For Quick Alerts
ALLOW NOTIFICATIONS  
For Daily Alerts

ತಮಿಳುನಾಡಿನಲ್ಲಿ ಸದ್ಯದಲ್ಲೇ ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆ

|

ಬೆಂಗಳೂರು ಮೂಲದ ಆ್ಯಪ್ ಆಧಾರಿತ ಬಾಡಿಗೆ ಕಾರು ಬುಕ್ಕಿಂಗ್ ಸೇವಾ ಆಧಾರಿತ ಸಂಸ್ಥೆ ಓಲಾ ಮುಂಬರುವ ತಿಂಗಳುಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಯನ್ನು ತಮಿಳುನಾಡಿನಲ್ಲಿ ಪ್ರಾರಂಭಿಸಲಿದೆ ಎಂದು ಗುರುವಾರ ತಿಳಿಸಿದೆ.

 

ಓಲಾ ಕಂಪನಿಯು ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಾರ್ಖಾನೆಯನ್ನು, ವಿಶ್ವದ ಅತಿದೊಡ್ಡ ಕಾರ್ಖಾನೆಯಾಗಿ 500 ಎಕರೆ ಪ್ರದೇಶದಲ್ಲಿ ಹೊಸೂರಿನಲ್ಲಿ ನಿರ್ಮಿಸುತ್ತಿದೆ.

ಕಳೆದ ಡಿಸೆಂಬರ್‌ನಲ್ಲಿ ಓಲಾ ಕಂಪನಿಯು ತಮಿಳುನಾಡಿನಲ್ಲಿ ಮೊದಲ ಎಲೆಕ್ಟ್ರಿಕ್ ಕಾರ್ಖಾನೆಯನ್ನು ಸ್ಥಾಪಿಸಲು 2,400 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವುದಾಗಿ ತಿಳಿಸಿತ್ತು.

ಸದ್ಯದಲ್ಲೇ ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆ

ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ಒಮ್ಮೆ ತೆರೆದ ಬಳಿಕ ವಾರ್ಷಿಕವಾಗಿ ಎರಡು ಮಿಲಿಯನ್ ವಾಹನಗಳ ಉತ್ಪಾದನೆಯ ಗುರಿ ಇಟ್ಟುಕೊಂಡಿದೆ. ಈ ಹಿಂದೆ ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಸಮ್ಮುಖದಲ್ಲಿ ತಮಿಳುನಾಡು ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.

ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿ ಸ್ಥಾಪನೆಯಾಗಲಿರುವ ಈ ಎಲೆಕ್ಟ್ರಿಕ್ ಉತ್ಪಾದನಾ ಘಟಕವು ಪ್ರಪಂಚದಲ್ಲಿಯೇ ಅತಿ ದೊಡ್ಡ ಸ್ಕೂಟರ್ ಉತ್ಪಾದನಾ ಸ್ಥಳವಾಗಲಿದೆ ಎಂದು ಓಲಾ ಹೇಳಿದೆ.

ಮುಂಬರುವ ತಿಂಗಳುಗಳಲ್ಲಿ ತನ್ನ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ಕಂಪನಿ ತಿಳಿಸಿದೆ. "ಸ್ಕೂಟರ್ ಉತ್ತಮ ವಿನ್ಯಾಸ, ತೆಗೆಯಬಹುದಾದ ಬ್ಯಾಟರಿ, ಹೆಚ್ಚಿನ ಕಾರ್ಯಕ್ಷಮತೆ ಮತ್ತು ಶ್ರೇಣಿಯ ಜೊತೆಗೆ ಉದ್ಯಮದ ಮೊದಲ ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನಿರೀಕ್ಷಿಸಲಾಗಿದೆ. ಸ್ಕೂಟರ್ ಈಗಾಗಲೇ ಹಲವಾರು ಪ್ರತಿಷ್ಠಿತ ವಿನ್ಯಾಸ ಮತ್ತು ನಾವೀನ್ಯತೆ ಪ್ರಶಸ್ತಿಗಳನ್ನು ಗೆದ್ದಿದೆ" ಎಂದು ಓಲಾ ಕಂಪನಿ ಹೇಳಿದೆ.

ಮೇ 2020 ರಲ್ಲಿ, ಓಲಾ ನೆದರ್ಲೆಂಡ್ಸ್‌ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಎಟರ್ಗೊ ಬಿವಿ ಯನ್ನು ಬಹಿರಂಗಪಡಿಸದ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡ ಬಳಿಕ ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವುದಾಗಿ ಪ್ರಕಟಿಸಿದೆ.

English summary

OLA Electric 2 Wheeler Factory In Tamil Nadu To Begin Production In Coming Months

Ride-hailing platform Ola on Thursday said it expects the first phase of its electric two-wheeler facility in Tamil Nadu to become operational in the coming months to begin production of vehicles.
Story first published: Friday, February 26, 2021, 9:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X