For Quick Alerts
ALLOW NOTIFICATIONS  
For Daily Alerts

ಪ್ಯಾರಾಮಿಲಿಟರಿ ಕ್ಯಾಂಟೀನ್‌ನಲ್ಲಿ ಇನ್ಮುಂದೆ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳು ಮಾತ್ರ ಮಾರಾಟ

|

ಫ್ರಧಾನಿ ನರೇಂದ್ರ ಮೋದಿ ಮಂಗಳವಾರ(ಮೇ 12) ಆತ್ಮ ನಿರ್ಭರ್ ಭಾರತ್‌ ಎಂದು ಹೇಳಿದ ಬೆನ್ನಲ್ಲೇ ಪ್ಯಾರಾಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಜೂನ್ 1 ರಿಂದ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ಸರ್ಕಾರ ಇಂದು ಹೇಳಿದೆ.

'ದೇಶವು ಸ್ವಾವಲಂಬಿಯಾಗಿರಬೇಕು ಮತ್ತು ಸ್ಥಳೀಯ ಉತ್ಪನ್ನಗಳತ್ತ ಗಮನ ಹರಿಸಬೇಕು (ಭಾರತದಲ್ಲಿ ತಯಾರಿಸಲ್ಪಟ್ಟಿರುವಂತಹ), ಇದು ಮುಂದಿನ ದಿನಗಳಲ್ಲಿ ಭಾರತವನ್ನು ಜಾಗತಿಕ ನಾಯಕತ್ವದ ಹಾದಿಯಲ್ಲಿ ಕೊಂಡೊಯ್ಯುತ್ತದೆ" ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಇನ್ಮುಂದೆ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳು ಮಾತ್ರ ಮಾರಾಟ!

 

'ಈ ದಿಕ್ಕಿನಲ್ಲಿ, ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಕ್ಯಾಂಟೀನ್‌ಗಳು ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತವೆ ಎಂದು ಗೃಹ ಸಚಿವಾಲಯ ನಿರ್ಧರಿಸಿದೆ. ಇದು ಜೂನ್ 1 ರಿಂದ ಅನ್ವಯವಾಗಲಿದೆ. ಸುಮಾರು 10 ಲಕ್ಷ ಸಿಎಪಿಎಫ್ ಸಿಬ್ಬಂದಿ ಮತ್ತು ಅವರ ಕುಟುಂಬದ 50 ಲಕ್ಷ ಸದಸ್ಯರು ಸ್ವದೇಶಿ ಉತ್ಪನ್ನಗಳನ್ನು ಬಳಸುತ್ತಾರೆ, ಎಂದು ಗೃಹ ಸಚಿವರು ಹೇಳಿದರು.

ಪ್ಯಾರಾ ಮಿಲಿಟರಿ ಕ್ಯಾಂಟೀನ್‌ಗಳು ವಾರ್ಷಿಕವಾಗಿ ಸುಮಾರು 2,800 ಕೋಟಿ ರುಪಾಯಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಸಿಎಪಿಎಫ್ ಅಡಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಇಂಡೋ ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ), ಸಸ್ತ್ರಾ ಸೀಮಾ ಬಲ್ (ಎಸ್‌ಎಸ್‌ಬಿ), ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಮತ್ತು ಅಸ್ಸಾಂ ರೈಫಲ್ಸ್ ವಿಭಾಗಗಳಿವೆ.

ಇದು ಹಿಂದುಳಿಯುವ ಸಮಯವಲ್ಲ ಆದರೆ ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸುವ ಸಮಯ. ಪ್ರತಿಯೊಬ್ಬ ಭಾರತೀಯರು ಭಾರತದ ಉತ್ಪನ್ನಗಳಲ್ಲಿ ಮಾತ್ರ ತಯಾರಿಸಲು ನಿರ್ಧರಿಸಿದರೆ ದೇಶವು ಸ್ವಾವಲಂಬಿಗಳಾಗಲಿದೆ" ಎಂದು ಗೃಹ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಈ ಮೂಲಕ ಆತ್ಮ ನಿರ್ಭರ್ ಭಾರತ್ ನಿರ್ಮಾಣದ ಯೋಜನೆಗೆ ಮೊದಲ ಹೆಜ್ಜೆ ಇಟ್ಟಿದೆ.

English summary

Only Made In India In Paramilitary Canteens From June 1

Only "Made in India" products will be sold in paramilitary canteens from June 1, the government said today
Story first published: Wednesday, May 13, 2020, 20:05 [IST]
Company Search
COVID-19