ಕಳೆದ ವಾರದ ಟಾಪ್ 10 ಮೌಲ್ಯ: HDFC, ರಿಲಯನ್ಸ್ಗೆ ಭಾರಿ ನಷ್ಟ
ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ 9 ಕಂಪನಿಗಳಿಂದ ಒಟ್ಟಾರೆ 2,48,542.3 ಕೋಟಿ ರು ಮೌಲ್ಯ ನಷ್ಟವಾಗಿದೆ. ಕಳೆದ ವಾರದಲ್ಲಿ ಒಟ್ಟಾರೆ 9 ಕಂಪನಿಗಳು ನಷ್ಟ ಅನುಭವಿಸಿದ್ದು, ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಅತ್ಯಧಿಕ ನಷ್ಟ ಅನುಭವಿಸಿವೆ.
ಬಿಎಸ್ಇಯಲ್ಲಿ 30 ಷೇರುಗಳು ಸೆನ್ಸೆಕ್ಸ್ 514.69 ಅಂಕ ಅಥವಾ ಶೇ 2.49 ರಷ್ಟು ಇಳಿಕೆ ಕಂಡಿತ್ತು. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚು ಕಂಪನಿ ಮೌಲ್ಯ ಉಳಿಸಿಕೊಂಡಿವೆ. ಟಾಪ್ 10 ರಲ್ಲಿ 9 ಕಂಪನಿಗಳ ಮೌಲ್ಯ ಬದಲಾಗಿದೆ. ಹಬ್ಬದ ರಜೆಗಳಿಗೂ ಮುನ್ನ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಕಂಡು ಬಂದಿಲ್ಲವಾದ್ದರಿಂದ ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ಐಸಿಐಸಿಐ ಬ್ಯಾಂಕ್ ಮಾತ್ರ ಟಾಪ್ 10 ಪಟ್ಟಿಯಲ್ಲಿ ಲಾಭ ಗಳಿಸಿದ ಸಾಧನೆ ಮಾಡಿದೆ.
ಐಸಿಐಸಿಐ ಬ್ಯಾಂಕ್ ಕಳೆದ ವಾರ 30,010.44 ಕೋಟಿ ರು ಏರಿಕೆ ಕಂಡು 5,56,507.71 ಕೋಟಿ ರು ಗೇರಿಸಿಕೊಂಡಿದೆ. ಕಳೆದ ಎರಡು ವಾರದ ಹಿಂದೆ ಟಾಪ್ 10 ರಲ್ಲಿ 5 ಕಂಪನಿಗಳ ಮೌಲ್ಯ ಬದಲಾಗಿತ್ತು. ಆದರೆ, ಕಳೆದ ವಾರ ಹೆಚ್ಚಿನ ಲಾಭವನ್ನು ಟಾಪ್ ಕಂಪನಿಗಳು ಕಂಡಿಲ್ಲ. ರಜೆಗಳ ನಡುವೆ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಕಂಡು ಬಂದಿವೆ. ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ಯಾವ ಕಂಪನಿ ಮೌಲ್ಯ ಏರಿಕೆಯಾಗಿದೆ ಹಾಗೂ ಯಾವ ಕಂಪನಿ ಮೌಲ್ಯ ಕುಸಿದಿದೆ ಎಂಬ ವಿವರ ಮುಂದೆ ಓದಿ..

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ 56, 741.2 ಕೋಟಿ ರು ಕುಸಿತ ಕಂಡು 16,09,686.75 ರು ಆಗಿದೆ. ಎಚ್ಡಿಎಫ್ಸಿ ಬ್ಯಾಂಕ್ 54,843.3 ಕೋಟಿ ರು ಮೌಲ್ಯ ಇಳಿಸಿಕೊಂಡು 8,76,528.42 ಕೋಟಿ ರು ತಲುಪಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 37,452.9 ಕೋಟಿ ರು ಕುಸಿತ ಕಂಡು 12,57,233.58 ಕೋಟಿ ರು ಮೌಲ್ಯ ಕಂಡಿದೆ. ಇನ್ಫೋಸಿಸ್ 27,678.78 ಕೋಟಿ ರು ಇಳಿಸಿಕೊಂಡು 7,01,731.59 ಕೋಟಿ ರು ಮೌಲ್ಯ ಹೊಂದಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ
ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 27,545.09 ಕೋಟಿ ರು ಇಳಿಕೆ ಕಂಡು 4,30,558.09 ಕೋಟಿ ರು ಮೌಲ್ಯಕ್ಕೇರಿದೆ. ಬಜಾಜ್ ಫೈನಾನ್ಸ್ 18,774.8 ಕೋಟಿ ರು ಇಳಿಸಿಕೊಂಡು 4,46,801.66 ಕೋಟಿ ರುಗೆ ಕುಸಿತ ಕಂಡಿದೆ. ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 14, 356 ಕೋಟಿ ರು ಇಳಿಕೆ ಕಂಡು 5,62,480.40 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಎಚ್ಡಿಎಫ್ಸಿ 10,659.37 ಕೋಟಿ ರು ಇಳಿಕೆ ಕಂಡು 5,14,217.69 ಕೋಟಿ ರು ತಲುಪಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 490.86ಕೋಟಿ ರು ಇಳಿಸಿಕೊಂಡು 4,48,372.48 ಕೋಟಿ ರು ಮೌಲ್ಯಕ್ಕಿಳಿದಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 30,010.44 ಕೋಟಿ ರು ಏರಿಕೆ ಕಂಡು 5,56,507.71 ಕೋಟಿ ರು ಆಗಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ಡಿಎಫ್ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್, ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.