ಮೊಟೊ ಜಿ 5G ಮೊಬೈಲ್ ಫೋನ್ ಭಾರತದಲ್ಲಿ 19,999 ರುಪಾಯಿ
ಭಾರತದಲ್ಲಿ ಮೊಟೊ ಜಿ 5G ಬಿಡುಗಡೆ ಮಾಡಲಾಗಿದೆ. ಮೊಟೊ ಜಿ 5G ಎಂಬುದು ಮೊಟೊರೊಲಾ ಉತ್ಪಾದಿಸುವ ಕೈಗೆಟುಕುವ ದರದ 5G ಸ್ಮಾರ್ಟ್ ಫೋನ್. ಭಾರತದಲ್ಲಿ ಸದ್ಯಕ್ಕೆ ಇದನ್ನು ಬಳಸುವುದಕ್ಕೆ ಸಾಧ್ಯ ಇಲ್ಲದಿರಬಹುದು. ಆದರೆ ವಿದೇಶಕ್ಕೆ ತೆರಳುವವರಿದ್ದು, ಅಲ್ಲಿ ಈ ತಂತ್ರಜ್ಞಾನ ಇದ್ದಲ್ಲಿ ಖಂಡಿತಾ ಮೊಬೈಲ್ ಫೋನ್ ಬಳಕೆ ಆಗುತ್ತದೆ. ಮೊಟೊರೊಲಾದಿಂದ ಇದನ್ನು 5G- ರೆಡಿ ಎಂದು ಹೇಳಲಾಗಿದೆ.
ಮೊಟೊ ಜಿ 5G ಮೊಬೈಲ್ ಫೋನ್ ಜಾಗತಿಕ ಮಟ್ಟದ ಹನ್ನೊಂದು 5G ನೆಟ್ ವರ್ಕ್ ಬ್ಯಾಂಡ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಭಾರತದಲ್ಲಿ ಆರಂಭ ಆಗಲಿರುವ ಯಾವುದೇ ಸಬ್ 6 5G ಬ್ಯಾಂಡ್ ನಲ್ಲಿ ಕೆಲಸ ಮಾಡುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇನ್ನು ಜಾಗತಿಕವಾಗಿ ಲಭ್ಯ ಇರುವ ಬಹುತೇಕ ಸಬ್ 6 5G ಬ್ಯಾಂಡ್ ಜತೆಗೆ ಇದು ಕಂಪ್ಯಾಟಿಬಲ್ ಆಗಿದೆ. ಆ ಕಾರಣಕ್ಕೆ ಈ ಫೋನ್ ಅನ್ನು ಜಾಗತಿಕ ಸಿದ್ಧ ಎಂದು ಪರಿಗಣಿಸಬಹುದು.
ಮೊಟೊರೊಲಾದಿಂದ 10 ಸಾವಿರದೊಳಗಿನ ಮೊಟೊ E7 ಪ್ಲಸ್ ಫೋನ್ ಬಿಡುಗಡೆ
ಮೊಟೊರೊಲಾದಿಂದ ಮೊಟೊ ಜಿ 5G ಫೋನ್ ಅನ್ನು ಭಾರತದಲ್ಲಿ 20,999 ರುಪಾಯಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಎಚ್ ಡಿಎಫ್ ಸಿ ಬ್ಯಾಂಕ್ ಕಾರ್ಡ್ ಇದ್ದಲ್ಲಿ 1000 ರುಪಾಯಿ ಕಡಿಮೆಗೆ, ಅಂದರೆ 19,999 ರುಪಾಯಿಗೆ ದೊರೆಯುತ್ತದೆ. ಇದು ಫ್ಲಿಪ್ ಕಾರ್ಟ್ ನಲ್ಲಿನ ವಿಶೇಷ ಬೆಲೆ. ಮೂಲ ಬೆಲೆ 24,999 ರುಪಾಯಿ ಎನ್ನಲಾಗಿದೆ.
ಮೊಟೊ G 5G ಫೋನ್ 6.7 ಇಂಚಿನ 1080p+ ಐಪಿಎಸ್ LCD ಡಿಸ್ ಪ್ಲೇ ಜತೆಗೆ 20:9 ಆಸ್ಪೆಕ್ಟ್ ರೇಷಿಯೋ ಹೊಂದಿದೆ. ಕ್ವಾಲ್ ಕಾಮ್ ಸ್ನಾಪ್ ಡ್ರ್ಯಾಗನ್ 750G ಪ್ರೊಸೆಸರ್ ಜತೆಗೆ 6GB RAM ಮತ್ತು 128GB ಸಂಗ್ರಹ ಸಾಮರ್ಥ್ಯ ಇದೆ. ಇದು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 1TB ತನಕ ವಿಸ್ತರಿಸಬಹುದು. ಜತೆಗೆ 5,000 mAh ಬ್ಯಾಟರಿ ಇದೆ.