For Quick Alerts
ALLOW NOTIFICATIONS  
For Daily Alerts

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯ ಮುಂದಿನ 'ಗೇಮ್‌' ಪ್ಲಾನ್ ಏನ್ ಗೊತ್ತಾ?

|

ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕಾಲಿಡದ ಕ್ಷೇತ್ರವೇ ಬಹಳ ವಿರಳವಾಗಿಬಿಟ್ಟಿವೆ. ಉದ್ಯಮ ಕ್ಷೇತ್ರದಲ್ಲಿ ದೈತ್ಯವಾಗಿ ಬೆಳೆದಿರುವ ಮುಕೇಶ್ ಮುಂದಿನ ಗೇಮ್‌ ಪ್ಲಾನ್ ಯಾವುದು ಎಂದು ಸುಳಿವು ನೀಡಿದ್ದಾರೆ.

ಮುಂಬೈನಲ್ಲಿ ನಡೆದ ಫ್ಯೂಚರ್ ಡೀಕೋಡೆಡ್ ಸಿಇಒ 2020'' ಶೃಂಗಸಭೆಯಲ್ಲಿ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾಡೆಲ್ಲಾ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅಂಬಾನಿ ಭವಿಷ್ಯದಲ್ಲಿ ಗೇಮಿಂಗ್ ಉತ್ತುಂಗಕ್ಕೇರುತ್ತದೆ ಎಂದು ಹೇಳುವ ಮೂಲಕ ಆ ಉದ್ಯಮಕ್ಕೂ ಕಾಲಿಡುವ ಸುಳಿವು ನೀಡಿದ್ದಾರೆ.

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯ ಮುಂದಿನ 'ಗೇಮ್‌' ಪ್ಲಾನ್!

 

''ಮುಂದಿನ ದಶಕವು ಗೇಮಿಂಗ್​ಗೆ ಸೇರಲಿದೆ. ಬ್ರಾಡ್ ಬ್ಯಾಂಡ್ ಕನೆಕ್ಟಿವಿಟಿ ಸಮರ್ಪಕವಾಗಿ ಹೊಂದಿರುವ ಭಾರತದಲ್ಲಿ ಗೇಮಿಂಗ್ ಇನ್ನೂ ಶೈಶಾವಸ್ತೆಯಲ್ಲಿದೆ. ನಮ್ಮಂಥವರಿಗೆ ಈ ಗೇಮಿಂಗ್ ಏನು ಎಂಬುದು ಗೊತ್ತಿಲ್ಲದೇ ಇರಬಹುದು. ಆದರೆ, ಸಂಗೀತ, ಸಿನಿಮಾ ಮತ್ತು ಟಿವಿ ಶೋಗಳೆಲ್ಲವನ್ನೂ ಮೀರಿಸಿ ಗೇಮಿಂಗ್ ಬೆಳೆಯಲಿದೆ. ಇದು ನಮ್ಮ ಊಹೆಗೂ ಮೀರಿದ್ದು ಎಂದು ಅನಿಸಿದರೂ ಅಂಥದ್ದೊಂದು ಟ್ರೆಂಡ್ ಸೃಷ್ಟಿಯಾಗುತ್ತಿರುವುದನ್ನು ಕಾಣಬಹುದಾಗಿದೆ'' ಎಂದು ಮುಕೇಶ್ ಅಂಬಾನಿ ಹೇಳಿದರು.

ಉದಯೋನ್ಮುಖ ಆರ್ಥಿಕತೆಗಳಲ್ಲಿ ಗೇಮ್ ಡೌನ್‌ಲೋಡ್‌ಗಳಿಗಾಗಿ ಭಾರತವು ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು ಗೇಮ್‌ಗಳ ಅಭಿವೃದ್ಧಿ ಮಾರುಕಟ್ಟೆಯನ್ನು ತೀವ್ರವಾಗಿ ಬೆಳೆಯಲು ಸಜ್ಜಾಗಿದೆ. ಉದ್ಯಮದ ಮಾಹಿತಿಯ ಪ್ರಕಾರ, ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆದಾರರು ಗೇಮಿಂಗ್ ವಿಷಯಕ್ಕಾಗಿ ಸರಾಸರಿ ಒಂದು ಗಂಟೆ ಕಳೆಯುತ್ತಾರೆ. ಇದು ಭಾರತದಲ್ಲಿ ಈಗ ಜಾಗತಿಕ ಗೇಮಿಂಗ್ ಉತ್ಪನ್ನಗಳೊಂದಿಗೆ ದೊಡ್ಡ ಗೇಮಿಂಗ್ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ಕಾರಣವಾಗಿದೆ ಎಂದು ಹೇಳಿದರು.

English summary

Mukesh Ambani's Next Game Plan

Reliance Industries chairman Mukesh Ambani might have hinted at his next big bet. he will chance to enter gaming industry :ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತನ್ನ ಮುಂದಿನ ಹೆಜ್ಜೆಯ ಸುಳಿವು ನೀಡಿದ್ದಾರೆ. ಗೇಮಿಂಗ್ ಉದ್ಯಮಕ್ಕೆ ಕಾಲಿಡುವ ಸಾಧ್ಯತೆ ಇದೆ.
Story first published: Monday, February 24, 2020, 21:41 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more