For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್, ನಿಫ್ಟಿ ಏರಿಕೆ: ಇಂಡಸ್‌ಇಂಡ್ ಬ್ಯಾಂಕ್ ಟಾಪ್ ಗೇನರ್

|

ಶುಕ್ರವಾರ ಷೇರು ಮಾರುಕಟ್ಟೆ ಹಸಿರು ಬಣ್ಣಕ್ಕೆ ತಿರುಗಿದೆ. ಸತತ ಎರಡನೇ ಸೆಷನ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಲಾಭ ವಿಸ್ತರಣೆಗೊಂಡಿದೆ. ಏಷ್ಯನ್ ಷೇರುಗಳು ಶುಕ್ರವಾರ ಏರಿಕೆಯಾಗಿದೆ. ವಾಲ್ ಸ್ಟ್ರೀಟ್‌ನಲ್ಲಿ ಕಂಡ ಪಾಸಿಟಿವ್ ಬೆಳವಣಿಗೆ ಹಿನ್ನೆಲೆ ಷೇರು ಮಾರುಕಟ್ಟೆ ಲಾಭ ಕಂಡಿದೆ.

 

30-ಷೇರು ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 604 ಪಾಯಿಂಟ್‌ಗಳು ಅಥವಾ ಶೇಕಡಾ 1.16 ರಷ್ಟು ಏರಿಕೆಯಾಗಿ 52,870 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 175 ಪಾಯಿಂಟ್‌ಗಳು ಅಥವಾ 1.12 ರಷ್ಟು ಏರಿಕೆಯಾಗಿ 15,732 ಕ್ಕೆ ವಹಿವಾಟು ಆರಂಭ ಮಾಡಿದೆ.

ಷೇರು ಪೇಟೆ ಜಿಗಿತ: ಆಟೋಮೊಬೈಲ್, ಫಾರ್ಮಾ ಸ್ಟಾಕ್ ಸಾಥ್

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.93 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 1.26 ರಷ್ಟು ಏರಿಕೆಯಾಗಿದೆ. ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಎಫ್‌ಎಂಸಿಜಿ ಕ್ರಮವಾಗಿ ಶೇಕಡಾ 1.55 ಮತ್ತು 1.17 ರಷ್ಟು ಏರಿಕೆಯಾಗಿದೆ.

 ಸೆನ್ಸೆಕ್ಸ್, ನಿಫ್ಟಿ ಏರಿಕೆ: ಇಂಡಸ್‌ಇಂಡ್ ಬ್ಯಾಂಕ್ ಟಾಪ್ ಗೇನರ್

ಇಂಡಸ್‌ಇಂಡ್ ಬ್ಯಾಂಕ್ ಟಾಪ್ ಗೇನರ್

ಇಂಡಸ್‌ಇಂಡ್ ಬ್ಯಾಂಕ್ ಟಾಪ್ ನಿಫ್ಟಿ ಗೇನರ್ ಆಗಿದ್ದು, ಷೇರುಗಳು ಶೇಕಡಾ 3.10 ರಷ್ಟು ಏರಿಕೆಯಾಗಿ ರೂಪಾಯಿ 809.25 ಕ್ಕೆ ತಲುಪಿದೆ. ಹಿಂದೂಸ್ತಾನ್ ಯೂನಿಲಿವರ್, ಟಾಟಾ ಗ್ರಾಹಕ ಉತ್ಪನ್ನಗಳು, ಭಾರ್ತಿ ಏರ್‌ಟೆಲ್ ಮತ್ತು ಐಸಿಐಸಿಐ ಬ್ಯಾಂಕ್ ಕೂಡ ಲಾಭ ಗಳಿಸಿದೆ.

ಬಿಎಸ್‌ಇಯಲ್ಲಿ 1,794 ಷೇರುಗಳು ಲಾಭವನ್ನು ಕಂಡಿದ್ದರೆ, 361 ಷೇರುಗಳು ಕುಸಿತ ಕಂಡಿದೆ. 30-ಷೇರುಗಳ ಇಂಡಸ್‌ಇಂಡ್ ಬ್ಯಾಂಕ್, ಎಚ್‌ಯುಎಲ್, ಏರ್‌ಟೆಲ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್, ಎಸ್‌ಬಿಐ, ಕೋಟಕ್ ಮಹೀಂದ್ರಾ ಬ್ಯಾಂಕ್, ಡಾ ರೆಡ್ಡೀಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಟಾಪ್ ಗೇನರ್ ಆಗಿದೆ.

ದೇಶದ ಅತಿದೊಡ್ಡ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇ 0.56 ರಷ್ಟು ಏರಿಕೆಯಾಗಿ ರೂಪಾಯಿ 668.60 ಕ್ಕೆ ವಹಿವಾಟು ನಡೆಸಿವೆ. ಈ ನಡುವೆ ಟೆಕ್ ಮಹೀಂದ್ರಾ ಮತ್ತು ಏಷ್ಯನ್ ಪೇಂಟ್ಸ್ ನಷ್ಟವನ್ನು ಕಂಡಿದೆ. ಗುರುವಾರದಂದು ಸೆನ್ಸೆಕ್ಸ್ 443 ಪಾಯಿಂಟ್ ಅಥವಾ ಶೇಕಡಾ 0.86 ರಷ್ಟು ಜಿಗಿದು 52,266 ಕ್ಕೆ ತಲುಪಿದ್ದರೆ, ನಿಫ್ಟಿ 143 ಪಾಯಿಂಟ್ ಅಥವಾ 0.93 ರಷ್ಟು ಏರಿಕೆ ಕಂಡು 15,557 ಕ್ಕೆ ಸ್ಥಿರವಾಯಿತು.

English summary

Opening Bell: Sensex Rises Over 604 Points, Nifty Trades Above 15,732

Sensex Rises Over 604 Points, Nifty Trades Above 15,732.
Story first published: Friday, June 24, 2022, 10:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X