For Quick Alerts
ALLOW NOTIFICATIONS  
For Daily Alerts

ನರೇಂದ್ರ ಮೋದಿ 2.0; ಉಳಿತಾಯ, ಹೂಡಿಕೆ ಮೇಲೆ ಕೇಂದ್ರದ ನೀತಿಗಳ ಪರಿಣಾಮ

|

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2.0, ತನ್ನ ಎರಡನೇ ಅವಧಿಯ ಒಂದು ವರ್ಷವನ್ನು ಪೂರೈಸಿದೆ. ಈ ವೇಳೆ ಮೋದಿ ಸರ್ಕಾರಕ್ಕೆ ಕೊರೊನಾವೈರಸ್‌ನ ಬಹುದೊಡ್ಡ ಸವಾಲು ಕೂಡ ಎದುರಾಗಿದೆ.

ಇದೇ ಹೊತ್ತಿನಲ್ಲಿ ದೇಶದ ಆರ್ಥಿಕ ಪರಿಸ್ಥಿತಿಗೂ ಅತಿದೊಡ್ಡ ಸವಾಲು ಎದುರಾಗಿದೆ. ಕಳೆದ ನಾಲ್ಕು ದಶಕದಲ್ಲೇ ಅತಿ ಕೆಟ್ಟ ಪರಿಸ್ಥಿತಿಯನ್ನು ದೇಶ ಎದುರಿಸುತ್ತಿದೆ ಎಂದು ಹಲವು ಆರ್ಥಿಕ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾ ಲಾಕ್‌ಡೌನ್ ಪರಿಣಾಮಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರ 22 ಲಕ್ಷ ಕೋಟಿ ರುಪಾಯಿಯ ಪ್ಯಾಕೇಜ್ ಘೋಷಣೆ ಮಾಡಿದೆ. ಇದು ದೇಶದ ಜನರ ಹೂಡಿಕೆ ಉಳಿತಾಯದ ಮೇಲೆ ಪರಿಣಾಮ ಬೀರಲಿದೆ. ಹೂಡಿಕೆ ಹೆಚ್ಚಳಕ್ಕೆ ಮೋದಿ ಸರಕಾರ ತಿಣುಕಾಡುತ್ತಿದ್ದರೆ, ಇತ್ತ ಲಾಕ್‌ಡೌನ್‌ನಿಂದ ಉದ್ಯೋಗ ನಷ್ಟ, ಆದಾಯ ನಷ್ಟ ಮಾಡಿಕೊಂಡಿರುವ ಜನಸಾಮಾನ್ಯರು ಉಳಿತಾಯ ಹೇಗಪ್ಪಾ ಮಾಡೋದು ಇಂತ ಕಷ್ಟ ಕಾಲದಲ್ಲಿ ಎನ್ನುತ್ತಿದ್ದಾರೆ.

 

ನರೇಂದ್ರ ಮೋದಿ ಸರ್ಕಾರದ 2.0 ಅವಧಿಯ ನೀತಿ ನಿಯಮಗಳು ಹೂಡಿಕೆ ಮತ್ತು ಉಳಿತಾಯದ ಮೇಲೆ ಉಂಟು ಮಾಡುವ ಪ್ರಮುಖ 5 ಸಂಗತಿಗಳು ಇಲ್ಲಿವೆ

ಜನಸಾಮಾನ್ಯರ ಉಳಿತಾಯದ ಮೇಲೆ ಪರಿಣಾಮ

ಜನಸಾಮಾನ್ಯರ ಉಳಿತಾಯದ ಮೇಲೆ ಪರಿಣಾಮ

ಮೋದಿ 2.0 ಸರ್ಕಾರದ ಭಾಗವಾಗಿ ಕೇಂದ್ರ ಹಣಕಾಸು ಸಚಿವೆ, ನಿರ್ಮಲಾ ಸೀತಾರಾಮನ್ ಅವರು ಈ ವರ್ಷದ ಆರಂಭದಲ್ಲಿ 2020-21 ರ ಕೇಂದ್ರ ಬಜೆಟ್ ಮಂಡಿಸಿದರು. ಈ ಬಜೆಟ್‌ನಲ್ಲಿ ತೆರಿಗೆದಾರರಿಗೆ ಹಲವು ವಿನಾಯಿಗಳನ್ನು ನೀಡಿದರಾದರೂ ಜನಪ್ರಿಯ ತೆರಿಗೆಗಳನ್ನು ಘೋಷಣೆ ಮಾಡಲಿಲ್ಲ. ಇದರಿಂದ ಜನಸಾಮಾನ್ಯರ ಉಳಿತಾಯದ ಮೇಲೆ ಪರಿಣಾಮ ಬೀರಿದೆ.

ಲಾಭಾಂಶ ವಿತರಣಾ ತೆರಿಗೆ

ಲಾಭಾಂಶ ವಿತರಣಾ ತೆರಿಗೆ

ಲಾಭಾಂಶ ವಿತರಣಾ ತೆರಿಗೆಯನ್ನು ರದ್ದುಗೊಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಘೋಷಣೆ ಮಾಡಿದ್ದರಿಂದ ಹೂಡಿಕೆ ಮೇಲೆ ಹೊಡೆತ ಬಿದ್ದಿದೆ ಎನ್ನಲಾಗಿದೆ. ಲಾಭಾಂಶದಿಂದ ಬರುವ ಆದಾಯವನ್ನು ಹೂಡಿಕೆ ಮಾಡುವ ಹೂಡಿಕೆದಾರರಿಗೆ, ಈ ಕ್ರಮವು ಹೊರೆಯಾಗಿದೆ.

ಉಳಿತಾಯದ ಮೇಲೆ ಅಡ್ಡ ಪರಿಣಾಮ
 

ಉಳಿತಾಯದ ಮೇಲೆ ಅಡ್ಡ ಪರಿಣಾಮ

ನೌಕರರ ಭವಿಷ್ಯ ನಿಧಿ (ಇಪಿಎಫ್), ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್), ಮತ್ತು ಅನುಮೋದಿತ ಮೇಲ್ವಿಚಾರಣಾ ನಿಧಿಗಳಲ್ಲಿ ಉದ್ಯೋಗದಾತರ ವಾರ್ಷಿಕ 7.5 ಲಕ್ಷ ರೂ. ಮಿತಿಗಿಂತ ಹೆಚ್ಚಿನ ಕೊಡುಗೆಗಳು ಈಗ ತೆರಿಗೆಗೆ ಒಳಪಟ್ಟಿರುತ್ತವೆ. ಇದು ಹೆಚ್ಚಿನ ಅದಾಯವಿರುವರ ಉಳಿತಾಯದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಿದೆ.

 7.5 ಲಕ್ಷ ರೂ. ಮಿತಿಗಿಂತ ಹೆಚ್ಚಿನ ಕೊಡುಗೆಗಳು

7.5 ಲಕ್ಷ ರೂ. ಮಿತಿಗಿಂತ ಹೆಚ್ಚಿನ ಕೊಡುಗೆಗಳು

ನೌಕರರ ಭವಿಷ್ಯ ನಿಧಿ (ಇಪಿಎಫ್), ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್), ಮತ್ತು ಅನುಮೋದಿತ ಮೇಲ್ವಿಚಾರಣಾ ನಿಧಿಗಳಲ್ಲಿ ಉದ್ಯೋಗದಾತರ ವಾರ್ಷಿಕ 7.5 ಲಕ್ಷ ರೂ. ಮಿತಿಗಿಂತ ಹೆಚ್ಚಿನ ಕೊಡುಗೆಗಳು ಈಗ ತೆರಿಗೆಗೆ ಒಳಪಟ್ಟಿರುತ್ತವೆ. ಇದು ಹೆಚ್ಚಿನ ಅದಾಯವಿರುವರ ಉಳಿತಾಯದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಿದೆ.

ಕಡಿಮೆ ಸ್ಥಿರ ಠೇವಣಿ ದರ

ಕಡಿಮೆ ಸ್ಥಿರ ಠೇವಣಿ ದರ

ಸಣ್ಣ ಠೇವಣಿದಾರರು, ವಿಶೇಷವಾಗಿ ಹಿರಿಯ ನಾಗರಿಕರು, ಈಗಾಗಲೇ ಕಡಿಮೆ ಸ್ಥಿರ ಠೇವಣಿ ದರಗಳಿಂದ ಉಳಿತಾಯದ ಮೇಲೆ ಅಷ್ಟೊಂದು ಹಿಡಿತ ಸಾಧಿಸುತ್ತಿಲ್ಲ. ಆದರೆ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ 2020 ರ ಸಣ್ಣ ಉಳಿತಾಯ ಯೋಜನೆಗಳಲ್ಲಿ ನೀಡುವ ಆದಾಯವನ್ನು ತೀವ್ರವಾಗಿ ಕಡಿಮೆ ಮಾಡಲು ನಿರ್ಧರಿಸಿತು.

ಭಾರತ್ ಬಾಂಡ್ ಇಟಿಎಫ್

ಭಾರತ್ ಬಾಂಡ್ ಇಟಿಎಫ್

ಕೇಂದ್ರೀಯ ಸಾರ್ವಜನಿಕ ವಲಯದ (ಸಿಪಿಎಸ್‌ಯು) ಸಾಲದ ಅವಶ್ಯಕತೆಗಳನ್ನು ಪರಿಣಾಮಕಾರಿ ರೀತಿಯಲ್ಲಿ ಪೂರೈಸಲು, ಕೇಂದ್ರ ಸರ್ಕಾರವು 2019 ರ ಡಿಸೆಂಬರ್‌ನಲ್ಲಿ ಮೊದಲ ಭಾರತ್ ಬಾಂಡ್ ಇಟಿಎಫ್ ಅನ್ನು ಹೊರತಂದಿತು. ಇದು ಈ ವಲಯದ ಹೂಡಿಕೆ ಮೇಲೆ ಕೆಟ್ಟ ಪರಿಣಾಮ ಬೀರಿದೆ.

English summary

Narendra Modi 2.0: 5 Policies That Affected On Common People Savings And Investments

Narendra Modi 2.0: 5 Policies That Affected Common People Savings And Investments
Story first published: Monday, June 1, 2020, 15:03 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more