ ಕಾರಿನಲ್ಲಿರುವ ಲೇನ್ ಕೀಪ್ ಅಸಿಸ್ಟ್, ಲೈನ್ ಡಿಫಾರ್ಚರ್ ಪ್ರಿವೆಷನ್, ಸ್ಪೀಡ್ ವಾರ್ನಿಂಗ್, ಇಂಟೆಲಿಜೆಂಟ್ ಮೋಡ್ ಹೊಂದಿರುವ ಸ್ಪಿಡ್ ಅಸಿಸ್ಟ್ ಸಿಸ್ಟಂ, ಮ್ಯಾನುವಲ್ ಮೋಡ್ ಹೊಂದಿರುವ ಸ್ಪೀಡ್ ಅಸಿಸ್ಟ್ ಸಿಸ್ಟಂ, ರಿಯರ್ ಡ್ರೈವ್ ಅಸಿಸ್ಟ್, ಲೈನ್ ಚೆಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್)ನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವಡ್ ಕೂಲಿಷನ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಮತ್ತು ಇಂಟೆಲಿಜೆಂಟ್ ಹೆಡ್‌ಲ್ಯಾಂಪ್ ಲೈಟಿಂಗ್ಸ್ ಕಂಟ್ರೋಲ್‌ಗಳಲಿವೆ.

ಹೊಸ ಕಾರು 4323 ಎಂಎಂ ಉದ್ದವಿದ್ದು, 1650 ಎಂಎಂ ಎತ್ತರ, 1809 ಎಂಎಂ ಅಗಲ ಹೊಂದಿದ್ದು, ಹೊಸ ಕಾರಿನಲ್ಲಿ ಕಂಪನಿಯು ಬ್ಲೂಟೂಥ್ ಪ್ರೇರಿತ ಡಿಜಿಟಲ್ ಕೀ ಸೌಲಭ್ಯವನ್ನು ಕೂಡ ನೀಡಿದೆ.

ಕ್ಯಾಬಿನ್ ಫೀಚರ್ಸ್ ವೃದ್ಧಿಸಲು ಫ್ರಂಟ್ ಅಂಡ್ ರಿಯಲ್ ಆರ್ಮ್ ರೆಸ್ಟ್, ಲೆದರ್ ಇಂಟಿರಿಯರ್, ರಿಯರ್ ಎಸಿ ವೆಂಟ್ಸ್, ಪಿಎಂ 2.5 ಕ್ಯಾಬಿನ್ ಫಿಲ್ಟರ್ ಜೊತೆಗೆ ಹೊಸ ಕಾರಿನ ಕನೆಕ್ಟೆಡ್ ಫೀಚರ್ಸ್‌ಗಳು ಕೂಡಾ ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿವೆ.

ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಆಕರ್ಷಕ ಬೆಲೆಯಲ್ಲಿ ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆಯನ್ನು ಪಡೆದುಕೊಂಡಿರುವ ಆಸ್ಟರ್ ಕಾರು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಸ್ಪೋರ್ಟಿ ವಿನ್ಯಾಸದೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಜೋಡಣೆ ಹೊಂದಿದೆ.

English summary

MG Astor’s Savvy Variant Launched In India; Most Affordable Car With ADAS

Just a few days ago, MG Motor India launched the all-new MG Astor mid-size SUV in the country. The MG Astor was priced between Rs 9.78 lakh – Rs 16.78 lakh, ex-showroom Delhi.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X