For Quick Alerts
ALLOW NOTIFICATIONS  
For Daily Alerts

ಪಾಲ್ ಆರ್. ಮಿಲ್ ಗ್ರೋಮ್ ಮತ್ತು ರಾಬರ್ಟ್ ಬಿ. ವಿಲ್ಸನ್ ಗೆ 2020ರ ಅರ್ಥಶಾಸ್ತ್ರ ನೊಬೆಲ್

|

2020ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಬಹುಮಾನವು ಅಮೆರಿಕನ್ನರಾದ ಪಾಲ್ ಆರ್. ಮಿಲ್ ಗ್ರೋಮ್ ಮತ್ತು ರಾಬರ್ಟ್ ಬಿ. ವಿಲ್ಸನ್ ಗೆ ಸಿಕ್ಕಿದೆ. "ಹರಾಜು ಸಿದ್ಧಾಂತದಲ್ಲಿನ ಸುಧಾರಣೆ ಮತ್ತು ಹೊಸ ಹರಾಜು ರೂಪ"ಕ್ಕಾಗಿ ಈ ಬಾರಿ ಅರ್ಥಶಾಸ್ತ್ರದ ನೊಬೆಲ್ ತಮ್ಮದಾಗಿಸಿಕೊಂಡಿದ್ದಾರೆ.

ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಪ್ರಧಾನ ಕಾರ್ಯದರ್ಶಿ ಗೊರಾನ್ ಹನ್ಸನ್ ಅವರು ಸೋಮವಾರದಂದು ಸ್ಟಾಕ್ ಹೋಮ್ ನಲ್ಲಿ ವಿಜೇತರನ್ನು ಘೋಷಣೆ ಮಾಡಿದರು. ತಾಂತ್ರಿಕವಾಗಿ ಹೇಳಬೇಕೆಂದರೆ, ಸ್ವೆರಿಜಿಸ್ ರಿಕ್ಸ್ ಬ್ಯಾಂಕ್ ನಿಂದ ಆಲ್ಫ್ರೆಡ್ ನೊಬೆಲ್ ಸ್ಮರಣೆಯಲ್ಲಿ ಅರ್ಥಶಾಸ್ತ್ರ ವಿಜ್ಞಾನದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ.

LTC ಹಾಗೂ ಹಬ್ಬದ ಮುಂಗಡ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್

 

ಎರಡನೇ ವಿಶ್ವಯುದ್ಧ ನಂತರ ಜಾಗತಿಕವಾಗಿ ಆರ್ಥಿಕ ಕುಸಿತ ಕಾಣುವಂತಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್ ಡೌನ್ ನಿಂದಾಗಿ ವ್ಯಾಪಾರ- ವಹಿವಾಟು ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಆರ್ಥಿಕ ಸುಧಾರಣೆಗಾಗಿ ಪಾಲ್ ಆರ್. ಮಿಲ್ ಗ್ರೋಮ್ ಮತ್ತು ರಾಬರ್ಟ್ ಬಿ. ವಿಲ್ಸನ್ ಹೊಸ ಹರಾಜು ಸ್ವರೂಪವನ್ನು ಮುಂದಿಟ್ಟಿದ್ದನ್ನು ಸ್ಮರಿಸಲಾಗಿದೆ.

ಮಿಲ್ ಗ್ರೋಮ್, ವಿಲ್ಸನ್ ಗೆ 2020ರ ಅರ್ಥಶಾಸ್ತ್ರ ನೊಬೆಲ್

ಈ ಬಹುಮಾನವನ್ನು ಮೊದಲಿಗೆ ಆರಂಭಿಸಿದ್ದು 1969ರಲ್ಲಿ. ಕಳೆದ ವರ್ಷ ಮಸಾಚ್ಯುಸೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಬ್ಬರು ಸಂಶೋಧಕರಿಗೆ ಹಾಗೂ ಮೂರನೆಯವರು ಹಾರ್ವರ್ಡ್ ವಿ.ವಿ.ಯವರಿಗೆ ಈ ಪ್ರಶಸ್ತಿ ಬಂದಿತ್ತು. ಜಾಗತಿಕ ಬಡತನ ಕಡಿಮೆ ಮಾಡುವ ಪ್ರಯತ್ನಕ್ಕೆ ಆ ಗೌರವ ಸಂದಿತ್ತು.

ಈ ಪ್ರತಿಷ್ಠಿತ ಪ್ರಶಸ್ತಿಗೆ 10 ಮಿಲಿಯನ್ ಕ್ರೋನ (1.1 ಮಿಲಿಯನ್ ಯುಎಸ್ ಡಿ) ನಗದು ಬಹುಮಾನ ಹಾಗೂ ಚಿನ್ನದ ಪದಕ ನೀಡಲಾಗುವುದು.

English summary

Nobel Economic Science Award 2020 To Americans Paul R Milgrom and Robert B Wilson

Americans Paul R Milgrom and Robert B Wilson have won the Nobel Prize in economic science for 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X