For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಬೃಹತ್ ಐಪಿಒ ತೆರೆಯಲು ಮುಂದಾದ ಪೇಟಿಎಂ: 21,800 ಕೋಟಿ ರೂಪಾಯಿ

|

ಭಾರತದ ಪ್ರಮುಖ ಡಿಜಿಟಲ್ ಪಾವತಿ ಪೂರೈಕೆದಾರರಲ್ಲಿ ಒಂದಾದ ಪೇಟಿಎಂ ಈ ವರ್ಷದ ಕೊನೆಯಲ್ಲಿ ತನ್ನ ಐಪಿಒ ಪ್ರಾರಂಭಿಸಲು ಯೋಜಿಸುತ್ತಿದೆ. ಐಪಿಒ ಮೂಲಕ ಸುಮಾರು 21,800 ಕೋಟಿ ರೂ. (3 ಬಿಲಿಯನ್ ಡಾಲರ್) ಸಂಗ್ರಹಿಸುವ ಗುರಿಯನ್ನು ಕಂಪನಿ ಹೊಂದಿದೆ. ಇದು ಆಗಿದ್ದೇ ಆದಲ್ಲಿ ಭಾರತದ ಅತಿದೊಡ್ಡ ಐಪಿಒ ಆಗಲಿದೆ.

 

ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಎಂದು ಕರೆಯಲ್ಪಡುವ ಕಂಪನಿಯು ನವೆಂಬರ್‌ನಲ್ಲಿ ಭಾರತದಲ್ಲಿ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲು ಯೋಜಿಸುತ್ತಿದೆ ಎಂದು ವರದಿಯೊಂದು ಹೊರಬಿದ್ದಿದೆ. ಪೇಟಿಎಂ ಸುಮಾರು 25 ಬಿಲಿಯನ್ ಡಾಲರ್‌ನಿಂದ ನಿಂದ 30 ಬಿಲಿಯನ್ ಡಾಲರ್ ಮೌಲ್ಯಮಾಪನವನ್ನು ಗುರಿಪಡಿಸುತ್ತಿದೆ.

ಬೃಹತ್ ಐಪಿಒ ತೆರೆಯಲು ಮುಂದಾದ ಪೇಟಿಎಂ: 21,800 ಕೋಟಿ ರೂ.

ಸಾಫ್ಟ್‌ಬ್ಯಾಂಕ್ ಮತ್ತು ಅಲಿಬಾಬಾ ಬೆಂಬಲಿತ ಪೇಟಿಎಂ, ಪ್ರಸ್ತುತ ಭಾರತದ ಅತ್ಯಂತ ಮೌಲ್ಯಯುತವಾದ ಕಂಪನಿಗಳಲ್ಲಿ ಒಂದಾಗಿದ್ದು , ಶುಕ್ರವಾರ ನಡೆಯಲಿರುವ ಮಂಡಳಿಯ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಬಳಿಕ, ಈ ಪ್ರಸ್ತಾಪವನ್ನು ಪರಿಗಣಿಸಲಾಗುವುದು.

ಫಿನ್‌ಟೆಕ್ ಸಂಸ್ಥೆಯು ಈ ವರ್ಷ ಲಾಭವನ್ನು ಪ್ರವೇಶಿಸಬಹುದು ಮತ್ತು ಶೀಘ್ರದಲ್ಲೇ ಐಪಿಒ ಪಟ್ಟಿಗೆ ಹೋಗಬಹುದು ಎಂದು ಪೇಟಿಎಂ ಮುಖ್ಯ ಕಾರ್ಯನಿರ್ವಾಹಕ ಈ ವರ್ಷದ ಜನವರಿಯಲ್ಲಿ ರಾಯಿಟರ್ಸ್‌ಗೆ ತಿಳಿಸಿದರು. ಭಾರತದಲ್ಲಿ, ಪೇಟಿಎಂ ಇತರ ಹಲವು ಪ್ಲಾಟ್‌ಫಾರ್ಮ್‌ಗಳ ನಡುವೆ ಅಲ್ಫಾಬೆಟ್‌ನ ಗೂಗಲ್-ಪೇ ಮತ್ತು ವಾಟ್ಸಾಪ್-ಪೇ ಜೊತೆ ಸ್ಪರ್ಧಿಸುತ್ತಿದೆ.

ಪೇಟಿಎಂ ಡಿಜಿಟಲ್ ಪಾವತಿಗಳನ್ನು ಮೀರಿ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್‌ಗಳು, ಹಣಕಾಸು ಸೇವೆಗಳು, ಸಂಪತ್ತು ನಿರ್ವಹಣೆ ಮತ್ತು ಡಿಜಿಟಲ್ ವ್ಯಾಲೆಟ್‌ಗಳ ಪ್ರವೇಶ ಹೊಂದಿದೆ. ಇದು ಭಾರತದಲ್ಲಿ 2 ದಶಲಕ್ಷಕ್ಕೂ ಹೆಚ್ಚು ವ್ಯಾಪಾರಿ ಪಾಲುದಾರರನ್ನು ಹೊಂದಿದ್ದು, 1.4 ಬಿಲಿಯನ್ ಬಳಕೆದಾರರು ಮಾಸಿಕ ವಹಿವಾಟುಗಳನ್ನು ನಡೆಸುತ್ತಾರೆ.

English summary

Paytm Plans To Launch India's Biggest IPO Later This Year

Paytm, India's leading digital payments provider, is planning to raise about $3 billion (about Rs 21,800 crore) in an initial public offering (IPO) in India later this year
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X