For Quick Alerts
ALLOW NOTIFICATIONS  
For Daily Alerts

2019ರಲ್ಲಿ 'ಓಲಾ ಶೇರ್' ಮೂಲಕ ಗ್ರಾಹಕರಿಗೆ 20 ಕೋಟಿ ರುಪಾಯಿ ಉಳಿತಾಯ

|

ಬೆಂಗಳೂರು ಮೂಲದ ಓಲಾ ಕ್ಯಾಬ್ ಸರ್ವಿಸ್ ಭಾರತದಾದ್ಯಂತ ಅಷ್ಟೇ ಅಲ್ಲದೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕ್ಯಾಬ್ ಸೇವೆಯನ್ನು ನೀಡುತ್ತಿದೆ. ಓಲಾ ಆಟೋ, ಮೈಕ್ರೋ, ಮಿನಿ, ಪ್ರೈಮ್ ಸೇರಿದಂತೆ ಕ್ಯಾಬ್‌ ಶೇರ್‌ ಅವಕಾಶವನ್ನು ಓಲಾ ಒದಗಿಸಿದೆ. ಕಳೆದ ವರ್ಷ ಓಲಾ ಶೇರ್ ಮೂಲಕ ಗ್ರಾಹಕರು ಹೆಚ್ಚು ಪ್ರಯಾಣಿಸಿದ್ದು, ಈ ಮೂಲಕ 2019ರಲ್ಲಿ ಗ್ರಾಹಕರಿಗೆ 20.87 ಕೋಟಿ ರುಪಾಯಿ ಉಳಿತಾಯವಾಗಿದೆ ಎಂದು ಹೇಳಿಕೊಂಡಿದೆ.

ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಬಿಜಿನೆಸ್ ಮೂಲಕ ಆರಂಭಗೊಂಡ ಓಲಾ ದೇಶಾದ್ಯಂತ ಕ್ಯಾಬ್ ಸೇವೆಯನ್ನು ನೀಡುತ್ತಾ ಗ್ರಾಹಕರಿಗೆ ತುಂಬಾ ಹತ್ತಿರವಾಗಿದೆ. ಕ್ಯಾಬ್ ಅಷ್ಟೇ ಅಲ್ಲದೆ ಆಟೋ ಸೇವೆಯನ್ನು ನೀಡಿ ಜನಸಾಮಾನ್ಯರಿಗೆ ತಾವಿದ್ದ ಸ್ಥಳಕ್ಕೆ ಸೇವೆಯನ್ನು ನೀಡುವುದರ ಜೊತೆಗೆ ಆಟೋ ಮಾಲೀಕರು/ಡ್ರೈವರ್‌ಗಳಿಗೆ ಪರೋಕ್ಷ ಉದ್ಯೋಗ ನೀಡಿದೆ.

ದೆಹಲಿಯಲ್ಲಿ ಅತಿ ಹೆಚ್ಚು ಓಡಾಟ ನಡೆಸಿರುವ ಓಲಾ
 

ದೆಹಲಿಯಲ್ಲಿ ಅತಿ ಹೆಚ್ಚು ಓಡಾಟ ನಡೆಸಿರುವ ಓಲಾ

ಓಲಾ ಕಂಪನಿಗೆ ಅತಿ ಹೆಚ್ಚು ಬಿಜಿನೆಸ್ ಆಗಿರುವ ನಂಬರ್ ೧ ಸ್ಥಾನವನ್ನು ರಾಷ್ಟ್ರ ರಾಜಧಾನಿ ದೆಹಲಿ ಪಡೆದಿದೆ. ದೆಹಲಿಯಲ್ಲಿ ಕಳೆದ ವರ್ಷ 1.06 ಶತಕೋಟಿ ಕಿ.ಮೀ ವ್ಯಾಪ್ತಿಯನ್ನು ಓಲಾ ಕ್ಯಾಬ್ ಸೇವೆ ನೀಡಿದೆ. ಈ ಮೂಲಕ ರಾಷ್ಟ್ರ ರಾಜಧಾನಿ ಏಕೈಕ ಅತಿದೊಡ್ಡ ಮಾರುಕಟ್ಟೆಯಾಗಿ ಉಳಿದಿದೆ. ಓಲಾ ಆಟೋ ಮತ್ತು ಓಲಾ ಬೈಕ್ ಕ್ರಮವಾಗಿ 46 ಮಿಲಿಯನ್ ಕಿ.ಮೀ ಮತ್ತು 33 ಮಿಲಿಯನ್ ಕಿ.ಮೀ. ಸಾಗಿದೆ ಎಂದು ವರದಿ ಮಾಡಿದೆ.

ಬೆಂಗಳೂರನ್ನು ಹಿಂದಿಕ್ಕಿರುವ ದೆಹಲಿ

ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಅತಿ ಹೆಚ್ಚು ವ್ಯಾಪ್ತಿಯನ್ನು ತಲುಪಿರುವ ಮೊದಲ ಸ್ಥಾನವು ದೆಹಲಿಗಿದ್ದು, ಬೆಂಗಳೂರನ್ನು ಹಿಂದಿಕ್ಕಿದೆ. ದೆಹಲಿಯಲ್ಲಿ ಓಲಾ ಕ್ಯಾಬ್ ಸೇವೆಯು ಈ ಅವಧಿಯಲ್ಲಿ 924 ದಶಲಕ್ಷ ಕಿ.ಮೀ ತಲುಪಿದ್ದು, ಬೆಂಗಳೂರಿನಲ್ಲಿ ಇದೇ ಸಮಯದಲ್ಲಿ 821 ದಶಲಕ್ಷ ಕಿ.ಮೀ. ಗ್ರಾಹಕರು ಪ್ರಯಾಣಿಸಿದ್ದಾರೆ. ಇನ್ನು ವೀಕೆಂಡ್‌ನಲ್ಲೀ ದೆಹಲಿ ಮುಂದಿದ್ದು 768 ದಶಲಕ್ಷ ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದರೆ, ಬೆಂಗಳೂರು 642 ದಶಲಕ್ಷ ಕಿ.ಮೀ ಹೊಂದಿದೆ.

ಬೆಂಗಳೂರನ್ನು ಹಿಂದಿಕ್ಕಿರುವ ದೆಹಲಿ

ಬೆಂಗಳೂರನ್ನು ಹಿಂದಿಕ್ಕಿರುವ ದೆಹಲಿ

ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಅತಿ ಹೆಚ್ಚು ವ್ಯಾಪ್ತಿಯನ್ನು ತಲುಪಿರುವ ಮೊದಲ ಸ್ಥಾನವು ದೆಹಲಿಗಿದ್ದು, ಬೆಂಗಳೂರನ್ನು ಹಿಂದಿಕ್ಕಿದೆ. ದೆಹಲಿಯಲ್ಲಿ ಓಲಾ ಕ್ಯಾಬ್ ಸೇವೆಯು ಈ ಅವಧಿಯಲ್ಲಿ 924 ದಶಲಕ್ಷ ಕಿ.ಮೀ ತಲುಪಿದ್ದು, ಬೆಂಗಳೂರಿನಲ್ಲಿ ಇದೇ ಸಮಯದಲ್ಲಿ 821 ದಶಲಕ್ಷ ಕಿ.ಮೀ. ಗ್ರಾಹಕರು ಪ್ರಯಾಣಿಸಿದ್ದಾರೆ. ಇನ್ನು ವೀಕೆಂಡ್‌ನಲ್ಲೀ ದೆಹಲಿ ಮುಂದಿದ್ದು 768 ದಶಲಕ್ಷ ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದರೆ, ಬೆಂಗಳೂರು 642 ದಶಲಕ್ಷ ಕಿ.ಮೀ ಹೊಂದಿದೆ.

ಲಂಡನ್‌ನಲ್ಲಿ ಶುರುವಾಗಲಿದೆ ಓಲಾ ಓಟ : ಉಬರ್ ಲೈಸೆನ್ಸ್ ಕಟ್

ಓಲಾ ಸೇವೆಯಿಂದ ಬೀದಿಗಿಳಿದವು 1.4 ಮಿಲಿಯನ್ ಕಾರುಗಳು

ಓಲಾ ಸೇವೆಯಿಂದ ಬೀದಿಗಿಳಿದವು 1.4 ಮಿಲಿಯನ್ ಕಾರುಗಳು

ಓಲಾ ಅವರ ಶೇರ್ ಸೇವೆಗಳಿಂದಾಗಿ 2019 ರಲ್ಲಿ 1.4 ಮಿಲಿಯನ್ ಕಾರುಗಳನ್ನು ಬೀದಿಗಿಳಿಯಲು ಸಹಾಯ ಆಗಿದೆ. ಜೊತೆಗೆ ಓಲಾ ಬೈಕು ಒಟ್ಟು 166 ಮಿಲಿಯನ್ ಕಿ.ಮೀ ವ್ಯಾಪ್ತಿಯನ್ನು, ಓಲಾ ಆಟೊಗಳು 1200 ಮಿಲಿಯನ್ ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಿವೆ. ಓಲಾ ಆಟೋ ಮತ್ತು ಓಲಾ ಬೈಕ್ ಭಾರತದಾದ್ಯಂತ 250 ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ಸೇವೆಯನ್ನು ನೀಡುತ್ತಿವೆ ಎಂದು ಓಲಾ ವಕ್ತಾರರು ಹೇಳಿದ್ದಾರೆ.

ಓಲಾ ಕಂಪನಿ ಮಾಲೀಕ ಭವೀಶ್ ಅಗರ್ವಾಲ್
 

ಓಲಾ ಕಂಪನಿ ಮಾಲೀಕ ಭವೀಶ್ ಅಗರ್ವಾಲ್

34 ವರ್ಷ ವಯಸ್ಸಿನ ಭವೀಶ್ ಅಗರ್ವಾಲ್ ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಸರ್ವೀಸ್ ಆರಂಭಿಸಿ ಯಶಸ್ಸಿ ಉದ್ಯಮಿಯಾದವರು. ಐಐಟಿ ಬಾಂಬೆಯಲ್ಲಿ ಬಿ-ಟೆಕ್ ಎಂಜಿನಿಯರ್ ಪದವಿ ಪಡೆದು ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಕೆಲಸ ತೊರೆದು ತಮ್ಮದೇ ಆದ ಸ್ಟಾರ್ಟ್ ಅಪ್ ಆರಂಭಿಸಿ ಯಶಸ್ವಿ ಬಿಲಿಯನೇರ್ ಆದರು.

ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್‌ ಆರಂಭಿಸಿ ಶತಕೋಟ್ಯಾಧಿಪತಿಗಳಾದವರು

ಭಾರತದಲ್ಲಿ ಉಬರ್‌ಗೆ ಸಮಾನ ಸ್ಫರ್ಧೆಯನ್ನು ನೀಡಿದ್ದ ಭವಿಶ್ ಅಗರ್ವಾಲ್ ನೇತೃತ್ವದ ಓಲಾ ಸಂಸ್ಥೆಯು ಇಂಗ್ಲೆಂಡ್ ಹೊರತುಪಡಿಸಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೂ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಭವೀಶ್ ಅಗರ್ವಾಲ್ ಅಂದಾಜು ಆಸ್ತಿ ಮೌಲ್ಯ 3,100 ಕೋಟಿ ರುಪಾಯಿ ಆಗಿದೆ. ಓಲಾ ಕಂಪನಿಯ ಮತ್ತೊಬ್ಬ ಸಹ ಸಂಸ್ಥಾಪಕ ಅಂಕಿತ್ ಬಾಟಿಯ ಆಸ್ತಿ ಮೌಲ್ಯವು ಅಂದಾಜು 1,400 ಕೋಟಿ ರುಪಾಯಿನಷ್ಟಿದೆ.

English summary

Ola Share Users Save More Than 20 Crore Last Year

Banglore based Ride-hailing app Ola users saved ₹20.87 crore in 2019
Story first published: Sunday, January 26, 2020, 10:20 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more