For Quick Alerts
ALLOW NOTIFICATIONS  
For Daily Alerts

'ಕೇಂದ್ರದಿಂದ ನೇರ ಹಣಕಾಸು ಇಲ್ಲ; ಪ್ರಚಾರದಿಂದ ಹೊಟ್ಟೆ ತುಂಬಲ್ಲ'

|

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿರುವ ಉದ್ಯೋಗ ಸೃಷ್ಟಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

 

ಕೇವಲ ಪ್ರಚಾರ ಮಾತ್ರ ಜನರಿಗೆ ಉದ್ಯೋಗ ನೀಡುವುದಿಲ್ಲ. ಪ್ರಚಾರದಿಂದ ಕಾರ್ಮಿಕರಿಗೆ ಹೊಟ್ಟೆಯೂ ತುಂಬುವುದಿಲ್ಲ. ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ ಎಂದು ಪ್ರಶ್ನಿಸಿದ್ದಾರೆ.

 

'ಪ್ರಧಾನಮಂತ್ರಿ ಪರಿಹಾರ ನಿಧಿಯ ಹಣ ರಾಜೀವ್ ಗಾಂಧಿ ಟ್ರಸ್ಟ್‌ಗೆ ಹೋಗುತ್ತಿತ್ತು''ಪ್ರಧಾನಮಂತ್ರಿ ಪರಿಹಾರ ನಿಧಿಯ ಹಣ ರಾಜೀವ್ ಗಾಂಧಿ ಟ್ರಸ್ಟ್‌ಗೆ ಹೋಗುತ್ತಿತ್ತು'

ಉದ್ಯೋಗ ಒದಗಿಸಲು ಕೈಗಾರಿಕಾ ಸಂಘಗಳೊಂದಿಗೆ ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ 'ಆತ್ಮ ನಿರ್ಭರ್ ರೊಜ್‌ಗಾರ್ ಅಭಿಯಾನ್' ಅನ್ನು ಪ್ರಾರಂಭಿಸಲಾಗಿದೆ.

'ಕೇಂದ್ರದಿಂದ ನೇರ ಹಣಕಾಸು ಇಲ್ಲ; ಪ್ರಚಾರದಿಂದ ಹೊಟ್ಟೆ ತುಂಬಲ್ಲ'

ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾದ ಹೆಚ್ಚಿನ ಉದ್ಯೋಗ ವರ್ಗಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ಸರ್ಕಾರದಿಂದ ನೇರ ಹಣಕಾಸಿನ ನೆರವು ಇಲ್ಲದಿರುವುದರಿಂದ ಸ್ವಯಂ ಉದ್ಯೋಗಿಗಳು ತೀವ್ರ ಬಿಕ್ಕಟ್ಟಿನಲ್ಲಿದ್ದಾರೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸ್ಥಿತಿ ತುಂಬಾ ಕೆಟ್ಟದಾಗಿದೆ ಶೇ 62 ರಷ್ಟು ಎಂಎಸ್‌ಎಂಇಗಳು ಉದ್ಯೋಗ ಕಡಿತಗೊಳಿಸಲಿವೆ. ಶೇ 78 ರಷ್ಟು ವೇತನ ಕಡಿತಗೊಳಿಸಿವೆ ಎಂದು ಅವರು ಹೇಳಿದ್ದಾರೆ.

ಚಿಕನ್ ಉದ್ಯಮ, ಮರಗೆಲಸ, ಹಿತ್ತಾಳೆ ಉದ್ಯಮ, ಪವರ್‌ಲೂಮ್ ವಲಯದ ಸ್ಥಿತಿ, ಕಾರ್ಪೆಟ್ ಉದ್ಯಮವೂ ಕೆಟ್ಟದಾಗಿದೆ ಎಂದು ಅವರು ಹೇಳಿದ್ದಾರೆ.

English summary

Priyanka's Attack on up Govt: Will Only Publicity Generate Employment?

Only Publicity Not Gives Employment Says Congress Leader Priyanka Gandhi Vadra
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X