For Quick Alerts
ALLOW NOTIFICATIONS  
For Daily Alerts

1 ಭಾರತೀಯ ಸಂಸ್ಥೆಯನ್ನು ವಾರಕ್ಕೆ 1,500 ಬಾರಿ ಟಾರ್ಗೆಟ್ ಮಾಡಿದ ಹ್ಯಾಕರ್ಸ್

|

ಕಳೆದ ಆರು ತಿಂಗಳಲ್ಲಿ ಭಾರತದಲ್ಲಿ ಒಂದೇ ಸಂಸ್ಥೆಯು ವಾರಕ್ಕೆ ಸರಾಸರಿ 1,565 ಬಾರಿ ಹ್ಯಾಕರ್ಸ್ ಆಕ್ರಮಣಕ್ಕೊಳಗಾಗಿದೆ ಎಂದು ವರದಿಯೊಂದು ಹೇಳಿದೆ.

 

ಇಸ್ರೇಲಿ ಸೈಬರ್‌ ಸೆಕ್ಯುರಿಟಿ ಸಂಸ್ಥೆ ಚೆಕ್ ಪಾಯಿಂಟ್ ರಿಸರ್ಚ್‌ನ ಸಂಶೋಧಕರ ಪ್ರಕಾರ, ಜಾಗತಿಕವಾಗಿ 35 ಪರ್ಸೆಂಟ್ ದುರುದ್ದೇಶಪೂರಿತ ಫೈಲ್‌ಗಳಿಗೆ (ಮಾಲ್‌ವೇರ್ ಫೈಲ್ಸ್) ಹೋಲಿಸಿದರೆ, ಭಾರತದಲ್ಲಿ 93 ಪರ್ಸೆಂಟ್ ದುರುದ್ದೇಶಪೂರಿತ ಫೈಲ್‌ಗಳನ್ನು ವೆಬ್ ಮೂಲಕ ತಲುಪಿಸಲಾಗಿದೆ ಎಂದು ತಿಳಿದುಬಂದಿದೆ.

1 ಭಾರತೀಯ ಸಂಸ್ಥೆ ವಾರಕ್ಕೆ 1,500 ಬಾರಿ ಹ್ಯಾಕರ್ಸ್ ಟಾರ್ಗೆಟ್!

ಭಾರತದಲ್ಲಿ ಈ ರೀತಿಯ ದುರುದ್ದೇಶಪೂರಿತ ಫೈಲ್‌ಗಳಿಂದ ಸಂಸ್ಥೆಗಳ ಮಾಹಿತಿ ಬಹಿರಂಗವಾಗುತ್ತಿದ್ದು, 64 ಪರ್ಸೆಂಟ್ ಸಂಸ್ಥೆಗಳ ಮೇಲೆ ಪರಿಣಾಮ ಬೀರುತ್ತಿದೆ. ಭಾರತದ ಪ್ರಮುಖ ಮಾಲ್‌ವೇರ್ "XMRig" 17 ಪರ್ಸೆಂಟ್ ಸಂಸ್ಥೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಚೆಕ್ ಪಾಯಿಂಟ್‌ನ '2020 ಸೈಬರ್ ಸೆಕ್ಯುರಿಟಿ' ವರದಿ ತಿಳಿಸಿದೆ.

ಜಗತ್ತಿನಲ್ಲಿ ಹ್ಯಾಕರ್ಸ್ ಮೂಲಕ ಈ ರೀತಿಯ ದಾಳಿಗೆ ಒಳಗಾಗುತ್ತಿರುವ ಸಂಸ್ಥೆಗಳು ಹೆಚ್ಚಾಗುತ್ತಿದ್ದು, 28 ಪರ್ಸೆಂಟ್‌ನಷ್ಟು ಸಂಸ್ಥೆಗಳು ಬೋಟ್‌ನೆಟ್ ಚಟುವಟಿಕೆಯಿಂದ ಪ್ರಭಾವಿತವಾಗಿದೆ. ಇದು 2018 ಕ್ಕೆ ಹೋಲಿಸಿದರೆ 50 ಪರ್ಸೆಂಟ್‌ಕ್ಕಿಂತ ಹೆಚ್ಚಾಗಿದೆ.

English summary

One Indian Firm Target Over 1500 Times By Hackers Within A Week

A single organisation in India was attacked an alarming 1,565 times per week on average in the past six months
Story first published: Sunday, January 26, 2020, 13:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X