For Quick Alerts
ALLOW NOTIFICATIONS  
For Daily Alerts

50,000 ರುಪಾಯಿ ಮತ್ತು ಮೇಲ್ಪಟ್ಟ ಮೊತ್ತದ ಚೆಕ್ ಗೆ ಬರಲಿದೆ ಹೊಸ ನಿಯಮ

|

ಚೆಕ್ ಪಾವತಿಯಲ್ಲಿ ಸುರಕ್ಷತೆ ತರುವ ಉದ್ದೇಶದಿಂದ ಆರ್ ಬಿಐ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಹೊಸ ನಿರ್ಧಾರವೊಂದನ್ನು ಗುರುವಾರ ಘೋಷಿಸಲಾಗಿದೆ. 50,000 ರುಪಾಯಿ ಮತ್ತು ಮೇಲ್ಪಟ್ಟ ಮೊತ್ತದ ಚೆಕ್ ಗೆ ಈ "ಪಾಸಿಟಿವ್ ಪೇ" ಚೌಕಟ್ಟನ್ನು ರೂಪಿಸಲಾಗುವುದು. ಇದು ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬ ಬಗ್ಗೆ ಪ್ರತ್ಯೇಕವಾಗಿ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗುವುದು.

50,000 ರುಪಾಯಿ ಮತ್ತು ಮೇಲ್ಪಟ್ಟ ಮೊತ್ತದ ಚೆಕ್ ನೀಡುವಾಗ ಆ ಖಾತೆದಾರರ ಬ್ಯಾಂಕ್ ಕೆಲವು ನಿಯಮ ಅನುಸರಿಸುತ್ತದೆ. ಚೆಕ್ ನೀಡುವಾಗಲೇ ಆ ಖಾತೆದಾರರು ಬ್ಯಾಂಕ್ ಗೆ ಮಾಹಿತಿ ನೀಡಬೇಕು. ಚೆಕ್ ಸಂಖ್ಯೆ ಏನು, ದಿನಾಂಕ, ಯಾರ ಹೆಸರಿಗೆ ಚೆಕ್ ನೀಡಲಾಗುತ್ತಿದೆ, ಖಾತೆ ಸಂಖ್ಯೆ, ಮೊತ್ತ ಇತ್ಯಾದಿಯನ್ನು ಒದಗಿಸಬೇಕು.

 

ಇಷ್ಟರ ಜತೆಗೆ ಆ ಚೆಕ್ ನ ಮುಂಭಾಗ ಹಾಗೂ ಹಿಂಭಾಗದ ಫೋಟೋ ಸಹ ತೆಗೆದು, ಅದನ್ನು ಬ್ಯಾಂಕ್ ಗೆ ನೀಡಬೇಕು. ಇಷ್ಟನ್ನೂ ಚೆಕ್ ಅನ್ನು ವಿತರಿಸುವ ಮುನ್ನ ಮಾಡಬೇಕು. ಚೆಕ್ ಪಡೆದ ವ್ಯಕ್ತಿಗೆ ಮೊತ್ತವನ್ನು ನಗದೀಕರಿಸುವ ಮುನ್ನ ಬ್ಯಾಂಕ್ ನಲ್ಲಿ ಪಾಸಿಟಿವ್ ಪೇ ಮೂಲಕ ಖಾತೆದಾರರು ಒದಗಿಸಿದ ಎಲ್ಲ ಮಾಹಿತಿ ಜೊತೆಗೆ ತಾಳೆ ಆಗುತ್ತಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ಎಲ್ಲವೂ ಸರಿಯಿದೆ ಅಂತಾದ ಮೇಲೆ ಚೆಕ್ ಮೊತ್ತ ನಗದಾಗುತ್ತದೆ.

50,000 ರುಪಾಯಿ ಮತ್ತು ಮೇಲ್ಪಟ್ಟ ಮೊತ್ತದ ಚೆಕ್ ಗೆ ಬರಲಿದೆ ಹೊಸ ನಿಯಮ

ಚೆಕ್ ಅನ್ನು ತಿದ್ದುವ ಮೂಲಕ ಆಗುತ್ತಿರುವ ವಂಚನೆಯನ್ನು ಈ ಹೊಸ ಪದ್ಧತಿಯಿಂದ ಕಡಿಮೆ ಮಾಡಬಹುದು ಎಂಬ ನಂಬಿಕೆ ಇದೆ.

English summary

New Rule For Cheque Of 50000 And Above; Made Safe Via Positive Pay

RBI in its bi-monthly monetary policy meet on Thursday announced the decision to introduce a framework of Positive pay for all cheques worth of Rs 50,000 and above.
Company Search
COVID-19