For Quick Alerts
ALLOW NOTIFICATIONS  
For Daily Alerts

ಪಿಎನ್‌ಬಿ ಪ್ರಕರಣ: ನೀರವ್ ಮೋದಿ ಹಸ್ತಾಂತರಕ್ಕೆ ಬ್ರಿಟನ್ ಸಮ್ಮತಿ

|

ವಿಜಯ್ ಮಲ್ಯ ಬಳಿಕ ರಾಷ್ಟ್ರದ 2ನೇ ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿ ಗುರುತಿಸಿಕೊಂಡಿರುವ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಕಾಲ ಸಮೀಪಿಸಿದೆ. ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ಸುಮಾರು 14 ಸಾವಿರ ಕೋಟಿ ಮೋಸ ಮಾಡಿರುವ ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಬ್ರಿಟನ್ ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ.

 

ಭಾರತದಲ್ಲಿ ಪಿಎನ್‌ಬಿ ಬ್ಯಾಂಕ್‌ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಇಂಗ್ಲೆಂಡ್‌ನಲ್ಲಿ ತಲೆಮರೆಸಿಕೊಂಡಿದ್ದ ನೀರವ್‌ ಮೋದಿ ಗಡಿಪಾರು ಆದೇಶಕ್ಕೆ ಬ್ರಿಟನ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಸಹಿ ಹಾಕಿದ್ದಾರೆ. ಈ ಕುರಿತು ಸಿಬಿಐ ಅಧಿಕಾರಿಗಳ ಮಾಹಿತಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಪಿಎನ್‌ಬಿ ಪ್ರಕರಣ: ನೀರವ್ ಮೋದಿ ಹಸ್ತಾಂತರಕ್ಕೆ ಬ್ರಿಟನ್ ಸಮ್ಮತಿ

ನೀರವ್ ಮೋದಿ ವಿರುದ್ಧ ಹಣ ವರ್ಗಾವಣೆ ಪ್ರಕರಣವನ್ನು ಮಾಡಲಾಗಿದೆ ಎಂದು ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರು ಒಪ್ಪಿಕೊಂಡಿದ್ದರು. ಕಳೆದ ವರ್ಷ ಫೆಬ್ರವರಿ 25 ರಂದು ಗಡಿಪಾರಿಗೆ ಆದೇಶ ನೀಡಿದ್ದರು.

ಈ ಹಿಂದೆ ನೀರವ್ ಮೋದಿ ಹಸ್ತಾಂತರಕ್ಕೆ ಸಮ್ಮತಿ ಸೂಚಿಸಿದ್ದ ಲಂಡನ್ನಿನ ವೆಸ್ಟ್‌ ಮಿನಿಸ್ಟರ್ ನ್ಯಾಯಾಲಯವು ಪ್ರಕರಣವನ್ನು ಗೃಹ ಕಾರ್ಯದರ್ಶಿಗೆ ವರ್ಗಾಯಿಸಿತ್ತು.

ಇಷ್ಟೆಲ್ಲಾ ಆದರೂ 50 ವರ್ಷದ ನೀರವ್‌ ಮೋದಿಗೆ ಇನ್ನೂ ಆಯ್ಕೆಗಳು ಮುಗಿದಿಲ್ಲ ಎಂಬುದು ಗಮನಾರ್ಹ. ಈ ಆದೇಶ ಹೊರಬಿದ್ದ 28 ದಿನಗಳ ಒಳಗೆ ಇದನ್ನು ಬ್ರಿಟನ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಆಯ್ಕೆ ಅವರಿಗೆ ಇದೆ. ಈ ಪ್ರಕ್ರಿಯೆಗೆ ತಿಂಗಳು ಅಥವಾ ವರ್ಷಗಳೇ ತುಂಬಬಹುದು.

English summary

Nirav Modi Extradition To India Cleared By UK Govt

Scam-accused billionaire Nirav Modi's extradition to India has been cleared by the British government.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X