For Quick Alerts
ALLOW NOTIFICATIONS  
For Daily Alerts

ಮುಕೇಶ್ ಆಸ್ತಿ 50 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಒಂದೇ ದಿನದಲ್ಲಿ ಭಸ್ಮ

|

ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಫೋರ್ಬ್ಸ್ ಶತಕೋಟ್ಯಧಿಪತಿಗಳ ಶ್ರೇಯಾಂಕದ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದ್ದಾರೆ. ಸೋಮವಾರದಂದು (ನವೆಂಬರ್ 2, 2020) ರಿಲಯನ್ಸ್ ಷೇರುಗಳ ಬೆಲೆ ಭಾರೀ ಇಳಿಕೆಯಾದ ಹಿನ್ನೆಲೆಯಲ್ಲಿ ಮುಕೇಶ್ ಆಸ್ತಿಯಲ್ಲಿ 700 ಕೋಟಿ ಅಮೆರಿಕನ್ ಡಾಲರ್ ಅಥವಾ 50 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಮೊತ್ತ ಕರಗಿದೆ.

ಒಂದೇ ದಿನದಲ್ಲಿ 83 ಸಾವಿರ ಕೋಟಿ ರುಪಾಯಿ ಬಂಡವಾಳ ನಷ್ಟ ಕಂಡ ರಿಲಯನ್ಸ್

ಮುಕೇಶ್ ಈಗ ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಗೂಗಲ್ ಸಹ ಸಂಸ್ಥಾಪಕ ಲ್ಯಾರಿ ಪೇಜ್ ಗಿಂತ ಒಂದು ಸ್ಥಾನ ಹಿಂದಿದ್ದಾರೆ. ಸೋಮವಾರದಂದು ರಿಲಯನ್ಸ್ ಷೇರಿನ ಬೆಲೆಯಲ್ಲಿ ಹತ್ತಿರಹತ್ತಿರ 9% ಇಳಿಕೆ ಆಗಿದ್ದು, 1871.90 ತಲುಪಿತ್ತು. ಅಕ್ಟೋಬರ್ 30ನೇ ತಾರೀಕಿನಂದು ರಿಲಯನ್ಸ್ ಎರಡನೇ ತ್ರೈಮಾಸಿಕದ ಫಲಿತಾಂಶ ಬಂದಿದ್ದು, ಲಾಭದ ಪ್ರಮಾಣ 32.5% ಕುಸಿತವಾಗಿದೆ.

ಮುಕೇಶ್ ಆಸ್ತಿ 50 ಸಾವಿರ ಕೋಟಿ ರು.ಗೂ ಹೆಚ್ಚು ಒಂದೇ ದಿನದಲ್ಲಿ ಭಸ್ಮ

 

ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ದರ ಒಂದೇ ದಿನ, ಸೋಮವಾರ ಕಂಡ ಕುಸಿತಕ್ಕೆ ಕಂಪೆನಿಯ ಹೂಡಿಕೆದಾರರ ಸಂಪತ್ತು ಎಂಬತ್ತು ಸಾವಿರ ಕೋಟಿ ರುಪಾಯಿಗೂ ಹೆಚ್ಚು ಮೊತ್ತ ಕೊಚ್ಚಿಹೋಗಿದೆ. ಮಂಗಳವಾರ ಬೆಳಗ್ಗೆ ವಹಿವಾಟಿನಲ್ಲಿ ಕೂಡ ರಿಲಯನ್ಸ್ ಷೇರಿನ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡಿತ್ತು.

English summary

Mukesh Ambani Wealth Decreased More Than 50000 Crore

India's richest man Mukesh Ambani wealth decreased more than 50,000 crore rupees on Monday, after Reliance Industries share price crash.
Story first published: Tuesday, November 3, 2020, 12:17 [IST]
Company Search
COVID-19