For Quick Alerts
ALLOW NOTIFICATIONS  
For Daily Alerts

GST ಪರಿಹಾರದ ಬಗ್ಗೆ ಮೂಡದ ಒಮ್ಮತ: ಕೇಂದ್ರದ ಪರಿಹಾರಕ್ಕೆ 12 ರಾಜ್ಯಗಳ ಒಪ್ಪಿಗೆ

|

ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ನೀಡಬೇಕಾದ ಜಿಎಸ್ ಟಿ ಪರಿಹಾರ ವಿಚಾರವಾಗಿ ಸೋಮವಾರ ರಾತ್ರಿ ನಡೆದ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಲು ಸಾಧ್ಯವಾಗಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ ಟಿ ಸಮಿತಿ ಸಭೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ಸಭೆಯ ಕೊನೆಯಲ್ಲಿ ಕೇಂದ್ರ ಸರ್ಕಾರದ ಪರಿಹಾರವನ್ನು 12 ರಾಜ್ಯಗಳು ಒಪ್ಪಿಕೊಂಡಿವೆ. ಮಾರುಕಟ್ಟೆಯಿಂದ ಸಾಲ ಪಡೆಯುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿವೆ. ಇತರ 9 ರಾಜ್ಯಗಳು ಇದನ್ನು ಒಪ್ಪಿಕೊಂಡಿಲ್ಲ. ಕೇಂದ್ರವೇ ಪರಿಹಾರವನ್ನು ನೀಡಬೇಕು ಹಾಗೂ ಸಾಲವನ್ನು ಕೇಂದ್ರವೇ ಪಡೆಯಬೇಕು ಎಂದಿವೆ.

GST ಪರಿಹಾರದ ಬಗ್ಗೆ ಮೂಡದ ಒಮ್ಮತ: ಪರಿಹಾರಕ್ಕೆ 12 ರಾಜ್ಯಗಳ ಒಪ್ಪಿಗೆ

 

ಈ ಬೇಡಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಮಯ ಕೇಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ರಾಜ್ಯಗಳಿಗೆ ನೀಡಬೇಕಾಗಿರುವ ಪರಿಹಾರ ಮೊತ್ತ 97,000 ಕೋಟಿ ರುಪಾಯಿ (ಕೊರೊನಾಗೆ ಸಂಬಂಧಿಸಿದ ಪರಿಹಾರ ಮೊತ್ತವೂ ಸೇರಿ 2.35 ಲಕ್ಷ ಕೋಟಿ ರುಪಾಯಿ).

ಜಿಎಸ್ ಟಿ ಜಾರಿಯಿಂದ ಆಗುವ ರಾಜ್ಯ ಸರ್ಕಾರದ ಆದಾಯ ನಷ್ಟವನ್ನು ಕೇಂದ್ರದಿಂದ ಭರಿಸುವಂತೆ ಭರವಸೆ ನೀಡಲಾಗಿತ್ತು. ಇನ್ನು ಕೊರೊನಾ ಲಾಕ್ ಡೌನ್ ನಿಂದಾಗಿ ರಾಜ್ಯ ಸರ್ಕಾರದ ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ಕುಗ್ಗಿದೆ.

English summary

No Consensus On GST Compensation; 12 States Accept Centre's Solution

No consensus on GST compensation on Monday, October 12, 2020. 12 state accepted centre's solution.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X