For Quick Alerts
ALLOW NOTIFICATIONS  
For Daily Alerts

ಮೈಂಡ್ ಟ್ರೀ: ಜನವರಿ 1 ರಿಂದ ಅನ್ವಯವಾಗುವಂತೆ ಸಂಬಳ ಏರಿಕೆ

|

ಪ್ರಮುಖ ಐಟಿ ಸಂಸ್ಥೆ ಮೈಂಡ್ ಟ್ರೀ ತನ್ನ ಉದ್ಯೋಗಿಗಳಿಗೆ ಸಂಬಳ ಏರಿಕೆ ಘೋಷಿಸಿದೆ. ಜನವರಿ 1,2021 ರಿಂದ ಅನ್ವಯವಾಗುವಂತೆ ಸುಮಾರು 21,827 ಮಂದಿ ಉದ್ಯೋಗಿಗಳಿಗೆ ಸಂಬಳ ಏರಿಕೆ ಸಿಗಲಿದೆ.

 

2ನೇ ತ್ರೈಮಾಸಿಕದ ಬಳಿಕ ಸಂಬಳ ಇಂಕ್ರೀಮೆಂಟ್ ಗಳನ್ನು ನೀಡಲು ಮುಂದಾಗಿದ್ದು, ಜನವರಿ 1, 2021ರಿಂದ ಜಾರಿಗೆ ತರಲಾಗುತ್ತದೆ ಎಂದು ಮೈಂಡ್ ಟ್ರೀ ಮುಖ್ಯ ಕಾರ್ಯಕಾರಿ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ದೇಬಶೀಶ್ ಚಟರ್ಜಿ ಹೇಳಿದರು. ವ್ಯಾಪಾರ ವಹಿವಾಟಿನ ಅಗತ್ಯಕ್ಕೆ ತಕ್ಕಂತೆ ಹೊಸ ನೇಮಕಾತಿ ಕೂಡಾ ನಡೆಯಲಿದೆ ಎಂದರು.

ಇತ್ತೀಚೆಗೆ ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಕೂಡಾ ತ್ರೈಮಾಸಿಕ ವರದಿ ಪ್ರಕಟಿಸಿದ ಬೆನ್ನಲ್ಲೇ ಉದ್ಯೋಗಿಗಳಿಗೆ ಸಂಬಳ ಏರಿಕೆ , ಬಡ್ತಿ ಘೋಷಿಸಿತ್ತು. ಕಳೆದ ವಾರ ಟಿಸಿಎಸ್ ಕೂಡಾ ತನ್ನ ಉದ್ಯೋಗಿಗಳಿಗೆ ಅಕ್ಟೋಬರ್ 01ರಿಂದ ಜಾರಿಗೆ ಬರುವಂತೆ ಸಂಬಳ ಏರಿಕೆ ಮಾಡಿದೆ.

ಮೈಂಡ್ ಟ್ರೀ: ಜನವರಿ 1 ರಿಂದ ಅನ್ವಯವಾಗುವಂತೆ ಸಂಬಳ ಏರಿಕೆ

ಮೈಂಡ್ ಟ್ರೀ ವಿಷಯಕ್ಕೆ ಬಂದರೆ, ಕಳೆದ ತ್ರೈಮಾಸಿಕದಲ್ಲಿ ಡಾಲರ್ ಮಾದರಿಯಲ್ಲಿ ನಿವ್ವಳ ಲಾಭ ಶೇ 79.2% ರಂತೆ 34.3 ಮಿಲಿಯನ್ ಡಾಲರ್ ಗಳಿಸಿದೆ. ಶೇ 3.7ರಂತೆ 261 ಮಿಲಿಯನ್ ಡಾಲರ್ ನಂತೆ ಆದಾಯ ಕುಸಿದಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಕ್ಲೈಂಟ್ ಸಂಖ್ಯೆ 283ಕ್ಕೇರಿದೆ. ಈ ತ್ರೈಮಾಸಿಕದಲ್ಲಿ 8 ಹೊಸ ಕ್ಲೈಂಟ್ ಗಳನ್ನು ಸೇರಿಸಲಾಗಿದೆ. ತ್ರೈಮಾಸಿಕ ವರದಿ ಪ್ರಕಟಿಸಿದ ಬೆನ್ನಲ್ಲೇ ಮಧ್ಯಂತರ ಡಿವಿಡೆಂಟ್ 7.5 ರು ಪ್ರತಿ ಈಕ್ವಿಟಿ ಷೇರುಗಳಂತೆ ಘೋಷಿಸಲಾಗಿದೆ.

English summary

Mindtree Announces Salary Hike For Employees, Effective January 1

IT firm Mindtree has said that it will undertake salary hike for employees effective January, joining many other peers in rolling out pay hikes for staff. Mindtree had 21,827 employees at the end of the September quarter.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X