For Quick Alerts
ALLOW NOTIFICATIONS  
For Daily Alerts

ಈ ಬಾರಿ ಹಬ್ಬಕ್ಕೆ ನಿಮ್ಮಿಷ್ಟದ ಕಾರು ಸಿಕ್ಕಿತೇ ?

By ರಂಗಸ್ವಾಮಿ ಮೂಕನಹಳ್ಳಿ
|

ಭಾರತದಲ್ಲಿ ಇನ್ನೇನು ಹಬ್ಬಗಳ ಸಾಲು ಸಾಲು ಶುರುವಾಗುತ್ತದೆ. ಹಬ್ಬದ ಶುಭ ಅವಸರದಲ್ಲಿ ಕಾರು ಕೊಳ್ಳುವ ಜನರ ಸಂಖ್ಯೆಯೂ ಅಧಿಕ. ಹೀಗೆ ಕಾರನ್ನ ಮಾರುವವರು , ಕಾರು ತಯಾರಕರು ಕೂಡ ಹಬ್ಬದ ಮಾರಾಟದಲ್ಲಿ ವಿಶೇಷ ವಿನಾಯತಿಯನ್ನ ಕೂಡ ನೀಡುತ್ತಾರೆ.ಈ ಕಾರಣದಿಂದಲೂ ಕಾರು ಕೊಳ್ಳುವವರ ಸಂಖ್ಯೆ ಹಬ್ಬದ ಸಮಯದಲ್ಲಿ ಹೆಚ್ಚು . ಆದರೆ ಈ ಬಾರಿಯ ಹಬ್ಬದ ಸಮಯದಲ್ಲಿ ಇದರಲ್ಲಿ ಒಂದಷ್ಟು ವ್ಯತ್ಯಯ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಏನಪ್ಪಾ ಅಂತಹುದು ಎಂದಿರಾ ?

ನಿಮಗೆಲ್ಲಾ ಗೊತ್ತಿರುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳನ್ನ ಅಂದು ಕೊಂಡ ಮಟ್ಟದಲ್ಲಿ ಉತ್ಪಾದನೆ ಮಾಡಲು ಸಾಧ್ಯವಾಗಿಲ್ಲ . ಅದರಲ್ಲೂ ಮುಖ್ಯವಾಗಿ ಚೀನಾ ದೇಶದಲ್ಲಿ ಕೂಡ ಇಂತಹ ಚಿಪ್ ನ ಉತ್ಪಾದನೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಕಾರು ತಯಾರಿಕೆಯಲ್ಲಿ ಕೂಡ ಇಳಿಮುಖ ಕಂಡಿದೆ. ಹೀಗಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಭಾರತದ ಹಬ್ಬದ ತಿಂಗುಳುಗಳಲ್ಲಿ ಗ್ರಾಹಕರು ಕೇಳಿದ ಕಾರನ್ನ ಕೊಡುವ ಸ್ಥಿತಿಯಲ್ಲಿ ಆಟೋಮೊಬೈಲ್ ಕ್ಷೇತ್ರವಿಲ್ಲ .

ಈ ಬಾರಿ ಹಬ್ಬಕ್ಕೆ ನಿಮ್ಮಿಷ್ಟದ ಕಾರು ಸಿಕ್ಕಿತೇ ?

ಎರಡು ತಿಂಗಳಲ್ಲಿ ಪೂರೈಸಲಾಗದ ಬೇಡಿಕೆ ಎಷ್ಟು ಗೊತ್ತಾ ?

ಒಟ್ಟು ಪ್ಯಾಸೆಂಜರ್ ಕಾರು ಮಾರುಕಟ್ಟೆಯ ನಾಲ್ಕು ಪ್ರತಿಶತ ಕೇವಲ ಎರಡು ತಿಂಗಳಲ್ಲಿ ನಷ್ಟವಾಗಲಿದೆ. ಒಂದು ಲಕ್ಷದಿಂದ ಒಂದು ಲಕ್ಷ ಹತ್ತು ಸಾವಿರ ಕಾರುಗಳ ಪೂರೈಕೆಯ ಕೊರೆತೆಯನ್ನ ಈ ತಿಂಗಳುಗಳಲ್ಲಿ ನಾವು ಕಾಣಲಿದ್ದೇವೆ. ನಿಮಗೆಲ್ಲಾ ಅಚ್ಚರಿ ಎನ್ನಿಸಬಹುದು ಈಗಾಗಲೇ ಬುಕಿಂಗ್ ಆಗಿರುವ ಆದರೆ ಅದನ್ನ ಪೂರೈಸಲಾಗದ ಕಾರುಗಳ ಸಂಖ್ಯೆ ನಾಲ್ಕರಿಂದ ಐದು ಲಕ್ಷವಿದೆ. ಈ ಎಲ್ಲಾ ಕಾರಣಗಳಿಂದ ಒಂದು ಬಿಲಿಯನ್ ಡಾಲರ್ ರೆವಿನ್ಯೂ ನಷ್ಟವನ್ನ ಆಟೋಮೊಬೈಲ್ ಕ್ಷೇತ್ರ ಅನುಭವಿಸಲಿದೆ.

ಇದೆಕ್ಕೆಲ್ಲ ಕಾರಣವೇನು ?

ಕೋವಿಡ್ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್ ಚಿಪ್ ತಯಾರಿಕೆಯಲ್ಲಿ ಕುಸಿತವಾಗಿದೆ. ಇದು ಬೇರೆ ಕೆಲಸದಂತೆ ವರ್ಕ್ ಫ್ರಮ್ ಹೋಂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಒಂದನ್ನೊಂದು ಬೆಸೆಯುವ ಚಿಪ್‌ಗಳ ಬೇಡಿಕೆ ಹೆಚ್ಚಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮೂರೂವರೆಯಿಂದ ನಾಲ್ಕು ಲಕ್ಷ ಕಾರುಗಳನ್ನ ಉತ್ಪಾದಿಸಲಾಗುತ್ತಿತ್ತು. ಈ ಬಾರಿ ಆ ಸಂಖ್ಯೆ ಒಂದು ಲಕ್ಷ ಎಂಬತ್ತು ಸಾವಿರದಿಂದ ಎರಡುಕಾಲು ಲಕ್ಷವಾಗಲಿದೆ. ಡಿಸೆಂಬರ್ 2009 ರ ನಂತರದ ಅತಿ ಕಡಿಮೆ ಉತ್ಪಾದನೆ ಸಂಖ್ಯೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.

ಭಾರತದ ಲೀಡಿಂಗ್ ಕಾರು ಉತ್ಪಾದಕರಾದ ಮಾರುತಿ ಮತ್ತು ಮಹಿಂದ್ರಾ 60 ಪ್ರತಿಶತ ಕಡಿಮೆ ಕಾರುಗಳನ್ನ ಉತ್ಪಾದಿಸುರುವುದಾಗಿ ಹೇಳಿಕೆ ನೀಡಿದ್ದಾರೆ. ಕಳೆದು ಹೋದ ಮಾರುಕಟ್ಟೆಯನ್ನ ಮುಂದಿನ ತಿಂಗಳುಗಳಲ್ಲಿ ತುಂಬಿಕೊಳ್ಳುವ ಸವಾಲು ಆಟಿಮೊಬೈಲ್ ಇಂಡಸ್ಟ್ರಿ ಮುಂದಿದೆ.

English summary

New car sales decline ahead of festive season due to semiconductor shortage

Passenger vehicle sales in India have once again taken a hit due to ongoing global semiconductor shortage, which saw them cut production due to unavailability of electronic chips. Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X