For Quick Alerts
ALLOW NOTIFICATIONS  
For Daily Alerts

2020ರಲ್ಲಿ ತಲಾ ಜಿಡಿಪಿಯಲ್ಲಿ ಭಾರತವನ್ನು ಹಿಂದಿಕ್ಕಲಿದೆ ಬಾಂಗ್ಲಾದೇಶ್

|

ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಂದ ಜಿಡಿಪಿ ಅಂಕಿ- ಅಂಶವೇ ಭಾರತದ ಪಾಲಿಗೆ ಆಘಾತಕಾರಿ ಆಗಿತ್ತು. ಇದೀಗ ಮತ್ತೊಂದು ಅಂಥದೇ ಸುದ್ದಿ ಬಂದಿದೆ. ಇದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಈಚಿನ ವಿಶ್ವ ಆರ್ಥಿಕತೆ ಹೊರನೋಟದ ವರದಿ ತಂದಿರುವ ಆತಂಕ.

ಐಎಂಎಫ್ ವರದಿ ಪ್ರಕಾರ, 2020ನೇ ಇಸವಿಯಲ್ಲಿ ತಲಾ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ ನ(ಜಿಡಿಪಿ) ಲೆಕ್ಕದಲ್ಲಿ ಬಾಂಗ್ಲಾದೇಶ್ ಗಿಂತ ಕೆಳಗೆ ಭಾರತ ಕುಸಿಯಲಿದೆ. ಕೊರೊನಾ ನಿಯಂತ್ರಣಕ್ಕಾಗಿ ಭಾರತದಲ್ಲಿ ಹೇರಿರುವ ಲಾಕ್ ಡೌನ್ ಪರಿಣಾಮವಿದು ಎಂದು ಕೂಡ ವರದಿಯಲ್ಲಿ ತಿಳಿಸಲಾಗಿದೆ.

10.3% ಕುಸಿತ ಕಂಡಲ್ಲಿ 2020ರಲ್ಲಿ ಭಾರತದ ತಲಾ ಜಿಡಿಪಿ $ 1877ಕ್ಕೆ ಕುಸಿಯಲಿದೆ ಎಂದು ಐಎಂಎಫ್ ತಿಳಿಸಿದೆ. ಇತ್ತ ಬಾಂಗ್ಲಾದೇಶ್ ತಲಾ ಜಿಡಿಪಿ $ 1888ಕ್ಕೆ, ಅಂದರೆ 4% ಏರಿಕೆ ಕಾಣಲಿದೆ. ಕಳೆದ ಕೆಲವು ವರ್ಷಗಳ ಹಿಂದೆ ತಲಾ ಜಿಡಿಪಿ ಲೆಕ್ಕದಲ್ಲಿ ಬಾಂಗ್ಲಾದೇಶ್ ಗಿಂತ ಭಾರತ ಬಹಳ ಮುಂದಿತ್ತು.

 

ಭಾರತದ ಆರ್ಥಿಕತೆ ಈ ವರ್ಷ 10.3% ಕುಸಿಯಲಿದೆ ಎಂದ ಐಎಂಎಫ್

ಆದರೆ, ಭಾರತದ ಉಳಿತಾಯ, ಹೂಡಿಕೆ ನಿಧಾನವಾಗುತ್ತಾ ಸಾಗಿತು ಹಾಗೂ ಬಾಂಗ್ಲಾದೇಶ್ ಇದರಲ್ಲಿ ಏರಿಕೆ ಕಂಡಿತು. ಇನ್ನು ಪ್ರಾದೇಶಿಕವಾಗಿ ಹೇಳಬೇಕು ಅಂದರೆ, ಪಾಕಿಸ್ತಾನ ಮತ್ತು ನೇಪಾಳ ಇವೆರಡಕ್ಕಿಂತ ಮಾತ್ರ ತಲಾ ಜಿಡಿಪಿಯಲ್ಲಿ ಭಾರತ ಮುಂದೆ ಇರಲಿದೆ. ಇದರರ್ಥ, ದಕ್ಷಿಣ ಏಷ್ಯಾ ದೇಶಗಳಾದ ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್ ಹಾಗೂ ಬಾಂಗ್ಲಾದೇಶ್ ಕೂಡ ಭಾರತದ ತಲಾ ಜಿಡಿಪಿಗಿಂತ ಮುಂದೆ ಇರುತ್ತವೆ.

2020ರಲ್ಲಿ ತಲಾ ಜಿಡಿಪಿಯಲ್ಲಿ ಭಾರತವನ್ನು ಹಿಂದಿಕ್ಕಲಿದೆ ಬಾಂಗ್ಲಾದೇಶ್

ಭಾರತದ ಬೆಳವಣಿಗೆ ದರ ಕುಸಿತದ ಬಗ್ಗೆ ಈಗಾಗಲೇ ಅಂದಾಜು ಮಾಡಲಾಗಿದ್ದು, ಈ ಮಧ್ಯೆ ನೇಪಾಳ ಹಾಗೂ ಭೂತಾನ್ ಆರ್ಥಿಕತೆ ಬೆಳವಣಿಗೆ ಕಾಣಲಿವೆ ಎಂದು ವರದಿಯಲ್ಲಿ ಹೇಳಿದೆ. ಹಾಗೆ ನೋಡಿದರೆ ಈ ವರ್ಷ 9.5% ಬೆಳವಣಿಗೆ ದರ ಕುಸಿತ ಆಗಬಹುದು ಎಂದು ಆರ್ ಬಿಐ ಅಂದಾಜು ಮಾಡಿತ್ತು. ಆದರೆ ಐಎಂಎಫ್ ಅಂದಾಜು ಅದಕ್ಕಿಂತ ಹೆಚ್ಚಿದೆ. ವಿಶ್ವ ಬ್ಯಾಂಕ್ ಹೇಳಿರುವಂತೆ FY21ರಲ್ಲಿ 9.6% ಕುಸಿತ ಆಗಬಹುದು.

ಸ್ಪೇನ್ ಹಾಗೂ ಇಟಲಿ ನಂತರ ಅತಿ ದೊಡ್ಡ ಕುಸಿತ ಕಾಣುವ ದೇಶ ಭಾರತ (10.3%) ಆಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ 2021ರಲ್ಲಿ ಭಾರತವು ವೇಗವಾಗಿ ಚೇತರಿಸಿಕೊಳ್ಳಲಿದೆ ಎಂದು ಹೇಳಲಾಗಿದೆ. ತಲಾ ಜಿಡಿಪಿಯಲ್ಲಿ ಮತ್ತೊಮ್ಮೆ ಬಾಂಗ್ಲಾದೇಶ್ ನ ಮೀರಿ ಮುಂದಕ್ಕೆ ಭಾರತ ಸಾಗಲಿದೆ ಎಂದು ಕೂಡ ತಿಳಿಸಲಾಗಿದೆ.

ವರದಿಯಲ್ಲಿ ಮಾಡಿರುವ ಅಂದಾಜಿನಂತೆ 2021ನೇ ಇಸವಿಯಲ್ಲಿ ಭಾರತದ ತಲಾ ಜಿಡಿಪಿ ಬೆಳವಣಿಗೆ 8.2% ಆಗಬಹುದು. ಇದೇ ಅವಧಿಯಲ್ಲಿ ಬಾಂಗ್ಲಾದೇಶ್ 5.4% ಆಗಬಹುದು. ಈ ಮೂಲಕ ಭಾರತದ ತಲಾ ಜಿಡಿಪಿ $ 2030 ತಲುಪಿದರೆ, ಬಾಂಗ್ಲಾದೇಶ್ $ 1990 ತಲುಪಲಿದೆ ಎನ್ನಲಾಗಿದೆ.

English summary

Per Capita GDP: Bangladesh About To Beat India In 2020

Due to lock down announced to curb Corona, Bangladesh about to beat India per capita GDP in 2020, IMF report said.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X