For Quick Alerts
ALLOW NOTIFICATIONS  
For Daily Alerts

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ವಿಶಿಷ್ಠ ಸಾಧನೆ ಮಾಡಿದ ಪಾರ್ಲೆ ಜಿ

|

ಮುಂಬೈ, ಜೂನ್ 10: ದೇಶದ ಸಾಮಾನ್ಯರ ಮನೆ ಮನಗಳಲ್ಲಿ ಹೆಸರುವಾಸಿಯಾಗಿರುವ ಪಾರ್ಲೆ ಜಿ ಬಿಸ್ಕತ್ತು ಲಾಕ್‌ಡೌನ್ ಸಮಯದಲ್ಲಿ ವಿಶಿಷ್ಠ ಸಾಧನೆಗೆ ಮಾಡಿ ದೇಶದ ಗಮನ ಸೆಳೆದಿದೆ.

ಹೌದು, ಕೊರೊನಾವೈರಸ್ ಲಾಕ್‌ಡೌನ್ ಸಮಯದಲ್ಲಿ ಭಾರತದಲ್ಲಿ ಅತಿ ಹೆಚ್ಚು ಬಿಸ್ಕತ್ತುಗಳು ಮಾರಾಟವಾದ ಬ್ರಾಂಡ್‌ಗೆ ಪಾರ್ಲೆ ಜಿ ಪಾತ್ರವಾಗಿದೆ.

ಲಾಕ್‌ಡೌನ್ ನಂತರ ರೈತರಿಗೆ ಅಚ್ಚರಿ ನೀಡಿದ ಟ್ರಾಕ್ಟರ್ ತಯಾರಕ ಕಂಪೆನಿಗಳು

ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎಂಟು ದಶಕಗಳಲ್ಲಿ ತಮ್ಮ ಪಾರ್ಲೆ ಜಿ ಬಿಸ್ಕತ್ತುಗಳು ಅತಿ ಹೆಚ್ಚು ಮಾರಾಟವಾಗಿವೆ ಎಂದು ಸಂಸ್ಥೆ ತಿಳಿಸಿದೆ. ಆದರೆ, ಎಷ್ಟು ಪ್ರಮಾಣದಲ್ಲಿ ಮಾರಾಟವಾಗಿದೆ ಎಂಬ ಅಂಕಿ ಅಂಶಗಳನ್ನು ಪಾರ್ಲೆ ಜಿ ನೀಡಿಲ್ಲ.

ಸುಲಭವಾಗಿ ಸಿಕ್ಕಿತು
 

ಸುಲಭವಾಗಿ ಸಿಕ್ಕಿತು

1938 ರಿಂದ ಪಾರ್ಲೆ ಜಿ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ವಿಸ್ಕತ್ತುಗಳನ್ನು ಮಾರಾಟ ಮಾಡುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಜನರು ಸುಲಭ ಮತ್ತು ಸರಳವಾದ ಅಗತ್ಯ ಆಹಾರ ಪದಾರ್ಥಗಳನ್ನು ಸಂಗ್ರಹಿಸಿರುವುದರಿಂದ ಈ ಶ್ರೇಯಸ್ಸನ್ನು ಪಡೆಯಲು ಸಾಧ್ಯವಾಗಿದೆ ಎಂದು ಪಾರ್ಲೆ ಜಿ ಕಂಪೆನಿ ತಿಳಿಸಿದೆ.

ಎನ್‌ಜಿಓ ಗಳಿಂದ ಹೆಚ್ಚಿನ ಬೇಡಿಕೆ

ಎನ್‌ಜಿಓ ಗಳಿಂದ ಹೆಚ್ಚಿನ ಬೇಡಿಕೆ

ಲಾಕ್ ಡೌನ್ ಸಮಯದಲ್ಲಿ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪಾರ್ಲೆ ಜಿ ಬಿಸ್ಕತ್ತುಗಳು ಕಡಿಮೆಯಾಗದಂತೆ ಕಂಪೆನಿ ನೋಡಿಕೊಂಡಿತ್ತು. ಹಲವಾರು ರಾಜ್ಯ ಸರ್ಕಾರಗಳು ಬಿಸ್ಕೆಟ್‌ಗಾಗಿ ವಿನಂತಿಸಿದ್ದವು. ಅಲ್ಲದೇ ಅನೇಕ ಎನ್‌ಜಿಒಗಳು ಪಾರ್ಲೆ-ಜಿ ಯನ್ನು ಹಂಚಲು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದವು. ಹೀಗಾಗಿ ಮಾರ್ಚ್ 25 ರಿಂದ ಕಂಪನಿಯು ತನ್ನ ಉತ್ಪಾದನೆಯನ್ನು ದ್ವಿಗುಣಗೊಳಿಸಿತ್ತು.

130 ಕಾರ್ಖಾನೆಗಳು

130 ಕಾರ್ಖಾನೆಗಳು

ಪ್ರಸ್ತುತ, ಪಾರ್ಲೆ ಜಿ ಕಂಪನಿಯು ಭಾರತದಾದ್ಯಂತ 130 ಕಾರ್ಖಾನೆಗಳನ್ನು ಹೊಂದಿದ್ದು, ಅವುಗಳಲ್ಲಿ ಸದ್ಯ 120 ಘಟಕಗಳನ್ನು ಬಿಸ್ಕತ್ತುಗಳನ್ನು ಉತ್ಪಾದಿಸುತ್ತಿವೆ. ಹತ್ತು ದಾಸ್ತಾನು ಮಳಿಗೆಗಳಾಗಿವೆ.

ಪ್ರತಿ ಕೆಜಿ ಗೆ 100 ರೂ
 

ಪ್ರತಿ ಕೆಜಿ ಗೆ 100 ರೂ

ಪಾರ್ಲೆ-ಜಿ ಬ್ರಾಂಡ್ ಪ್ರತಿ ಕೆ.ಜಿ.ಗೆ 100 ರೂ.ಗಿಂತ ಕಡಿಮೆ ದರಕ್ಕೆ ಸಾಮಾನ್ಯ ವರ್ಗಕ್ಕೆ ಲಭಿಸುತ್ತದೆ. ಇದು ಒಟ್ಟು ಉದ್ಯಮದ ಆದಾಯದ ಮೂರನೇ ಒಂದು ಭಾಗವನ್ನು ಹೊಂದಿದೆ ಮತ್ತು ಮಾರಾಟವಾದ ಪರಿಮಾಣದ 50% ಕ್ಕಿಂತ ಹೆಚ್ಚು ಎಂದು ಪಾರ್ಲೆ ಜಿ ಕಂಪೆನಿ ತಿಳಿಸಿದೆ.

English summary

Parle G Biscuits Record Sale During Coronavirus lockdown Time

Parle-G Biskits Record Sale During Coronavirus lockdown Time. this is the best ever sales in its 8 decades.
Company Search
COVID-19