For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಪಾಠ ಹೇಳಿಕೊಡಲು 12 ವಾರಗಳ ಸಂಬಳಸಹಿತ ರಜೆ ಕೊಟ್ಟ ಮೈಕ್ರೋಸಾಫ್ಟ್

|

ಕೊರೊನಾ ವ್ಯಾಪಕವಾಗಿ ಹರಡಿ, ಲಾಕ್ ಡೌನ್- ಸೀಲ್ ಡೌನ್ ಅಂತೆಲ್ಲ ಆಗುತ್ತಿದೆ. ಜತೆಗೆ ಮುಂದೆ ಉದ್ಯೋಗದ ಗತಿ ಏನಪ್ಪ ಅಂತ ಹಲವರು ಯೋಚನೆ ಮಾಡುತ್ತಿದ್ದಾರೆ. ಅಂಥದ್ದರಲ್ಲಿ ಶಾಲೆಗೆ ಬೀಗ ಹಾಕಿ, ರಜಾ ಘೋಷಿಸಿರುವ ಈ ಸನ್ನಿವೇಶದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲು ಸಂಬಳ ಸಹಿತ ರಜಾ ನೀಡಲಾಗಿದೆ ಅಂದರೆ ನಂಬುತ್ತೀರಾ?

 

ಮೈಕ್ರೋಸಾಫ್ಟ್ ಕಂಪೆನಿಯು ತನ್ನ ಉದ್ಯೋಗಿಗಳಿಗೆ ಹನ್ನೆರಡು ವಾರಗಳ ಸಂಬಳ ಸಹಿತ ರಜಾ ನೀಡಿದೆ. ಅಷ್ಟೇ ಅಲ್ಲ, ಆ ರಜೆಯನ್ನು ಎರಡು ವಿಧದಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಒಂದೇ ಸಲ ಹನ್ನೆರಡು ವಾರ ತೆಗೆದುಕೊಳ್ಳಬಹುದು ಅಥವಾ ವಾರದಲ್ಲಿ ಕೆಲವು ದಿನ ತೆಗೆದುಕೊಳ್ಳಬಹುದು. ಈ ಬಗ್ಗೆ ಸಿಎನ್ ಎನ್ ವರದಿ ಮಾಡಿದೆ.

ಜೆಫ್ ಬೆಜೋಸ್ ವಿಶ್ವದ ನಂಬರ್ 1 ಶ್ರೀಮಂತ: ಸುದ್ದಿ ಆಗಿರೋದು ನಂಬರ್ 22

"12 - Week Paid Pandemic School and Childcare Closure Leave" ಎಂದು ಈ ಅಭಿಯಾನಕ್ಕೆ ಹೆಸರು ನೀಡಲಾಗಿದೆ. ಜಾಗತಿಕ ಮಟ್ಟದಲ್ಲಿ ಹೆಸರಾದ ಟೆಕ್ ಕಂಪೆನಿಗಳು ನಗದು ಮೀಸಲು ಸಮಸ್ಯೆ ಇದ್ದರೂ ತಮ್ಮ ಕಂಪೆನಿ ಉದ್ಯೋಗಿಗಳ ನೆರವಿಗೆ ಹಲವು ಕ್ರಮಗಳನ್ನು ಘೋಷಿಸಿವೆ.

ಮಕ್ಕಳಿಗೆ ಪಾಠ ಹೇಳಲು 12 ವಾರಗಳ ಸಂಬಳಸಹಿತ ರಜೆ ಕೊಟ್ಟ ಮೈಕ್ರೋಸಾಫ್ಟ್

ಕಳೆದ ತಿಂಗಳು ಫೇಸ್ ಬುಕ್ ನಿಂದ 45 ಸಾವಿರ ಸಿಬ್ಬಂದಿಗೆ ತಲಾ 1 ಸಾವಿರ USD ನೀಡುವುದಾಗಿ ಘೋಷಿಸಿತ್ತು. ಇನ್ನು ಕಂಪೆನಿಯ ಸಿಇಒ ಮಾರ್ಕ್ ಝುಕರ್ ಬರ್ಗ್ ಆಂತರಿಕ ಸುತ್ತೋಲೆ ಹೊರಡಿಸಿದ್ದು, ಆರು ತಿಂಗಳು ಮಾಡಿದ ಕೆಲಸವನ್ನು ಪರಿಶೀಲಿಸಿ ಅದಕ್ಕೆ ತಕ್ಕಂತೆ ಪೂರ್ತಿ ಬೋನಸ್ ನೀಡುವುದಾಗಿ ಹೇಳಿದ್ದಾರೆ.

ಯುನೆಸ್ಕೋ ನೀಡಿದ ಮಾಹಿತಿ ಪ್ರಕಾರ, ವಿಶ್ವದ ಹಲವು ದೇಶಗಳ ಸರ್ಕಾರಗಳು ಕೊರೊನಾ ಆತಂಕದಲ್ಲಿ ಶಿಕ್ಷಣ ಸಂಸ್ಥೆಗಳು ಬಾಗಿಲು ಮುಚ್ಚಿವೆ. ವಿಶ್ವದಾದ್ಯಂತ ಇರುವ ಶೇಕಡಾ 91ರಷ್ಟು ವಿದ್ಯಾರ್ಥಿ ಸಮೂಹಕ್ಕೆ ಇದರಿಂದ ಸಮಸ್ಯೆಯಾಗಿದೆ.

English summary

Microsoft Giving 3 Months Paid Parental Leave To Help Kids To Study

World's leading technology company giving 3 month paid parental leave to help kids study during school suht down due to Corona.
Story first published: Friday, April 10, 2020, 15:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X