For Quick Alerts
ALLOW NOTIFICATIONS  
For Daily Alerts

ಮಾರ್ಚ್ 31ರ ನಂತರ 17 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ ಗಳು ಉಪಯೋಗಕ್ಕಿಲ್ಲ

|

17 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ ಗಳು ಮಾರ್ಚ್ ನಂತರ ಕೆಲಸಕ್ಕೆ ಬಾರದಿರುವಂತೆ ಆಗಬಹುದು. ಈ ಬಗ್ಗೆ ಆದಾಯ ತೆರಿಗೆ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ. ಇದೊಂದು ಕೆಲಸವನ್ನು ಮಾರ್ಚ್ ಅಂತ್ಯದೊಳಗೆ ಮಾಡದಿದ್ದಲ್ಲಿ ಪ್ಯಾನ್ ಕಾರ್ಡ್ ಇದ್ದೂ ಇಲ್ಲದಂತೆ ಆಗುತ್ತದೆ.

 

ಸುಲಭವಾಗಿ ಇ ಪ್ಯಾನ್ ಪಡೆಯುವುದು ಹೇಗೆ? ಸರಳ ವಿಧಾನ ಇಲ್ಲಿದೆ

ಅಂಥದ್ದು ಏನು? ಯೋಚನೆ ಶುರುವಾಗಿರಬೇಕು ಅಲ್ಲವಾ?

ನೀವೇನಾದರೂ ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಮಾರ್ಚ್ 31, 2020ರೊಳಗೆ ಜೋಡಣೆ ಮಾಡದಿದ್ದಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ಮಾ. 31ರ ನಂತರ 17 ಕೋಟಿ ಹೆಚ್ಚು ಪ್ಯಾನ್ ಕಾರ್ಡ್ ಗಳು ಉಪಯೋಗಕ್ಕಿಲ್ಲ

ಹೊಸ ಗಡುವು ಮಾರ್ಚ್ 31, 2020ಕ್ಕೆ ಅಂತ್ಯವಾಗಲಿದೆ. ಇತ್ತೀಚಿನ ಮಾಹಿತಿ ಪ್ರಕಾರ, 30.75 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ ಈಗಾಗಲೇ ಆಧಾರ್ ಜತೆ ಜೋಡಣೆ ಆಗಿದೆ. ಆದರೆ 17.58 ಕೋಟಿ ಪ್ಯಾನ್ ಕಾರ್ಡ್ ಇನ್ನೂ ಆಧಾರ್ ಜತೆ ಜೋಡಣೆ ಆಗಿಲ್ಲ.

ಭಾರತದ ಸುಪ್ರೀಂ ಕೋರ್ಟ್ 2018ರ ಸೆಪ್ಟೆಂಬರ್ ನಲ್ಲಿ ಘೋಷಣೆ ಮಾಡಿದ ಪ್ರಕಾರ, ಆಧಾರ್ ಸಾಂವಿಧಾನಿಕವಾಗಿ ಮಾನ್ಯತೆ ಪಡೆದಿದೆ. ಆದ್ದರಿಂದ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದಕ್ಕೆ ಹಾಗೂ ಪ್ಯಾನ್ ಕಾರ್ಡ್ಸ್ ವಿತರಿಸುವುದಕ್ಕೆ ಆಧಾರ್ ಕಡ್ಡಾಯ ಮಾಡಲಾಗಿದೆ.

ಪ್ಯಾನ್ ಕಾರ್ಡ್ ಇರಲೇಬೇಕಾ? ಯಾರಿಗೆ ಇರಲೇಬೇಕು, ಯಾರಿಗೆ ಅಗತ್ಯವಿಲ್ಲ ಗೊತ್ತೆ?

ಕೇಂದ್ರೀಯ ನೇರ ತೆರಿಗೆ ಮಂಡಳಿಯು ತಂದಿರುವ ತಿದ್ದುಪಡಿಯಂತೆ, ಆದಾಯ ತೆರಿಗೆ ಕಾಯ್ದೆ ಅನ್ವಯ ಪ್ಯಾನ್ ಕಾರ್ಡ್ ಒದಗಿಸದಿದ್ದರೆ, ನಮೂದಿಸದಿದ್ದರೆ ಆಗ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸುತ್ತಿಲ್ಲ ಎಂದಾಗ ಈ ಪ್ರಶ್ನೆ ಎದುರಾಗುತ್ತದೆ.

English summary

More Than 17 Crore PAN Cards Inoperative After March 31st

If PAN card not linked with Aadhaar by March 31st, more than 17 crore PAN card will become inoperative.
Story first published: Sunday, February 16, 2020, 10:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X