For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್, ನಿಫ್ಟಿ ಏರಿಕೆ: ಯಾವ ಷೇರಿಗೆ ನಷ್ಟ, ಯಾವುದಕ್ಕೆ ಲಾಭ?

|

ವಾಲ್‌ಸ್ಟ್ರೀಟ್‌ನಲ್ಲಿ ಏಷ್ಯನ್ ಷೇರುಗಳು ಏರಿಳಿತ ಕಂಡು ಬಂದಿದೆ. ಶಾಂಘೈ ಷೇರುಗಳು ಕೂಡಾ ಶೇಕಡ 0.58ರಷ್ಟು ಹೆಚ್ಚಳವಾಗಿದೆ. ಹಾಂಗ್‌ಕಾಂಗ್‌ ಸೂಚ್ಯಂಕವು ಶೇಕಡ 1.12ರಷ್ಟು ಏರಿಕೆ ಕಂಡಿದೆ. ಈ ಬೆನ್ನಲ್ಲೇ ಗುರುವಾರ ಷೇರು ಮಾರುಕಟ್ಟೆ ಮತ್ತೆ ಏರಿಕೆ ಕಂಡಿದೆ.

 

ಕೇಂದ್ರ ಬ್ಯಾಂಕುಗಳು ಬಡ್ಡಿದರ ಏರಿಕೆ ಮಾಡಿರುವುದರಿಂದ ಆತಂಕಕ್ಕೆ ಒಳಗಾಗಿರುವ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಕೊಂಚ ದೂರವೇ ಉಳಿದಿದ್ದಾರೆ. ಆದರೂ ಷೇರು ಪೇಟೆ ಗುರುವಾರ ಕೊಂಚ ಜಿಗಿತವನ್ನು ಕಂಡಿದೆ.

ಸೆನ್ಸೆಕ್ಸ್, ನಿಫ್ಟಿ ಏರಿಕೆ: ಟೈಟಾನ್‌ಗೆ ಭಾರೀ ಲಾಭ

30 ಷೇರುಗಳ ಬಿಎಸ್‌ಇ ಸೂಚ್ಯಂಕ 230 ಅಂಕ ಅಥವಾ ಶೇಕಡ 0.44ರಷ್ಟು 52,053ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 72 ಅಂಕ ಅಥವಾ ಶೇಕಡ 0.46ರಷ್ಟು 15,485ಕ್ಕೆ ಏರಿಕೆಯಾಗಿದೆ. ಮಿಡ್, ಸ್ಮಾಲ್ ಕ್ಯಾಪ್ ಷೇರುಗಳು ಕ್ರಮವಾಗಿ ಶೇಕಡ 0.54, ಶೇಕಡ 0.78ರಷ್ಟು ಏರಿಕೆಯಾಗಿದೆ.

 ಸೆನ್ಸೆಕ್ಸ್,  ನಿಫ್ಟಿ ಏರಿಕೆ: ಯಾವ ಷೇರಿಗೆ ನಷ್ಟ, ಯಾವುದಕ್ಕೆ ಲಾಭ?

ಹಿರೋ ಮೋಟೋಕಾರ್ಪ್ ಟಾಪ್ ಗೇನರ್

15 ಸೆಕ್ಟರ್ ಗೇಜ್‌ಗಳಲ್ಲಿ 11 ಹಸಿರು ಬಣ್ಣಕ್ಕೆ ತಿರುಗಿದೆ. ನಿಫ್ಟಿ ಆಟೋ, ನಿಫ್ಟಿ ಐಟಿ ಕ್ರಮವಾಗಿ ಶೇಕಡ 1.41, ಶೇಕಡ 1.09ರಷ್ಟು ಹೆಚ್ಚಳವಾಗಿದೆ. ಹಿರೋ ಮೋಟೋಕಾರ್ಪ್ ಟಾಪ್ ನಿಫ್ಟಿ ಗೇನರ್ ಆಗಿದೆ. ಇದರ ಷೇರುಗಳು ಶೇಕಡ 4ರಷ್ಟು ಜಿಗಿದು ರೂಪಾಯಿ 2,625.40ಕ್ಕೆ ತಲುಪಿದೆ.

ಇನ್ನು 1,537 ಷೇರುಗಳು ಲಾಭವನ್ನು ಕಂಡಿದ್ದರೆ, 598 ಷೇರುಗಳು ನಷ್ಟವನ್ನು ಅನುಭವಿಸಿದೆ. ಬಜಾಜ್ ಆಟೋ, ಭಾರ್ತಿ ಏರ್‌ಟೆಲ್, ವಿಪ್ರೋ ಹಾಗೂ ಟಾಟಾ ಮೋಟರ್ಸ್ ಭಾರೀ ಲಾಭವನ್ನು ಕಂಡಿದೆ. 30 ಷೇರುಗಳು ಬಿಎಸ್‌ಇ ಸೂಚ್ಯಂಕ ಭಾರ್ತಿ ಏರ್‌ಟೆಲ್, ಮಾರುತಿ, ವಿಪ್ರೋ, ಟಿಸಿಎಸ್, ಎಲ್&ಟಿ, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್ಸ್, ಬಜಾಜ್ ಫಿನ್‌ವರ್ಸ್, ಏಷ್ಯನ್ ಪೇಟ್ಸ್, ಅಲ್ಟ್ರಾಟೆಕ್ ಸಿಮೆಂಟ್ ಲಾಭವನ್ನು ಕಂಡಿದೆ.

ಹಿಂದೂಸ್ತಾನ್ ಯೂನಿಲಿವರ್, ರಿಲಯನ್ಸ್ ಇಂಡಸ್ಟ್ರೀಸ್, ಟೈಟಾನ್ ಭಾರೀ ನಷ್ಟವನ್ನು ಕಂಡಿದೆ. ಇನ್ನು ಬುಧವಾರ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 710 ಅಂಕ ಅಥವಾ ಶೇಕಡ 1.35ಕ್ಕೆ ಇಳಿದು 51,823ಕ್ಕೆ ತಲುಪಿತ್ತು. ಈ ನಡುವೆ ನಿಫ್ಟಿ 226 ಅಂಕ ಅಥವಾ ಶೇಕಡ 1.44 ರಷ್ಟು ಇಳಿಕೆಯಾಗಿ, 15,413ಕ್ಕೆ ಇಳಿಕೆಯಾಗಿದೆ.

English summary

Opening Bell: Sensex Rises Over 710 Points, Nifty Trades Above 15,413

Sensex Rises Over 710 Points, Nifty Trades Above 15,413.
Story first published: Thursday, June 23, 2022, 10:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X