ಸತತ ಇಳಿಕೆ ಬಳಿಕ ಚೇತರಿಕೆ ಕಂಡ ಭಾರತೀಯ ಷೇರು ಮಾರುಕಟ್ಟೆ
ಮುಂಬೈ, ನವೆಂಬರ್ 01: ಸತತ ಮಾರುಕಟ್ಟೆ ಕುಸಿತದ ಬಳಿಕ ದೀಪಾವಳಿ ಹಬ್ಬ ಕೆಲವೇ ದಿನಗಳು ಇರುವ ಮುಂಚೆ ಮುಂಬೈ ಷೇರು ಮಾರುಕಟ್ಟೆಯಲ್ಲಿ ಅಲ್ಪ ಚೇತರಿಕೆ ಕಂಡುಬಂದಿದೆ.
ಕಳೆದ ವಾರ ಷೇರು ಮಾರುಕಟ್ಟೆಯಲ್ಲಿ ಸತತ ಕುಸಿತವಾಗಿತ್ತು, ಒಂದು ದಿನ ಸಾವಿರಕ್ಕೂ ಅಧಿಕ ಸೂಚ್ಯಂಕ ಕೆಳಗಿಳಿದಿತ್ತು, ಸೋಮವಾರ ಸೆನ್ಸೆಕ್ಸ್ 357.85 ಸೂಚ್ಯಂಕ ಅಥವಾ ಶೇ.0.60 ಏರಿಕೆಯೊಂದಿಗೆ ಆರಂಭವಾಗಿದ್ದು, 59,577.48 ಸೂಚ್ಯಂಕಕ್ಕೆ ತಲುಪಿದೆ.
ಅದೇ ನಿಫ್ಟಿಯಲ್ಲೂ 135 ಸೂಚ್ಯಂಕ ಅಥವಾ 0.76ರ ಏರಿಕೆಯೊಂದಿಗೆ ಮಾರುಕಟ್ಟೆ ಆರಂಭವಾಗಿದೆ. ಇದರೊಂದಿಗೆ ನಿಫ್ಟಿ ಸೂಚ್ಯಂಕವು 17,806.40ಗೆ ತಲುಪಿದೆ.

ಮಾರುಕಟ್ಟೆ ವಾರ ಹಾಗೂ ದಿನದ ಆರಂಭದಲ್ಲಿ ಟಾಟಾ ಸ್ಟೀಲ್, ಭಾರತಿ ಏರ್ಟೆಲ್, ಎಚ್ಸಿಎಲ್ ಟೆಕ್ನಾಲಜಿ, ಇಂಡಸ್ ಬ್ಯಾಂಕ್, ಹಿಂಡಾಲ್ಕೋ ಹಾಗೂ ಟೆಕ್ ಮಹೀಂದ್ರಾ ಕಂಪನಿಗಳು ಶೇ.2ರಷ್ಟು ಏರಿಕೆ ಕಂಡಿವೆ.
ಇನ್ನು ಯುಪಿಎಲ್, ಬಜಾಜ್ ಫಿನ್ಸ್ ಸರ್ವೀಸ್, ನೆಸ್ಲೆ ಇಂಡಿಯಾ, ಮಹೀಂದ್ರಾ ಆಂಡ್ ಮಹೀಂದ್ರಾ, ಟಾಟಾ ಮೋಟಾರ್ಸ್ ಶೇ.1-4ರಷ್ಟು ಇಳಿಕೆಯನ್ನು ಕಂಡಿವೆ.
ಏತನ್ಮಧ್ಯೆ ನಿಫ್ಟಿ ಬ್ಯಾಂಕ್ ಸೂಚ್ಯಂಕಗಳಲ್ಲಿ 300ಕ್ಕೂ ಅಧಿಕ ಏರಿಕೆಯಾಗಿ 39,432,15ಕ್ಕೆ ತಲುಪಿದೆ.
ನಿಫ್ಟಿ ಮಿಡ್ಕ್ಯಾಪ್ ಸೂಚ್ಯಂಕವು 66ಕ್ಕೆ ಏರಿಕೆಯಾಗಿ, 8579.20ಕ್ಕೆ ಏರಿಕೆಯಾಗಿವೆ. ಹಾಗೆಯೇ ನಿಫ್ಟಿ ನೆಕ್ಸ್50 ಕೂಡ 300ರಷ್ಟು ಏರಿಕೆಯಾಗಿದೆ.42,401.60ಕ್ಕೆ ತಲುಪಿದೆ.
ಏಷ್ಯಾ ನಿಕ್ಕಿ 225 ಮಾರುಕಟ್ಟೆಯಲ್ಲೂ ಶೇ.2ರಷ್ಟು ಏರಿಕೆಯಾಗಿ, 29,508ಕ್ಕೆ ತಲುಪಿದೆ. ಅಂದರೆ ಸುಮಾರು 600 ಸೂಚ್ಯಂಕ ಏರಿಕೆಯಾಗಿದೆ. ಹಾಗೆಯೇ ಹ್ಯಾಂಗ್ಸ್ಯಾಂಗ್ ಹಾಗೂ ಹಾಂಗ್ಎಕ್ಸ್ಚೇಂಜ್ ಮಾರುಕಟ್ಟೆಯಲ್ಲಿ 350 ಅಂಕ ಇಳಿಕೆಯಾಗಿ 25,032ಕ್ಕೆ ತಲುಪಿದೆ.
ಶಾಂಗೈ ಕಾಂಪೋಸಿಟ್ನಲ್ಲೂ ಇಳಿಕೆಯಾಗಿದ್ದು, 9 ಸೂಚ್ಯಂಕ ಆರಂಭದಲ್ಲೇ ಇಳಿಕೆ ಕಂಡಿದ್ದು, 3540 ಆಗಿದೆ. ಕಳೆದ ಶುಕ್ರವಾರ ಅಮೆರಿಕ ಮಾರುಕಟ್ಟೆಯಲ್ಲಿ ತುಸು ಏರಿಕೆ ಕಂಡಿತ್ತು, 89 ಸೂಚ್ಯಂಕ ಏರಿಕೆಯಾಗಿ 35,819ಕ್ಕೆ ತಲುಪಿದೆ. ನಸ್ದಾಕ್ ಕಾಂಪೋಸಿಟ್ನಲ್ಲೂ 50 ಪಾಯಿಂಟ್ ಏರಿಕೆಯಾಗಿ 15.498 ಕ್ಕೆ ತಲುಪಿದೆ. ಮತ್ತು ಎಸ್ಎನ್ಪಿ ಕೂಡ 9 ಸೂಚ್ಯಂಕ ಏರಿಕೆಯಾಗಿ 4605ಕ್ಕೆ ತಲುಪಿದೆ.