For Quick Alerts
ALLOW NOTIFICATIONS  
For Daily Alerts

ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಯಾವ ನಗರದಲ್ಲಿ ಎಷ್ಟು?

|

ಎಲ್ ಪಿಜಿ ಸಿಲಿಂಡರ್ ದರಗಳ ತಿಂಗಳ ಪರಿಷ್ಕರಣೆಯಲ್ಲಿ 14.2 ಕೇಜಿ ತೂಕದ ಸಬ್ಸಿಡಿರಹಿತ ಸಿಲಿಂಡರ್ ಬೆಲೆಯಲ್ಲಿ ಬುಧವಾರ ಸರಾಸರಿ 63 ರುಪಾಯಿಯನ್ನು ಇಳಿಸಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸತತವಾಗಿ ಎರಡನೇ ತಿಂಗಳು ಎಲ್ ಪಿಜಿ ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ ಮಾಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಲೆ ಇಳಿದಿರುವುದರಿಂದ ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಹಕರಿಗೆ ಅನುಕೂಲವಾಗಲಿದೆ.

LPG ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಯಾವ ನಗರದಲ್ಲಿ ಎಷ್ಟು?

 

ಏಪ್ರಿಲ್ 1, 2020ರಿಂದ ಅನ್ವಯ ಆಗುವಂತೆ ದರದ ಮಾಹಿತಿ ಇಂತಿದೆ:

ದೆಹಲಿ 744 61.5 ರುಪಾಯಿ ಇಳಿಕೆ

ಕೋಲ್ಕತ್ತಾ 774.5 65 ರುಪಾಯಿ ಇಳಿಕೆ

ಮುಂಬೈ 714.5 62 ರುಪಾಯಿ ಇಳಿಕೆ

ಚೆನ್ನೈ 761.5 64.5 ರುಪಾಯಿ ಇಳಿಕೆ

ಮಾರ್ಚ್ ತಿಂಗಳಲ್ಲಿ ಪ್ರಮುಖ ನಗರಗಳಲ್ಲಿ ಎಲ್ ಪಿಜಿ ದರವನ್ನು ಸರಾಸರಿ 54 ರುಪಾಯಿ ಇಳಿಸಲಾಗಿತ್ತು. ಅದಕ್ಕೂ ಹಿಂದೆ, ದೆಹಲಿ ವಿಧಾನಸಭಾ ಚುನಾವಣೆ ನಂತರ 145 ರುಪಾಯಿ ಹೆಚ್ಚುಸಲಾಗಿತ್ತು. ಅಂತರರಾಷ್ಟ್ರೀಯ ಕಚ್ಚಾ ದರ ಮತ್ತು ರುಪಾಯಿ ಮೌಲ್ಯದ ಆಧಾರದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ದರ ನಿಗದಿ ಮಾಡುತ್ತವೆ.

ಭಾರತದಲ್ಲಿ ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 12 ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಪಡೆಯಲು ಅವಕಾಶ ಇದೆ. ಆ ನಂತರ ಖರೀದಿಸುವ ಸಿಲಿಂಡರ್ ಗಳಿಗೆ ಪೂರ್ತಿ ದರವನ್ನು ನೀಡಬೇಕು. ಸಬ್ಸಿಡಿ ಮೊತ್ತವು ನೇರವಾಗಿ ಖಾತೆಗೆ ವರ್ಗಾವಣೆ ಆಗುತ್ತದೆ.

ದೇಶದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ಆದಾಗಿನಿಂದ ಅಡುಗೆ ಅನಿಲಕ್ಕೆ ಬೇಡಿಕೆ ಹೆಚ್ಚಾಗಿದೆ.

English summary

Non Subsidised LPG Cylinder Rate Cut By 63 Rupees

On a monthly revision non subsidised LPG cylinder price cut by RS. 63. Here is the details.
Story first published: Wednesday, April 1, 2020, 17:37 [IST]
Company Search
COVID-19