For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಸದ್ಯದಲ್ಲೇ ಬಿಡುಗಡೆಯಾಗಲಿದೆ ಮೊಟೊ ಜಿ40, ಜಿ60: ಫೀಚರ್ಸ್ ಏನಿರಬಹುದು?

|

ಮೊಟೊರೊಲಾ ಶೀಘ್ರದಲ್ಲೇ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಬಹುದು. ಮೊಟೊ ಜಿ40, ಮೊಟೊ ಜಿ60 ಎಂಬ ಸರಣಿಯಲ್ಲಿ ಮೊಬೈಲ್ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ಫ್ಲಿಪ್‌ಕಾರ್ಟ್‌ ಮೂಲಕ ಭಾರತದಲ್ಲಿ ಮೊದಲು ಲಭ್ಯವಾಗಲಿದೆ.

 

ಈ ಮೊಬೈಲ್‌ನ ಪ್ರಮುಖ ಆಕರ್ಷಣೆ ಕ್ಯಾಮೆರಾ ಕುರಿತು ವಿವರಗಳನ್ನು ನೀಡಲಾಗಿದೆ. ಈ ಪೈಕಿ 108 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಮೋಟೋ ಜಿ ಫೋನ್‌ನ ಹಿಂಭಾಗದಲ್ಲಿ ನೀಡಲಾಗಿದೆ. ಜೊತೆಗೆ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್‌ ಕ್ಯಾಮೆರಾ ಇರುತ್ತದೆ.

ಭಾರತದಲ್ಲಿ ಸದ್ಯದಲ್ಲೇ ಬಿಡುಗಡೆಯಾಗಲಿದೆ ಮೊಟೊ ಜಿ40, ಜಿ60

ಮತ್ತೊಂದು ಫೋನ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅಳವಡಿಸಲಾಗುವುದು. 64 ಮೆಗಾಪಿಕ್ಸೆಲ್, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಆಗಿರಬಹುದು.

ಕೆಲವು ವರದಿ ಪ್ರಕಾರ ಮೋಟೋ ಜಿ 60 ನ ಕೆಲವು ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಅದರ ಪ್ರಕಾರ, ಇದರ ಡಿಸ್‌ಪ್ಲೇ 6.78 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಆಗಿರಬಹುದು. ಇದು 120Hz ರಿಫ್ರೆಶ್ ದರವನ್ನು ಹೊಂದಿರುತ್ತದೆ. ಅಲ್ಲದೆ, ಫೋನ್‌ನ ಬ್ಯಾಟರಿ 5000mAh ಆಗುವ ನಿರೀಕ್ಷೆಯಿದೆ. ಇನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732 ಜಿ ಪ್ರೊಸೆಸರ್ ಹೊಂದಿದೆ.

English summary

Motorola Moto G60, Moto G40 Fusion Expected To Launch In India

Motorola has been long-rumored to launch two new smartphones in the G series. As per a tipster, the Lenovo-owned company is all set to launch the Moto G60 and the Moto G40 Fusion in India.
Story first published: Friday, April 16, 2021, 15:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X