For Quick Alerts
ALLOW NOTIFICATIONS  
For Daily Alerts

ನವೆಂಬರ್15: ಭಾರತೀಯ ಮಾರುಕಟ್ಟೆಯಲ್ಲಿ ಟಾಪ್-5 ಏರಿಳಿತದ ಷೇರುಗಳು

|

ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡು ಬಂದಿರುವುದರ ನಡುವೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗೂಳಿ ಗುದ್ದಾಟ ಜೋರಾಗಿ ನಡೆದಿದೆ. ಸೋಮವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿದಿದೆ. ಭಾರತೀಯ ಷೇರು ಸೂಚ್ಯಂಕ(ಬಿಎಸ್ಇ) ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ(ಎನ್ಎಸ್ಇ) ಅಂಕಗಳು ಏರಿಳಿತವನ್ನು ತಿಳಿದುಕೊಳ್ಳೋಣ.

 

ಸೋಮವಾರ ಬೆಳಗ್ಗೆ ಮಾರುಕಟ್ಟೆ ಸೆನ್ಸೆಕ್ಸ್ 302 ಅಂಕಗಳು ಅಥವಾ ಶೇ.0.50 ರಷ್ಟು ಏರಿಕೆಯೊಂದಿಗೆ 60,989ರಲ್ಲಿ ದಿನದ ವಹಿವಾಟು ಆರಂಭಿಸಿತು. ಅದೇ ರೀತಿ ನಿಫ್ಟಿ ಕೂಡಾ 114.25 ಅಥವಾ ಶೇ.-0.63ರಷ್ಟು ಇಳಿಕೆಯೊಂದಿಗೆ 17,988.50ರ ಅಂಕಿ-ಅಂಶಗಳೊಂದಿಗೆ ದಿನದ ಮಾರುಕಟ್ಟೆ ಪ್ರಾರಂಭವಾಯಿತು.

ಚಿನ್ನದ ಬೆಲೆ ಏರಿಳಿತ: ನವೆಂಬರ್ 15ರ ದರ ತಿಳಿದುಕೊಳ್ಳಿ

ಜಪಾನಿನ Nikkei 0.7% ಏರಿಕೆ ದಾಖಲಿಸಿದೆ. ಆರ್ಥಿಕ ಚಟುವಟಿಕೆ ತೋರಿಸುವ ಡೇಟಾವು ಮೂರನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಹೆಚ್ಚು ಇಳಿಕೆ ದಾಖಲಿಸಿದೆ. S&P 500 ಫ್ಯೂಚರ್ಸ್ 0.1% ರಷ್ಟು ಏರಿತು, ಆದರೆ ನಾಸ್ಡಾಕ್ 100 ಫ್ಯೂಚರ್ಸ್ 0.3% ಅನ್ನು ಸೇರಿಸಿತು. ಜಪಾನ್‌ನ ಟೋಪಿಕ್ಸ್ ಸೂಚ್ಯಂಕವು 0.4% ಮತ್ತು ಆಸ್ಟ್ರೇಲಿಯಾದ S&P/ASX 200 ಸೂಚ್ಯಂಕವು 0.4% ಏರಿತು.

ನವೆಂಬರ್15: ಭಾರತೀಯ ಮಾರುಕಟ್ಟೆಯಲ್ಲಿ ಟಾಪ್-5 ಏರಿಳಿತದ ಷೇರುಗಳು

ದಕ್ಷಿಣ ಕೊರಿಯಾದ ಕೊಸ್ಪಿ ಸೂಚ್ಯಂಕವು 1.1% ರಷ್ಟು ಏರಿತು, ಆದರೆ ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಸಮತಟ್ಟಾಗಿದೆ. ಚೀನಾದ ಶಾಂಘೈ ಕಾಂಪೋಸಿಟ್ ಸೂಚ್ಯಂಕವು 0.2% ನಷ್ಟು ಇಳಿಕೆಯಾಗಿದೆ. ಪ್ರಸ್ತುತ ಭಾರತೀಯ ಷೇರು ಮಾರುಕಟ್ಟೆ ಚಿತ್ರಣ ಹಾಗೂ ಪ್ರಮುಖ ಷೇರುಗಳ ಏರಿಳಿತ ಹೇಗಿದೆ ಎಂಬುದರ ಕುರಿತು ಒಂದು ವರದಿ ಇಲ್ಲಿದೆ ಓದಿ.

ಷೇರು ಮಾರುಕಟ್ಟೆಯ ಏರಿಕೆಯಾದ ಟಾಪ್-5 ಕಂಪನಿ:

ರಾಷ್ಟ್ರೀಯ ಷೇರು ಮಾರುಕಟ್ಟೆ(NSE)ಯು ಸೋಮವಾರ ಭಾರಿ 114 ಅಂಕಗಳ ಇಳಿಕೆಯೊಂದಿಗೆ ಆರಂಭಗೊಂಡಿದ್ದರೂ ಕೆಲವು ಕಂಪನಿಗಳ ಷೇರು ದರದಲ್ಲಿ ಏರಿಕೆ ಕಂಡು ಬಂದಿದೆ. ಓಎನ್ ಜಿಸಿ, ಹೀರೋ ಮೋಟಾರ್ಸ್ ಕಂಪನಿ, ಏಷಿಯನ್ ಪೇಂಟ್ಸ್, ಕೊಟಕ್ ಮಹೇಂದ್ರ, ಹೆಚ್ ಡಿಎಫ್ ಸಿ ಬ್ಯಾಂಕ್ ಷೇರುಗಳ ದರದಲ್ಲಿ ಅತಿಹೆಚ್ಚು ಏರಿಕೆಯಾಗಿದೆ. ಓಎನ್ ಜಿಸಿ ಷೇರು ದರದಲ್ಲಿ ಶೇ.2.85ರಷ್ಟು ಏರಿಕೆಯಾಗಿದ್ದು, ಷೇರು ದರ 159.05ರಷ್ಟಿದೆ. ಹೀರೋ ಮೋಟಾರ್ಸ್ ಕಂಪನಿ ಷೇರು ದರ 2,727.25 ರೂಪಾಯಿ ಆಗಿದ್ದು, ಶೇ.1.65ರಷ್ಟು ಏರಿಕೆಯಾಗಿದೆ. ಏಷಿಯನ್ ಪೇಂಟ್ಸ್ ಷೇರು ಮೌಲ್ಯ 3,160 ರೂಪಾಯಿ ಆಗಿದ್ದು, 1.19ರಷ್ಟು ಏರಿಕೆಯಾಗಿದೆ. ಕೊಟಕ್ ಮಹೇಂದ್ರ ಷೇರು ಬೆಲೆಯು 2,099.05 ರೂಪಾಯಿ ಆಗಿದ್ದು, ಶೇ.1.17ರಷ್ಟು ಏರಿಕೆ ಕಂಡು ಬಂದಿದೆ. ಹೆಚ್ ಡಿಎಫ್ ಸಿ ಬ್ಯಾಂಕ್ ಷೇರು ಮೌಲ್ಯವು 1,570 ರೂಪಾಯಿ ಆಗಿದ್ದು, ಸೋಮವಾರ ಮಾರುಕಟ್ಟೆ ಆರಂಭದ ಹೊತ್ತಿಗೆ ಶೇ.1.09ರಷ್ಟು ಏರಿಕೆ ದಾಖಲಿಸಿದೆ.

 

ಅತಿಹೆಚ್ಚು ಇಳಿಕೆ ದಾಖಲಿಸಿದ ಕಂಪನಿ ಷೇರು ದರ:

ರಾಷ್ಟ್ರೀಯ ಷೇರು ಸ್ಯೂಚಂಕ ನಿಫ್ಟಿಯಲ್ಲಿ ಐದು ಕಂಪನಿಗಳು ಅತಿಹೆಚ್ಚು ಏರಿಕೆ ಕಂಡಿದ್ದರೆ, ಪಾತಾಳಕ್ಕೆ ಕುಸಿತದ ಟಾಪ್-5 ಷೇರುಗಳು ಮತ್ತು ಅದರ ಮೌಲ್ಯವನ್ನು ತಿಳಿದುಕೊಳ್ಳಬೇಕಿದೆ. ಸೋಮವಾರ ಮಾರುಕಟ್ಟೆ ಆರಂಭದ ವೇಳೆಗೆ ಗ್ರಾಸಿಮ್, ಹಿಂಡಾಲ್ಕೋ, ಸಿಪ್ಲಾ, ರಿಲಾಯನ್ಸ್ ಮತ್ತು ಬಜಾಜ್ ಫೈನ್ಯಾನ್ಸ್ ಕಂಪನಿಗಳ ಷೇರು ಮೌಲ್ಯದಲ್ಲಿ ಅತಿಹೆಚ್ಚು ಕುಸಿತ ಕಂಡು ಬಂದಿದೆ. ಗ್ರಾಸಿಮ್ ಕಂಪನಿ ಷೇರು ಮೌಲ್ಯ 1849.05ರಷ್ಟಾಗಿದ್ದು, ಶೇ.0.51ರಷ್ಟು ಇಳಿಕೆಯಾಗಿದೆ. ಹಿಂಡಾಲ್ಕೋ ಷೇರಿನಲ್ಲಿ ಶೇ.0.30ರಷ್ಟು ಇಳಿಕೆಯಾಗಿದ್ದು, ಷೇರು ದರ 467 ರೂಪಾಯಿ ಇದೆ. ಸಿಪ್ಲಾ ಷೇರು ಮೌಲ್ಯ 913.30 ರೂಪಾಯಿ ಆಗಿದ್ದು, ಶೇ.29ರಷ್ಟು ಇಳಿಕೆಯಾಗಿದೆ. ರಿಲಾಯನ್ಸ್ ಷೇರು ಬೆಲೆ 2589.70ರಷ್ಟಿದ್ದು, ಶೇ.0.13ರಷ್ಟು ಇಳಿಕೆಯಾಗಿದೆ. ಬಜಾಜ್ ಫೈನ್ಯಾನ್ಸ್ ಕಂಪನಿ ಷೇರಿನಲ್ಲಿ ಶೇ.0.12ರಷ್ಟು ಇಳಿಕೆಯಾಗಿದ್ದು, ಷೇರು ಬೆಲೆ 18,251.70ರಷ್ಟಿದೆ.

ರೂಪಾಯಿ ಮೌಲ್ಯದ ಎದುರು ಡಾಲರ್ ಏರಿಳಿತ

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ವಿರುದ್ಧ ರೂಪಾಯಿ 12 ಪೈಸೆ ಏರಿಕೆಯಾಗಿ 74.33 ಕ್ಕೆ ತಲುಪಿತು, ಏಕೆಂದರೆ ದೇಶೀಯ ಷೇರುಗಳಲ್ಲಿನ ದೃಢವಾದ ಪ್ರವೃತ್ತಿ ಮತ್ತು ಕಚ್ಚಾ ತೈಲ ಬೆಲೆಗಳನ್ನು ಕಡಿಮೆಗೊಳಿಸುವುದು ಹೂಡಿಕೆದಾರರಲ್ಲಿ ಹೊಸ ಆಸಕ್ತಿ ಮೂಡಿಸಿದೆ. ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿಯು ಡಾಲರ್‌ಗೆ 74.38 ನಲ್ಲಿ ಬಲವಾಗಿ ಪ್ರಾರಂಭವಾಯಿತು. ಆರಂಭಿಕ ವ್ಯವಹಾರಗಳಲ್ಲಿ 74.33 ಕ್ಕೆ ಮತ್ತಷ್ಟು ಏರಿಕೆಯಾಯಿತು, ಅದರ ಹಿಂದಿನ ಮುಕ್ತಾಯಕ್ಕಿಂತ 12 ಪೈಸೆ ಏರಿಕೆಯಾಗಿತ್ತು.

English summary

Nov 15 Stock Market Picture: Sensex Hits 300 Points Rise and Starts With 60989, Nifty Around 17988

Nov 15th Stock Market Picture: Sensex Hits 300 Points Down and Starts With 60989, Nifty Around 17988 Points.
Story first published: Monday, November 15, 2021, 12:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X