ಷೇರುಪೇಟೆಯಲ್ಲಿ ಗೂಳಿ ಓಟ: 13,000 ಗಡಿ ಮುಟ್ಟಿದ ನಿಫ್ಟಿ
ದೀಪಾವಳಿ ಬಂದು ಹೋದರೂ ಭಾರತೀಯ ಷೇರುಪೇಟೆಯಲ್ಲಿ ಹಬ್ಬದ ವಾತಾವರಣ ಮುಂದುವರಿದಿದೆ. ಸತತ ಏರುಮುಖದಲ್ಲಿಯೇ ಸಾಗುತ್ತಿರುವ ರಾಷ್ಟ್ರೀಯ ಷೇರುಪೇಟೆ ನಿಫ್ಟಿ ದಾಖಲೆಯ ಮಟ್ಟದತ್ತ ಗುರಿನೆಟ್ಟು ಸಾಗುತ್ತಿದ್ದು, ಮಂಗಳವಾರ 13,000 ಗಡಿ ಮುಟ್ಟಿದೆ.
ಮಾರ್ಚ್ 2020 ರ ಕೊನೆಯಲ್ಲಿ 7,500 ಪಾಯಿಂಟ್ಸ್ಗಳವರೆಗೆ ಭಾರೀ ಕುಸಿತ ಕಂಡಿದ್ದ ನಿಫ್ಟಿ, ಕಳೆದ ಎಂಟು ತಿಂಗಳಲ್ಲಿ ಬೆಂಚ್ಮಾರ್ಕ್ ಸೂಚ್ಯಂಕವು ಶೇಕಡಾ 73 ಕ್ಕಿಂತ ಹೆಚ್ಚು ಗಳಿಸಿ 13,000 ದಾಟಿದೆ.
ಕೋವಿಡ್-19 ಲಸಿಕೆ ಸಿಗುವ ಆಶಾವಾದವು ಹೂಡಿಕೆದಾರರ ಮನೋಬಲವನ್ನು ಹೆಚ್ಚಿಸಿದ್ದು, ನವೆಂಬರ್ 24ರ ಬೆಳಿಗ್ಗೆ ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ಮಟ್ಟವನ್ನು ತಲುಪಿವೆ. ಸೆನ್ಸೆಕ್ಸ್ 44,499.62 ಮತ್ತು ನಿಫ್ಟಿ 13,044ರಷ್ಟು ಪಾಯಿಂಟ್ಸ್ಗಳನ್ನು ಮುಟ್ಟಿವೆ.
ಕೋವಿಡ್-19 ಸಾಂಕ್ರಾಮಿಕವು ವಿಶ್ವದ ಎಲ್ಲಾ ಕ್ಷೇತ್ರಗಳಲ್ಲಿ ಮಾರಕವಾದಂತೆ ಈಕ್ವಿಟಿ ಮಾರುಕಟ್ಟೆಗಳ ಮೇಲೂ ಭಾರೀ ಪರಿಣಾಮ ಬೀರಿತು. ಮಾರ್ಚ್ನಲ್ಲಿ ಕೊರೊನಾವೈರಸ್ ಜಾಗತಿಕವಾಗಿ ಹಾನಿಗೊಳಪಡಿಸಿದರ ಪರಿಣಾಮ ಈಕ್ವಿಟಿ ಮಾರುಕಟ್ಟೆಗಳು ಭಾರೀ ಕುಸಿತಕ್ಕೆ ಕಾರಣವಾಯಿತು. ಆ ಮಟ್ಟಿಗೆ ಆರ್ಥಿಕತೆ ಮತ್ತು ಮಾರುಕಟ್ಟೆಯು ಕುಸಿಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ಕಳೆದ ಕೆಲವು ವಾರಗಳಲ್ಲಿ, ಮೂರು ಸಂಭಾವ್ಯ ಲಸಿಕೆಗಳು ಅಂತಿಮ ಪ್ರಯೋಗಗಳಲ್ಲಿ ಸಾಕಷ್ಟು ಭರವಸೆಯನ್ನು ತೋರಿಸಿವೆ. ಆದರೂ ಕೊರೊನಾವೈರಸ್ ಪ್ರಕರಣಗಳು ಏರುತ್ತಲೇ ಇದ್ದರೂ ಸಹ ಮಾರುಕಟ್ಟೆಯಲ್ಲಿ ಏರುಮುಖವನ್ನು ಕಾಣಬಹುದಾಗಿದೆ.