For Quick Alerts
ALLOW NOTIFICATIONS  
For Daily Alerts

ತೈಲ ಉತ್ಪಾದನೆ ನಿಯಂತ್ರಣ: ಭಾರತದ ಮನವಿ ಕಡೆಗಣಿಸಿದ ಒಪೆಕ್

|

ಕಚ್ಚಾ ತೈಲ ಉತ್ಪಾದನೆ ಮೇಲಿನ ನಿಯಂತ್ರಣಗಳನ್ನು ಸಡಿಲಿಸಬೇಕು ಎಂಬ ಭಾರತದ ಮನವಿಯನ್ನು ತೈಲ ರಫ್ತು ರಾಷ್ಟ್ರಗಳ ಒಕ್ಕೂಟವು (ಒಪೆಕ್) ಗಂಭೀರವಾಗಿ ಪರಿಗಣಿಸದ ಪರಿಣಾಮ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದೆ.

ಇದರ ನಡುವೆ ಸೌದಿ ಅರೇಬಿಯಾ ದೇಶವು ಭಾರತಕ್ಕೆ ಕಳೆದ ವರ್ಷ ಕಡಿಮೆ ಬೆಲೆಗೆ ಪಡೆದಿದ್ದ ಕಚ್ಚಾ ತೈಲವನ್ನು ಬಳಸುವಂತೆ ಸಲಹೆಯನ್ನು ನೀಡಿದೆ.

ತೈಲ ಉತ್ಪಾದನೆ ನಿಯಂತ್ರಣ: ಭಾರತದ ಮನವಿ ಕಡೆಗಣಿಸಿದ ಒಪೆಕ್

 

ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಸ್ಥೆ (ಒಪೆಕ್) ಮತ್ತು ಅದರ ಮಿತ್ರರಾಷ್ಟ್ರಗಳಾದ ಒಪೆಕ್ + ಗುಂಪು ಏಪ್ರಿಲ್‌ನಲ್ಲಿ ಸರಬರಾಜುಗಳನ್ನು ಹೆಚ್ಚಿಸದಿರಲು ಒಪ್ಪಿಕೊಂಡ ನಂತರ ಬ್ರೆಂಟ್ ಕಚ್ಚಾ ತೈಲವನ್ನು ಬ್ಯಾರೆಲ್‌ಗೆ ಶುಕ್ರವಾರ ಶೇ 1 ರಷ್ಟು ಏರಿಕೆ ಮಾಡಿದ್ದು, 67.44 ಡಾಲರ್‌ಗೆ ತಲುಪಿದೆ.

ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಗುರುವಾರ ನಡೆದ ಒಪೆಕ್ ಸಭೆಯಲ್ಲಿ, ಸ್ಥಿರ ತೈಲ ಬೆಲೆಗಳ ಭರವಸೆಯನ್ನು ಈಡೇರಿಸಲು ಉತ್ಪಾದನಾ ನಿರ್ಬಂಧವನ್ನು ಸರಾಗಗೊಳಿಸುವಂತೆ ಒತ್ತಾಯಿಸಿದರು. ಆದರೆ ಭಾರತದ ಮನವಿಯನ್ನು ಒಪೆಕ್ ಗಂಭೀರವಾಗಿ ಪರಿಗಣಿಸಿಲ್ಲ.

2020ರ ಏಪ್ರಿಲ್-ಮೇ ಅವಧಿಯಲ್ಲಿ ಭಾರತವು 1.67 ಕೋಟಿ ಬ್ಯಾರೆಲ್ ಕಚ್ಚಾ ತೈಲವನ್ನು ಸರಾಸರಿ 19 ಅಮೆರಿಕನ್ ಡಾಲರ್ ಪಾವತಿಸಿ ಖರೀದಿಸಿತ್ತು. ಇದನ್ನೇ ಬಳಸುವಂತೆ ಸೌದಿ ಅರೇಬಿಯಾ ಸಲಹೆ ನೀಡಿದೆ.

English summary

OPEC Ignores India's Call: Saudi Asks New Delhi To Use Cheap Oil It Bought Last Year

OPEC and its allies ignored India's plea to ease production control, with Saudi Arabia asking New Delhi to instead use oil it bought at rock bottom rates last year.
Story first published: Friday, March 5, 2021, 19:55 [IST]
Company Search
COVID-19