For Quick Alerts
ALLOW NOTIFICATIONS  
For Daily Alerts

ನೀರವ್ ಮೋದಿಯನ್ನು ಹಸ್ತಾಂತರಿಸಲು ಬ್ರಿಟನ್ ನ್ಯಾಯಾಲಯ ಅನುಮೋದನೆ

|

ವಿಜಯ್ ಮಲ್ಯ ಬಳಿಕ ರಾಷ್ಟ್ರದ 2ನೇ ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿ ಗುರುತಿಸಿಕೊಂಡಿರುವ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಕಾಲ ಸಮೀಪಿಸಿದೆ. ನೀರವ್ ಮೋದಿ ವಿರುದ್ಧ ಬ್ರಿಟನ್‌ನಲ್ಲಿ ಎರಡು ವರ್ಷಗಳ ಕಾನೂನು ಹೋರಾಟದ ನಂತರ ಭಾರತವು ಉತ್ತಮ ಯಶಸ್ಸನ್ನು ಕಂಡಿದೆ.

 

ಭಾರತದ ಮನವಿಯನ್ನು ಒಪ್ಪಿಕೊಂಡ ಯುಕೆ ನ್ಯಾಯಾಲಯವು ನೀರವ್ ಮೋದಿಯವರನ್ನು ಹಸ್ತಾಂತರಿಸಲು ಅನುಮೋದನೆ ನೀಡಿದೆ. ಪಿಎನ್‌ಬಿ ಹಗರಣ ಪ್ರಕರಣದಲ್ಲಿ ಪರಾರಿಯಾಗಿದ್ದ ನೀರವ್ ಮೋದಿಗೆ ಸಂಬಂಧಿಸಿದಂತೆ ಹಣ ವರ್ಗಾವಣೆಯ ಆರೋಪವನ್ನು ಯುಕೆ ನ್ಯಾಯಾಲಯ ಸ್ವೀಕರಿಸಿದೆ. ನೀರವ್ ಮೋದಿಯವರನ್ನು ಹಸ್ತಾಂತರಿಸುವ ಪ್ರಕರಣವನ್ನು ಬ್ರಿಟನ್‌ನಲ್ಲಿ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು, ನೀರವ್ ಮೋದಿ ಸಾಕ್ಷ್ಯಗಳನ್ನು ನಾಶಮಾಡಲು ಮತ್ತು ಸಾಕ್ಷಿಗಳನ್ನು ಬೆದರಿಸಲು ಸಂಚು ರೂಪಿಸಿದ್ದಾರೆ ಎಂದು ಹೇಳಿದರು.

ನೀರವ್ ಮೋದಿಯನ್ನು ಹಸ್ತಾಂತರಿಸಲು ಬ್ರಿಟನ್ ನ್ಯಾಯಾಲಯ ಅನುಮೋದನೆ

ನೀರವ್ ಮೋದಿ ವಿರುದ್ಧ ಹಣ ವರ್ಗಾವಣೆ ಪ್ರಕರಣವನ್ನು ಮಾಡಲಾಗಿದೆ ಎಂದು ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರು ಒಪ್ಪಿಕೊಂಡಿದ್ದಾರೆ. ನ್ಯಾಯಾಲಯವು "ಈ ಪ್ರಕರಣಗಳಲ್ಲಿ ಹೆಚ್ಚಿನದನ್ನು ಭಾರತದಲ್ಲಿ ವಿಚಾರಣೆ ನಡೆಸಬೇಕಾಗಿದೆ. ಅವನು ತಪ್ಪಿತಸ್ಥನೆಂದು ಸೂಚಿಸುವ ಸಾಕಷ್ಟು ಪುರಾವೆಗಳಿವೆ ಎಂದು ನಾನು ಮತ್ತೆ ತೃಪ್ತಿ ಹೊಂದಿದ್ದೇನೆ" ಎಂದು ಹೇಳಿದರು.

ಹಸ್ತಾಂತರ ವಾರಂಟ್‌ನಲ್ಲಿ ನೀರವ್ ಮೋದಿಯನ್ನು 19 ಮಾರ್ಚ್ 2019 ರಂದು ಬಂಧಿಸಲಾಯಿತು. ಮ್ಯಾಜಿಸ್ಟ್ರೇಟ್ ಮತ್ತು ಹೈಕೋರ್ಟ್ ಮಟ್ಟದಲ್ಲಿ ಜಾಮೀನು ಪಡೆಯಲು ಅವರು ಮಾಡಿದ ಅನೇಕ ಪ್ರಯತ್ನಗಳನ್ನು ಪದೇ ಪದೇ ತಿರಸ್ಕರಿಸಲಾಯಿತು. ನೀರವ್ ಮೋದಿ ಎರಡು ಕಡೆಯಿಂದ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗಿದೆ.

English summary

PNB Scam Case : Nirav Modi Can Be Extradited To India: UK Court

Jeweller Nirav Modi, wanted for fraud and money laundering in the Rs 14,000 crore Punjab National Bank (PNB) loan scam, can be extradited to India, a UK judge ruled today.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X