For Quick Alerts
ALLOW NOTIFICATIONS  
For Daily Alerts

ಮೊಬೈಲ್ ಬಳಕೆದಾರರಿಗೆ ಸದ್ಯದಲ್ಲೇ ಟೆಲಿಕಾಂ ಕಂಪೆನಿಗಳಿಂದ ಬೆಲೆ ಏರಿಕೆ ಶಾಕ್

|

ಮೊಬೈಲ್ ಬಳಸುವವರಾಗಿದ್ದರೆ ಕಾಲ್ ಹಾಗೂ ಡೇಟಾಗಾಗಿ ಕನಿಷ್ಠ 10% ಹೆಚ್ಚು ಬೆಲೆ ಏರಿಕೆ ಎದುರಿಸುವುದಕ್ಕೆ ಸಿದ್ಧರಾಗಿ. ಭಾರ್ತಿ ಏರ್ ಟೆಲ್ ಹಾಗೂ ವೊಡಾಫೋನ್ ಐಡಿಯಾ ಕಂಪೆನಿಗಳು ಪಾವತಿಸಬೇಕಿರುವ ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ (AGR) ಬಾಕಿಯಲ್ಲಿ 10% ಮೊತ್ತವನ್ನು ಮುಂದಿನ 7 ತಿಂಗಳೊಳಗೆ ಪಾವತಿಸಬೇಕು. ಆದ್ದರಿಂದ ಗ್ರಾಹಕರು ಹೆಚ್ಚು ದರ ತೆರಬೇಕಾಗಬಹುದು ಎನ್ನುತ್ತಾರೆ ತಜ್ಞರು.

 

ಎಜಿಆರ್ ಬಾಕಿ ಪಾವತಿಗೆ ಟೆಲಿಕಾಂ ಕಂಪೆನಿಗಳಿಗೆ ಹತ್ತು ವರ್ಷದ ಕಾಲಾವಕಾಶ

ಸುಪ್ರೀಂ ಕೋರ್ಟ್ ಮಂಗಳವಾರ ಟೆಲಿಕಾಂ ಕಂಪೆನಿಗಳಿಗೆ ನಿರ್ದೇಶನ ನೀಡಿದೆ. ಮಾರ್ಚ್ 31, 2021ರೊಳಗೆ ಬಾಕಿ ಉಳಿಸಿಕೊಂಡಿರುವ ಎಜಿಆರ್ ಮೊತ್ತದ 10% ಪಾವತಿಸುವಂತೆ ತಿಳಿಸಿದೆ. ಆ ನಂತರ ಮಾರ್ಚ್ 31, 2022ರಿಂದ ಅನ್ವಯ ಆಗುವಂತೆ 10 ಕಂತುಗಳಲ್ಲಿ ಉಳಿಕೆ ಮೊತ್ತವನ್ನು ಕಟ್ಟುವಂತೆ ತಿಳಿಸಲಾಗಿದೆ.

ಏರ್ ಟೆಲ್ 2,600 ಕೋಟಿ, ವೊಡಾಫೋನ್ ಐಡಿಯಾ 5000 ಕೋಟಿ

ಏರ್ ಟೆಲ್ 2,600 ಕೋಟಿ, ವೊಡಾಫೋನ್ ಐಡಿಯಾ 5000 ಕೋಟಿ

ಈ ಆದೇಶದ ಅನ್ವಯ ಮುಂದಿನ ವರ್ಷದ ಮಾರ್ಚ್ ನೊಳಗೆ ಭಾರ್ತಿ ಏರ್ ಟೆಲ್ 2,600 ಕೋಟಿ ಹಾಗೂ ವೊಡಾಫೋನ್ ಐಡಿಯಾ 5000 ಕೋಟಿ ರುಪಾಯಿ ಪಾವತಿಸಬೇಕು. ಅದಕ್ಕಾಗಿ ಆವರೇಜ್ ರೆವೆನ್ಯೂ ಪರ್ ಯೂಸರ್ (ARPU) ಕ್ರಮವಾಗಿ 10% ಹಾಗೂ 27% ಹೆಚ್ಚಿಸಬೇಕಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಏರ್ ಟೆಲ್ ARPU ರು. 157 ಇದ್ದರೆ, ವೊಡಾಫೋನ್ ಐಡಿಯಾದು 114 ರುಪಾಯಿ ಇದೆ.

ಕನಿಷ್ಠ 10% ದರ ಏರಿಕೆ ಮಾಡಬೇಕಾಗುತ್ತದೆ

ಕನಿಷ್ಠ 10% ದರ ಏರಿಕೆ ಮಾಡಬೇಕಾಗುತ್ತದೆ

ಆದ್ದರಿಂದ ಕನಿಷ್ಠ 10% ದರ ಏರಿಕೆ ಮಾಡಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ಸ್ಪೆಕ್ಟ್ರಂ ವೆಚ್ಚ, ಇತರ ಹೂಡಿಕೆ ಎಲ್ಲ ಗಮನದಲ್ಲಿ ಇಟ್ಟುಕೊಂಡರೆ, ಡೇಟಾ ಬಳಕೆಯಲ್ಲಿ ಹೆಚ್ಚಾ ಕನಿಷ್ಠ 3ರಿಂದ 4 USD ಬಂಡವಾಳ ವೆಚ್ಚ ಬೇಕಾಗುತ್ತದೆ. ಆದ್ದರಿಂದ ಮುಂದಿನ ತ್ರೈಮಾಸಿಕದಲ್ಲಿ ದೊಡ್ಡ ಮಟ್ಟದಲ್ಲಿ ದರ ಹೆಚ್ಚಳ ಇರಲಿದೆ ಎನ್ನುತ್ತಾರೆ ಟೆಲಿಕಾಂ ಕ್ಷೇತ್ರದ ಅನುಭವಿಗಳು.

ಟೆಲಿಕಾಂ ಕಂಪೆನಿಗಳು 200 ರುಪಾಯಿ ARPU ತಲುಪಲೇಬೇಕು
 

ಟೆಲಿಕಾಂ ಕಂಪೆನಿಗಳು 200 ರುಪಾಯಿ ARPU ತಲುಪಲೇಬೇಕು

ಟೆಲಿಕಾಂ ಆಪರೇಟರ್ ಗಳು ನಾಲ್ಕು ವರ್ಷದ ನಂತರ 2019ರ ಡಿಸೆಂಬರ್ ನಲ್ಲಿ 40% ತನಕ ಶುಲ್ಕ ಏರಿಕೆ ಮಾಡಿದರು. ಈ ಕಾರಣಕ್ಕೆ 2020ರ ಪ್ರಥಮಾರ್ಧದಲ್ಲಿ 20% ಆದಾಯ ಹೆಚ್ಚಳಕ್ಕೆ ಕಾರಣ ಆಯಿತು. ಇತ್ತ ವೊಡಾಫೋನ್ ಐಡಿಯಾಗೆ ಸ್ಪೆಕ್ಟ್ರಂ ಶುಲ್ಕ ಪಾವತಿಸಲು ಇನ್ನೂ ಎರಡು ವರ್ಷ ವಿನಾಯಿತಿ ನೀಡಿದರೆ FY23ರ ತನಕ ದಿವಾಳಿ ಆಗದೆ ಉಳಿಯಬಹುದು. ಮುಂದಿನ ಹನ್ನೆರಡರಿಂದ ಇಪ್ಪತ್ನಾಲ್ಕು ತಿಂಗಳಲ್ಲಿ ಟೆಲಿಕಾಂ ಕಂಪೆನಿಗಳು 200 ರುಪಾಯಿ ARPU ತಲುಪಲೇಬೇಕು ಎಂದು ಹಿರಿಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

English summary

Mobile Phone Users Will Have To Pay More For Call And Data Usage

Telecom operators to pay AGR dues to government by March 2021. So, it is imminent to pay more for call and data usage by customers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X