For Quick Alerts
ALLOW NOTIFICATIONS  
For Daily Alerts

ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ನೀಡುವುದರ ಅಪಾಯ ತೆರೆದಿಟ್ಟ ನಾಡೆಲ್ಲ

|

ಕೊರೊನಾದ ಹಿನ್ನೆಲೆಯಲ್ಲಿ ಟ್ವಿಟ್ಟರ್ ಸೇರಿದಂತೆ ಹಲವು ಟೆಕ್ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಶಾಶ್ವತವಾಗಿ 'ವರ್ಕ್ ಫ್ರಮ್ ಹೋಮ್' ನೀಡಲು ಮುಂದಾಗಿವೆ. "ಹೀಗೆ ಎಲ್ಲೋ ದೂರದಿಂದ ಕೆಲಸ ಮಾಡುವಂತಾದರೆ ಸಾಮಾಜಿಕ ಸಂವಾದ ಮತ್ತು ಉದ್ಯೋಗಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ. ವರ್ಚುವಲ್ ವಿಡಿಯೋ ಕಾಲ್ ಗಳು ಎಂದಿಗೂ ನೇರಾ ನೇರ ಚರ್ಚೆಗೆ ಬದಲಿ ಆಗಲು ಸಾಧ್ಯವಿಲ್ಲ" ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಅಭಿಪ್ರಾಯ ಪಟ್ಟಿದ್ದಾರೆ.

 

ನ್ಯೂಯಾರ್ಕ್ ಟೈಮ್ಸ್ ಜತೆಗಿನ ಸಂವಾದದಲ್ಲಿ ಮಾತನಾಡಿರುವ ಅವರು, ಎಲ್ಲವೂ ದೂರದಿಂದಲೇ ಕೆಲಸ ಆಗುವಂತಾದರೆ ಸಿದ್ಧಾಂತಗಳೇ ಬದಲಾಗಿ ಬಿಡುತ್ತದೆ. ಮಾನಸಿಕ ಆರೋಗ್ಯ ಏನಾಗಬೇಕು? ಸಂಪರ್ಕ ಮತ್ತು ಸಾಮುದಾಯಿಕ ಕಟ್ಟಡಗಳು ಹೇಗಾಗಬಹುದು? ನಾವೀಗ ಸಾಮಾಜಿಕ ಬಂಡವಾಳವೊಂದನ್ನು ನಾಶ ಮಾಡುತ್ತಿದ್ದೇವೆ ಅಂತ ನನಗೆ ಅನಿಸುತ್ತದೆ. ಅದಕ್ಕೆ ಏನು ಕ್ರಮ ತೆಗೆದುಕೊಳ್ತೀರಿ ಎಂದು ಪ್ರಶ್ನಿಸಿದ್ದಾರೆ.

ಟ್ವಿಟ್ಟರ್ ಮತ್ತಿತರ ಕಂಪೆನಿಗಳಿಂದ ಶಾಶ್ವತ ವರ್ಕ್ ಫ್ರಮ್ ಹೋಮ್

ಟ್ವಿಟ್ಟರ್ ಮತ್ತಿತರ ಕಂಪೆನಿಗಳಿಂದ ಶಾಶ್ವತ ವರ್ಕ್ ಫ್ರಮ್ ಹೋಮ್

ಕೊರೊನಾ ಮುಗಿದ ನಂತರವೂ ಟ್ವಿಟ್ಟರ್ ಸೇರಿದಂತೆ ಹಲವು ಕಂಪೆನಿಗಳು ಸಿಬ್ಬಂದಿಗೆ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ನೀಡಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಸತ್ಯ ನಾಡೆಲ್ಲ ಮಾತನಾಡಿದ್ದಾರೆ. ಈಗಾಗಲೇ ಆಲ್ಫಾಬೆಟ್ (ಗೂಗಲ್), ಫೇಸ್ ಬುಕ್ ಈ ವರ್ಷದ ಕೊನೆ ತನಕ ವರ್ಕ್ ಫ್ರಮ್ ಹೋಮ್ ಮಾಡುವಂತೆ ಸಿಬ್ಬಂದಿಗೆ ತಿಳಿಸಿದೆ.

ಮೈಕ್ರೋಸಾಫ್ಟ್ ಬಳಿ 140 ಬಿಲಿಯನ್ ಡಾಲರ್ ನಗದು

ಮೈಕ್ರೋಸಾಫ್ಟ್ ಬಳಿ 140 ಬಿಲಿಯನ್ ಡಾಲರ್ ನಗದು

ಇನ್ನು ಮೈಕ್ರೋಸಾಫ್ಟ್ ನಿಂದ ಅಕ್ಟೋಬರ್ ತನಕವಾದರೂ ವರ್ಕ್ ಫ್ರಮ್ ಹೋಮ್ ವಿಸ್ತರಿಸಲಾಗಿದೆ. ಕಂಪೆನಿಯ ಷೇರು ಈ ವರ್ಷ 14 ಪರ್ಸೆಂಟ್ ಏರಿಕೆ ಆಗಿದ್ದು, ಕಂಪೆನಿಯ ಬಳಿ 140 ಬಿಲಿಯನ್ (ಒಂದು ಬಿಲಿಯನ್ ಗೆ ನೂರು ಕೋಟಿ) ಅಮೆರಿಕನ್ ಡಾಲರ್ ನಗದು ಇದೆ. ಈಚೆಗೆ ಮೈಕ್ರೋಸಾಫ್ಟ್ ಷೇರು ಬೈ ಬ್ಯಾಕ್ ಹಾಗೂ ಡಿವಿಡೆಂಡ್ ಗೆ 10 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ಒಂದು ವರ್ಷದ ಹಿಂದಿನ ದರಕ್ಕಿಂತ ಮೂವತ್ತು ಪರ್ಸೆಂಟ್ ಏರಿದೆ.

ಸಾಲ ನೀಡಲು ಯೋಜನೆ
 

ಸಾಲ ನೀಡಲು ಯೋಜನೆ

ಸಣ್ಣ ವ್ಯಾಪಾರ, ಉದ್ಯಮಗಳಿಗೆ ಹಾಗೂ ಸಂಸ್ಥೆಗಳಿಗೆ ಸಾಲ ನೀಡುವ ಮೂಲಕ ಸಹಾಯ ಮಾಡುತ್ತಿದೆ ಮೈಕ್ರೋಸಾಫ್ಟ್. ಭಾರತದ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರ- ಉದ್ಯಮಗಳಿಗೆ ನೆರವಾಗುವ ಉದ್ದೇಶದಿಂದಲೇ ಮೈಕ್ರೋಸಾಫ್ಟ್ ಹೊಸ ಸಲ್ಯೂಷನ್ ಆರಂಭಿಸಿದೆ. ಆ ಮೂಲಕ ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ ನಿರಂತರವಾಗಿ ವ್ಯಾಪಾರ- ಉದ್ಯಮ ಮುಂದುವರಿಸಲು ಸಾಧ್ಯವಾಗಲಿದೆ.

English summary

Microsoft CEO Satya Nadella Concerned Over 'Work From Home' Forever

Some of the companies including Twitter giving work from home forever for it's employees due to Corona. What Microsoft CEO tell about this?
Story first published: Monday, May 18, 2020, 10:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X