For Quick Alerts
ALLOW NOTIFICATIONS  
For Daily Alerts

RBI Monetary Policy 2020 ಅಕ್ಟೋಬರ್ ಪ್ರಮುಖಾಂಶಗಳು

|

ಕೊರೊನಾ ಬಿಕ್ಕಟ್ಟಿನ ಮಧ್ಯೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣಕಾಸು ನೀತಿಯನ್ನು ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ (ಅಕ್ಟೋಬರ್ 8, 2020) ಘೋಷಣೆ ಮಾಡಿದರು. ಬೆಂಚ್ ಮಾರ್ಕ್ ಬಡ್ಡಿ ದರದಲ್ಲಿ, ರೆಪೋದರದಲ್ಲಿ ಯಾವ ಬದಲಾವಣೆ ಮಾಡಿಲ್ಲ. 4% ಮುಂದುವರಿಸಲು ತೀರ್ಮಾನಿಸಲಾಗಿದೆ.

ಒಂದು ವೇಳೆ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಅಗತ್ಯ ಕಂಡುಬಂದರೆ ಆಗ ದರ ಕಡಿತ ಮಾಡಲಾಗುತ್ತದೆ ಎಂದು ದಾಸ್ ಹೇಳಿದ್ದಾರೆ. ಅವರು ಘೋಷಣೆ ಮಾಡಿದ ಪ್ರಮುಖಾಂಶಗಳು ಹೀಗಿವೆ:

ರಿಸರ್ವ್ ಬ್ಯಾಂಕ್ ರೆಪೋ ದರ 4%ನಲ್ಲೇ ಮುಂದುವರಿಕೆ

* ಎಂಎಸ್ ಎಫ್ ದರ, ಬ್ಯಾಂಕ್ ದರ ಮತ್ತು ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ

 

* ಕೈಗಾರಿಕೆಗಳು ಮತ್ತು ನಿರ್ಮಾಣ ಚಟುವಟಿಕೆ ಮತ್ತೆ ಆರಂಭವಾಗಲಿದೆ.

* FY21 Q4ರಲ್ಲಿ ಜಿಡಿಪಿ ಬೆಳವಣಿಗೆ ಸಕಾರಾತ್ಮಕವಾಗಿ ಬದಲಾಗಬಹುದು.

* ಕೃಷಿ, ಗ್ರಾಹಕ ವಸ್ತುಗಳು, ದ್ವಿಚಕ್ರ ವಾಹನ, ವಿದ್ಯುತ್, ಫಾರ್ಮಾ ವಲಯದಲ್ಲಿ ಶೀಘ್ರ ಚೇತರಿಕೆ ಕಾಣಲಿದೆ.

RBI Monetary Policy 2020 ಅಕ್ಟೋಬರ್ ಪ್ರಮುಖಾಂಶಗಳು

* FY21ರಲ್ಲಿ ಜಿಡಿಪಿ 9.5% ಕುಗ್ಗಬಹುದು.

* H1FY21ರಲ್ಲಿ ಸಾಲ ಪಡೆಯುವ ವೆಚ್ಚವು 5.82% ಮುಟ್ಟಿದ್ದು, 16 ವರ್ಷದ ಕನಿಷ್ಠ ಮಟ್ಟ ಮುಟ್ಟಿದೆ.

* 2020ರ ಡಿಸೆಂಬರ್ ನಿಂದ ದಿನದ 24 ಗಂಟೆಯೂ RTGS ದೊರೆಯಲಿದೆ.

* ಸ್ಟೇಟ್ ಡೆವೆಲಪ್ ಮೆಂಟ್ ಲೋನ್ (SDL's)ಗಾಗಿ ಓಪನ್ ಮಾರ್ಕೆಟ್ ಆಪರೇಷನ್.

* ಕಾರ್ಪೊರೇಟ್ ಬಾಂಡ್ಸ್, ಡಿಬೆಂಚರ್ ಗಳಿಗೆ TLTRO ಫಂಡ್ಸ್ ನಿಯೋಜನೆ.

* ಆರ್ ಬಿಐನಿಂದ ವಾರದ OMO ಖರೀದಿ 20,000 ಕೋಟಿಗೆ ಏರಿಕೆ.

* ಸೆಪ್ಟೆಂಬರ್ ನಲ್ಲಿ ಹೆಚ್ಚಿದ್ದ ಚಿಲ್ಲರೆ ಹಣದುಬ್ಬರ ದರ ಮೂರನೇ ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಇಳಿಕೆ ನಿರೀಕ್ಷೆ.

* ಫ್ಲೋಟಿಂಗ್ ರೇಟ್ ಆಧಾರಿತ ರೆಪೋ ದರದಲ್ಲಿ 1 ಲಕ್ಷ ಕೋಟಿ ರುಪಾಯಿಯ TLTRO ಆಯೋಜಿಸಲಾಗುವುದು

English summary

RBI Monetary Policy Highlights : Repo rate unchanged at 4%; 24x7 RTGS from Dec 20

Monetary policy of RBI announced by governor Shaktikanta Das on October 9, 2020. Here is the highlight points.
Company Search
COVID-19