For Quick Alerts
ALLOW NOTIFICATIONS  
For Daily Alerts

ಭಾರತದ ಆರ್ಥಿಕತೆ ಕುಸಿದಿದೆ ಎಂದ ಮೂಡಿಸ್ ಸಂಸ್ಥೆ

|

ಭಾರತದ ಆರ್ಥಿಕತೆಗೆ ಹೊಡೆತವೆಂಬಂತೆ ಮೂಡಿಸ್ ಸಂಸ್ಥೆ ದೇಶದ ಆರ್ಥಿಕ ವೃದ್ದಿ ದರ ಕುರಿತು ನಕಾರಾತ್ಮಕ ರೇಟಿಂಗ್ ನೀಡಿದೆ. ಈ ಹಿಂದೆ ಇದ್ದ 'ಸ್ಥಿರ' ದಿಂದ 'ನಕಾರಾತ್ಮಕ'ಕ್ಕೆ ಬದಲಿಸಿದೆ. ದೇಶದ ಆರ್ಥಿಕ ದುರ್ಬಲತೆಯನ್ನು ಗಮನಹರಿಸುವಲ್ಲಿ ಭಾರತ ಸರ್ಕಾರ ವಿಫಲವಾಗಿದ್ದು, ಇದರಿಂದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದೆ ಎಂದು ಆಘಾತಕಾರಿ ಅಂಶವನ್ನು ಶುಕ್ರವಾರ (ನವೆಂಬರ್ 8) ಬಹಿರಂಗಪಡಿಸಿದೆ.

ಅಮೆರಿಕಾ ಮೂಲದ ಹಣಕಾಸು ಮತ್ತು ಸಾಲದ ಬದ್ಧತೆ ಈಡೇರಿಸುವ ಸಾಮರ್ಥ್ಯ ಮೌಲ್ಯಮಾಪನ ಸಂಸ್ಥೆಯಾದ ಮೂಡಿಸ್ ಈ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಭಾರತದ ಆರ್ಥಿಕತೆಗೆ ಮತ್ತೊಂದು ಹೊಡೆತ ನೀಡಿದೆ. ಆರ್ಥಿಕ ಕುಂಠಿತವನ್ನು ಎದುರಿಸಲು ಸರ್ಕಾರ ವಿಫಲವಾಗಿದ್ದು, ಇದು ದೇಶದ ಸಾಲದ ಹೊರೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದೆ.

 

2025ರಲ್ಲಿ ಸೃಷ್ಟಿಯಾಗಲಿದೆ 12 ಲಕ್ಷ ಉದ್ಯೋಗಗಳು

ದೇಶದ ಆರ್ಥಿಕ ವೃದ್ದಿ ದರವಷ್ಟೇ ಅಲ್ಲದೆ ಆರು ಭಾರತೀಯ ಹಣಕಾಸು ಸಂಸ್ಥೆಗಳ ದೃಷ್ಟಿಕೋನವನ್ನು 'ಸ್ಥಿರ' ದಿಂದ 'ನಕಾರಾತ್ಮಕ'ಕ್ಕೆ ಪರಿಷ್ಕರಿಸಿದೆ. ಇದರಲ್ಲಿ ಹೆಚ್‌ಡಿಎಫ್ ಸಿ ಬ್ಯಾಂಕ್‌, ಎಸ್‌ಬಿಐ, ಎಕ್ಸಿಮ್ ಬ್ಯಾಂಕ್, ಹೀರೊ ಫಿನ್ ಕಾರ್ಪ್, HUDCO, IRFC (ಭಾರತೀಯ ರೈಲ್ವೇ ಹಣಕಾಸು ನಿಗಮ)ಸೇರಿವೆ.

೨೦೧೯-೨೦ರಲ್ಲಿ ಭಾರತದ ಅಭಿವೃದ್ಧಿ ದರವು ಶೇಕಡಾ 5.8ರಷ್ಟು ಇರಲಿದೆ ಎಂದು ಅಕ್ಟೋಬರ್‌ನಲ್ಲಿ ಮೂಡಿಸ್ ಅಂದಾಜಿಸಿತ್ತು. ಅದಕ್ಕೂ ಮೊದಲು ಶೇಕಡಾ 6.2 ಇರಲಿದೆ ಎಂದು ಹೇಳಿತ್ತು. ಆದರೆ ಈಗ 2017ರಲ್ಲಿ ನೀಡಿದ್ದ 'ಬಿಬಿಎ2' ರೇಟಿಂಗ್ ಅನ್ನು ಮುಂದುವರಿಸಿದೆ. ಇದಕ್ಕೂ ಮೊದಲು 2004ರಲ್ಲಿ 'ಬಿಬಿಎ3' ರೇಟಿಂಗ್ ನೀಡಿತ್ತು. ಬಳಿಕ ನರೇಂದ್ರ ಮೋದಿ ಸರ್ಕಾರದಲ್ಲಿ ಆರ್ಥಿಕ ಸುಧಾರಣೆ ಅಂದಾಜಿಸಿ 2017ರಲ್ಲಿ 'ಬಿಬಿಎ2' ನೀಡಲಾಗಿತ್ತು.

ಮೂಡಿಸ್ ರೇಟಿಂಗ್‌ಗೆ ಸರ್ಕಾರದ ಉತ್ತರ

ಮೂಡಿಸ್ ರೇಟಿಂಗ್‌ಗೆ ಸರ್ಕಾರದ ಉತ್ತರ

ಮೂಡಿಸ್ ಭಾರತದ ಆರ್ಥಿಕತೆ ಕುರಿತು ನಕಾರಾತ್ಮಕ ರೇಟಿಂಗ್ ನೀಡಿದ್ದೇ ತಡ ಹಣಕಾಸು ಸಚಿವಾಲಯ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿತು. 'ಭಾರತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ವಿಶ್ವದ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯಲಿದೆ. ಆರ್ಥಿಕತೆಯ ಮೂಲ ದೃಢವಾಗಿದ್ದು, ಹಣದುಬ್ಬರದ ಮೇಲೆ ನಿಗಾವಹಿಸಲಾಗಿದೆ. ಇತ್ತೀಚಿನ IMF (ಅಂತರಾಷ್ಟ್ರೀಯ ಹಣಕಾಸು ನಿಧಿ) ದೃಷ್ಟಿಕೋನದ ಪ್ರಕಾರ ಭಾರತದ ಆರ್ಥಿಕತೆ 2019ರಲ್ಲಿ 6.1 ರಷ್ಟು ಬೆಳವಣಿಗೆ ಕಾಣಲಿದೆ ಹಾಗೂ 2020ರ ವೇಳೆಗೆ ಶೇಕಡಾ 7ರಷ್ಟು ಪ್ರಗತಿ ಕಾಣಲಿದೆ. ಭಾರತದ ಸಂಭಾವ್ಯ ಬೆಳವಣಿಗೆ ದರವು ಬದಲಾಗುವುದಿಲ್ಲ. IMF ಹಾಗೂ ಇತರ ಬಹುಪಕ್ಷೀಯ ಸಂಘಟನೆಗಳ ಮೌಲ್ಯಮಾಪನವು ಭಾರತದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಒತ್ತಿ ಹೇಳುತ್ತಿವೆ. ' ಎಂದು ಹಣಕಾಸು ಸಚಿವಾಲಯ ಮೂಡಿಸ್ ರೇಟಿಂಗ್ ಕುರಿತು ಪ್ರತಿಕ್ರಿಯಿಸಿದೆ.

'ಎಎಎ

'ಎಎಎ" ರೇಟಿಂಗ್ ಎಂದರೇನು?

'ಎಎಎ' ಎಂದರೆ ಮುಂದುವರಿದ ಅರ್ಥ ವ್ಯವಸ್ಥೆಯ ಅತ್ಯುನ್ನತ ರೇಟಿಂಗ್ ಆಗಿದ್ದು, 'ಬಿಬಿಎ2' ರೇಟಿಂಗ್ ಮಧ್ಯಮ ಪ್ರಮಾಣದ ಆರ್ಥಿಕ ಅಭಿವೃದ್ಧಿಯನ್ನು ಸೂಚಿಸುತ್ತದೆ. 'ಸಿ' ಅತ್ಯಂತ ಕನಿಷ್ಟ ರೇಟಿಂಗ್ ಆಗಿದೆ.

English summary

Moody Changes India's Outlook To Negative

Moody's cuts india's credit rating outlook to negative. Government and policy ineffectiveness in adressing economic weakness, which in turn increase in debt burden
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more