For Quick Alerts
ALLOW NOTIFICATIONS  
For Daily Alerts

ಬಹುತೇಕ ಕ್ರಿಪ್ಟೋಗಳು ನಾಶವಾಗುತ್ತದೆ ಎಂದ ರಘುರಾಮ್‌ ರಾಜನ್‌

|

ಇಂದು ಅಸ್ತಿತ್ವದಲ್ಲಿ ಇರುವ 6000ಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿಗಳಲ್ಲಿ ಬಹುತೇಕ ಕ್ರಿಪ್ಟೋಕರೆನ್ಸಿಗಳು ನಾಶವಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಿಸಿದ್ದಾರೆ. ಹಾಗೆಯೇ "ಕೇವಲ ಒಂದು ಅಥವಾ ಎರಡು ಅಥವಾ ಕೆಲವು ಮಾತ್ರ ಕ್ರಿಪ್ಟೋಕರೆನ್ಸಿಗಳು ಉಳಿಯಲಿದೆ," ಎಂದು ಕೂಡಾ ಹೇಳಿದ್ದಾರೆ.

 

ಈ ಬಗ್ಗೆ ಸಿಎನ್​ಬಿಸಿ-ಟಿವಿ18ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಘುರಾಮ್ ರಾಜನ್, "ಕ್ರಿಪ್ಟೋಕರೆನ್ಸಿ ಮೌಲ್ಯ ಇರುವುದು ಆದರೂ ಬೆಲೆ ಏರಿಕೆ ಆಗಿರಬಹುದು ಅಷ್ಟೇ. ಅದರಲ್ಲೂ ಈ ಬೆಲೆ ಉಳಿಯಲು ಕಾರಣ ಅವುಗಳನ್ನು ಕೊಳ್ಳುವ ಸಾಮರ್ಥ್ಯ ಇರುವ ದೊಡ್ಡ ಮೂರ್ಖರು ಇದ್ದಾರೆ ಎಂಬ ಕಾರಣದಿಂದಾಗಿ," ಎಂದು ಟೀಕೆ ಮಾಡಿದ್ದಾರೆ.

ನ.24ರಂದು ಬಿಟ್‌ಕಾಯಿನ್ ಸೇರಿ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಕುಸಿತ

ಕ್ರಿಪ್ಟೋಕರೆನ್ಸಿಗಳಲ್ಲಿ ಪ್ರಸ್ತುತ ಉನ್ಮಾದವನ್ನು 17ನೇ ಶತಮಾನದಲ್ಲಿ ನೆದರ್ಲೆಂರ್ಡ್ಸ್‌ನ ತುಲಿಪ್ ಉನ್ಮಾದಕ್ಕೆ ಹೋಲಿಕೆ ಮಾಡಿದ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್‌, "ಅನಿಯಂತ್ರಿತವಾದ ಚಿಟ್‌ಫಂಡ್‌ನಂತೆ ಕ್ರಿಪ್ಟೋಕರೆನ್ಸಿಗಳು ತೊಂದರೆಯನ್ನು ಉಂಟು ಮಾಡಬಹುದು. ಜನರಿಂದ ಹಣವನ್ನು ಪಡೆದುಕೊಂಡು ಚಿಟ್​​ ಫಂಡ್​ಗಳು ಮೋಸ ಮಾಡುತ್ತಿದೆ. ಕ್ರಿಪ್ಟೋ ಆಸ್ತಿಯನ್ನು ಹೊಂದಿರುವ ಬಹಳಷ್ಟು ಜನರಿಗೆ ಸಮಸ್ಯೆ ಉಂಟಾಗುತ್ತಿದೆ," ಎಂದು ತಿಳಿಸಿದರು.

 ಬಹುತೇಕ ಕ್ರಿಪ್ಟೋಗಳು ನಾಶವಾಗುತ್ತದೆ ಎಂದ ರಘುರಾಮ್‌ ರಾಜನ್‌

"ಯಾವುದೇ ವಸ್ತುವಾದರೂ ಮೌಲ್ಯವಿದ್ದರೆ ಮಾತ್ರ ಬೆಲೆ ಇರುತ್ತದೆ. ಬಹಳಷ್ಟು ಕ್ರಿಪ್ಟೋಗಳಿಗೆ ಮೌಲ್ಯವಿದೆ. ಏಕೆಂದರೆ ಅದನ್ನು ಖರೀದಿ ಮಾಡಲು ಮುರ್ಖರು ಇದ್ದಾರೆ. ಕ್ರಿಪ್ಟೋಗಳಿಗೆ ಮೌಲ್ಯವಿಲ್ಲ ಎಂದು ಅಲ್ಲ. ಆದರೆ ಅವರು ಶಾಶ್ವತವಾದ ಮೌಲ್ಯವಲ್ಲ. ಹಾಗೆಯೇ ಈ ಮೌಲ್ಯವು ಪಾವತಿಗಳನ್ನು ಮಾಡುವ ಮೂಲಕ ಮಾತ್ರ ಉಳಿಯಬಹುದು. ಅದರಲ್ಲೂ ಗಡಿಯಾಚೆಗಿನ ಪಾವತಿಗೆ ಬಳಕೆಯಂತೆ ಉಳಿಯಬಹುದು," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಘುರಾಮ್ ರಾಜನ್‌ ಒಬ್ಬರೇ ಕ್ರಿಪ್ಟೋ ಬಗ್ಗೆ ಕಳವಳ ವ್ಯಕ್ತಪಡಿಸಿಲ್ಲ

ದೇಶದಲ್ಲಿ ಕ್ರಿಪ್ಟೋಕರೆನ್ಸಿಯ ಬಗ್ಗೆ ಕಳವಳ ವ್ಯಕ್ತಪಡಿಸಿದವರು ರಘುರಾಮ್ ರಾಜನ್‌ ಒಬ್ಬರೇ ಅಲ್ಲ. ಇತ್ತೀಚೆಗೆ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೂಡಾ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. "ಕ್ರಿಪ್ಟೋಕರೆನ್ಸಿಗಳಲ್ಲಿ ವಹಿವಾಟು ನಡೆಸುತ್ತಿರುವ ಭಾರತೀಯ ಸಂಖ್ಯೆ ಕುರಿತು ವೈಭವೀಕರಿಸಲಾಗುತ್ತಿದೆ. ನಿಜವಾಗಿ ದೇಶದಲ್ಲಿ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿರುವ ಶೇ.70ರಷ್ಟು ಹೂಡಿಕೆದಾರರು ಮೂರು ಸಾವಿರ ರೂಪಾಯಿಗಿಂತ ಹೆಚ್ಚು ಹೂಡಿಕೆ ಮಾಡಿಲ್ಲ. ಆದರೆ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳು ಅಂಕಿ ಅಂಶವನ್ನು ವೈಭವೀಕರಿಸುತ್ತಿದೆ. ದೇಶದಲ್ಲಿ 10 ಕೋಟಿಗೂ ಹೆಚ್ಚು ಮಂದಿ ಕ್ರಿಪ್ಟೋ ವಲಯದಲ್ಲಿ ಸಕ್ರಿಯವಾಗಿ ಇದ್ದಾರೆ. ಸುಮಾರು 6 ಲಕ್ಷ ಕೋಟಿ ರೂಪಾಯಿಯಷ್ಟು ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆಯಾಗಿದೆ ಎಂದು ಎಕ್ಸ್‌ಚೇಂಜ್‌ಗಳು ಜಾಹೀರಾತುಗಳಲ್ಲಿ ಅಂಕಿ ಅಂಶವನ್ನು ವೈಭವೀಕರಿಸಿ ಹೇಳಿಕೊಂಡಿದೆ," ಎಂದು ಹೇಳಿದ್ದಾರೆ.

 

ಕ್ರಿಪ್ಟೋಕರೆನ್ಸಿಯಲ್ಲಿ ಒಂದೇ ಒಂದು ರೂಪಾಯಿ ಹೂಡಿಕೆ ಮಾಡಿಲ್ಲ ಎಂದ ಆನಂದ್ ಮಹೀಂದ್ರಾ

"ಖಂಡಿತವಾಗಿ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಅಧಿಕ ಆಗಿದೆ. ಆದರೆ ಈ ಅಂಕಿ ಅಂಶಗಳ ಬಗ್ಗೆ ನನಗೆ ಖಚಿತತೆ ಇಲ್ಲ. ಏಕೆಂದರೆ ನಮಗೆ ಯಾವುದೇ ವಿಚಾರದಲ್ಲಿ ಖಚಿತವಾದ ಮಾಹಿತಿ ಇಲ್ಲದೆ ನಾವು ಮಾತನಾಡಬಾರದು, ಆದರೆ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ನಾವು ನೋಡಿದಾಗ, ಇದನ್ನು ವೈಭವೀಕರಿಸಲಾಗುತ್ತಿದೆ ಎಂಬುವುದು ಸ್ಪಷ್ಟ," ಎಂದು ಶಕ್ತಿಕಾಂತ್‌ ದಾಸ್‌ ತಿಳಿಸಿದ್ದರು.

 ಬಹುತೇಕ ಕ್ರಿಪ್ಟೋಗಳು ನಾಶವಾಗುತ್ತದೆ ಎಂದ ರಘುರಾಮ್‌ ರಾಜನ್‌

ಸಂಸತ್‌ ಅಧಿವೇಶನದಲ್ಲಿ ಮಸೂದೆ ಮಂಡನೆ ಸಾಧ್ಯತೆ

ಇನ್ನು ಸಂಸತ್​ನ ಚಳಿಗಾಲದ ಅಧಿವೇಶನವು ನವೆಂಬರ್ 29ರಿಂದ ಆರಂಭವಾಗಲಿದೆ. ಸರ್ಕಾರವು ಅಧಿವೇಶನದಲ್ಲಿ ಮಸೂದೆಯನ್ನು ಮಂಡನೆ ಮಾಡುವ ಸಾಧ್ಯತೆ ಇದೆ. ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ, 2021 ಇದನ್ನು ಸಂಸತ್​ನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಮುಂದಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಕೆಲವು ಕ್ರಿಪ್ಟೋಕರೆನ್ಸಿಗಳ ವಹಿವಾಟು ನಿರ್ಬಂಧ ಮತ್ತು ಆರ್​ಬಿಐನಿಂದ ವಿತರಿಸುವ ಡಿಜಿಟಲ್ ಕರೆನ್ಸಿ ನಿಯಂತ್ರಣಕ್ಕೆ ಚೌಕಟ್ಟು ರೂಪಿಸುವ ನಿಟ್ಟಿನಲ್ಲಿ ಮಸೂದೆಯನ್ನು ಮಂಡನೆ ಮಾಡುವ ಸಾಧ್ಯತೆ ಇದೆ.

English summary

Most existing cryptos will perish says Raghuram Rajan

Most existing cryptos will perish says Raghuram Rajan.
Story first published: Wednesday, November 24, 2021, 22:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X