For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್- ಡೀಸೆಲ್ ಲೀಟರ್ ಗೆ ತಲಾ 4ರಿಂದ 5 ರುಪಾಯಿ ಹೆಚ್ಚು ಕೊಡಲು ಸಿದ್ಧರಾಗಿ...

|

ಮುಂದಿನ ತಿಂಗಳು ಪೆಟ್ರೋಲ್- ಡೀಸೆಲ್ ಲೀಟರ್ ಗೆ ತಲಾ 4ರಿಂದ 5 ರುಪಾಯಿ ಹೆಚ್ಚಿಗೆ ನೀಡುವುದಕ್ಕೆ ಈಗಲೇ ಸಿದ್ಧವಾಗಿ. ನಿತ್ಯವೂ ದರ ಪರಿಷ್ಕರಣೆ ಆಗಬೇಕಿತ್ತಲ್ಲಾ, ಅದನ್ನು ಜೂನ್ ನಿಂದ ಪುನರಾರಂಭ ಮಾಡಲಾಗುತ್ತದೆ. ಲಾಕ್ ಡೌನ್ ಮುಗಿಯಲಿ ಎಂದಷ್ಟೇ ಕಾಯಲಾಗುತ್ತಿದೆ. ಸಾರ್ವಜನಿಕ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪೆನಿಗಳು ತಕ್ಷಣವೇ ಬೆಲೆ ಏರಿಸಲಿವೆ.

ಸಾರ್ವಜನಿಕ ವಲಯದ ತೈಲ ಮಾರ್ಕೆಟಿಂಗ್ ಮೂಲಗಳ ಪ್ರಕಾರ, ಕಳೆದ ವಾರ ತೈಲ ರೀಟೇಲರ್ ಗಳ ಸಭೆ ನಡೆದಿದೆ. ಸ್ಥಿತಿಯನ್ನು ಅವಲೋಕಿಸಿ, ಕೊರೊನಾ ಲಾಕ್ ಡೌನ್ ನಂತರ ಪ್ರತಿ ನಿತ್ಯ ಬೆಲೆ ಪರಿಷ್ಕರಣೆ ಮಾಡುವ ಬಗ್ಗೆ ಮೌಲ್ಯಮಾಪನವನ್ನು ಮಾಡಲಾಗಿದೆ.

ಪೆಟ್ರೋಲ್, ಡೀಸೆಲ್ ಮೇಲೆ ನೀವು ಸರ್ಕಾರಕ್ಕೆ ಪಾವತಿಸುವ ತೆರಿಗೆ ಎಷ್ಟು?

 

ಒಂದು ವೇಳೆ ಐದನೇ ಹಂತದ ಲಾಕ್ ಡೌನ್ ಘೋಷಣೆ ಮಾಡಿದರೂ ದರ ಪರಿಷ್ಕರಣೆಯನ್ನಂತೂ ಮಾಡಲಾಗುತ್ತದೆ. ಐದನೇ ಹಂತದ ಲಾಕ್ ಡೌನ್ ನಲ್ಲಿ ಭಾರೀ ವಿನಾಯಿತಿಯನ್ನು ಸರ್ಕಾರ ಘೋಷಿಸುವ ಅಂದಾಜಿದೆ. ಅದರಲ್ಲಿ ತೈಲ ದರಗಳ ನಿತ್ಯ ಪರಿಷ್ಕರಣೆಯೂ ಒಂದು ಎಂಬ ನಿರೀಕ್ಷೆ ಇದೆ.

ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ ನಷ್ಟ

ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ ನಷ್ಟ

ತೈಲ ಮಾರ್ಕೆಟ್ ನಲ್ಲಿ ದರ ಭಾರೀ ಕುಸಿದಿತ್ತು. ಅದರ ಮೂಲಕ ಆಗುತ್ತಿದ್ದ ಲಾಭವನ್ನು ಅಬಕಾರಿ ಸುಂಕ ವಿಧಿಸುವ ಮೂಲಕ ಸರ್ಕಾರವೇ ತೆಗೆದುಕೊಂಡಿತು. ಈಗ ತೈಲ ಬೆಲೆ ಮೇಲೇರುತ್ತಾ ಇದೆ. ದೊಡ್ಡ ಮಟ್ಟದಲ್ಲಿ ಅಬಕಾರಿ ಸುಂಕ ಏರಿಸಿದ್ದರ ಕಾರಣಕ್ಕೆ ಈ ಹಿಂದಿನ ಲಾಭ ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ ಸಿಕ್ಕಿಲ್ಲ. ಈಗಿನ ಬೆಲೆ ಏರಿಕೆ ಹತ್ತಿರಕ್ಕೆ ದರವೂ ಬಂದುಬಿಟ್ಟರೆ ಪೆಟ್ರೋಲ್- ಡೀಸೆಲ್ ಮಾರಾಟದಿಂದ ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ ನಷ್ಟವಾಗಲು ಶುರುವಾಗುತ್ತದೆ. ವಾಹನಗಳ ತೈಲಕ್ಕೆ ಈಗಾಗಲೇ ಲಾಕ್ ಡೌನ್ ಕಾರಣಕಕ್ಕೆ ಬೇಡಿಕೆ ಕುಸಿದಿದೆ. ಪೆಟ್ರೋಲ್ - ಡೀಸೆಲ್ ತಯಾರಿಕೆ ವೆಚ್ಚ ಮತ್ತು ಮಾರಾಟ ಬೆಲೆಯ ಮಧ್ಯದ ವ್ಯತ್ಯಾಸ ಲೀಟರ್ ಗೆ 4- 5 ರುಪಾಯಿಗೆ ಬಂದಿದೆ.

ದಿನಕ್ಕೆ 40- 50 ಪೈಸೆಯಂತೆ ಬೆಲೆ ಏರಿಕೆ

ದಿನಕ್ಕೆ 40- 50 ಪೈಸೆಯಂತೆ ಬೆಲೆ ಏರಿಕೆ

ಇದನ್ನು ಮುಂಬರುವ ದಿನಗಳಲ್ಲಿ ತುಂಬಿಕೊಳ್ಳಬೇಕು ಅಂದರೆ, ದಿನಕ್ಕೆ 40- 50 ಪೈಸೆಯಂತೆ ಮುಂದಿನ ಕೆಲವು ದಿನಗಳ ಕಾಲ ಏರಿಕೆ ಮಾಡಬೇಕಾಗುತ್ತದೆ. ಆದರೆ ಸರ್ಕಾರದ ಮೂಲಗಳ ಪ್ರಕಾರ, ಒಂದು ವೇಳೆ ನಿತ್ಯದ ದರ ಪರಿಷ್ಕರಣೆ ಆದರೂ ಒಂದು ಹಂತವನ್ನು ಮೀರಿ ಬೆಲೆ ಹೋಗಲು ಬಿಡಲ್ಲ. ಇದರರ್ಥ, ದಿನಕ್ಕೆ 20ರಿಂದ 40 ಪೈಸೆಯಷ್ಟು ಮಾತ್ರ ಬೆಲೆ ಏರಿಕೆಗೆ ಅವಕಾಶ ನೀಡಬಹುದು. ಅಥವಾ ಅದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಏರಿಸುತ್ತಾ ಬಂದು, ವೆಚ್ಚ ಹಾಗೂ ಮಾರಾಟದ ಬೆಲೆಯ ಮಧ್ಯೆ ಇರುವ ವ್ಯತ್ಯಾಸವನ್ನು ಹೋಗಲಾಡಿಸುವ ತನಕ ಪ್ರಯತ್ನಿಸಬಹುದು.

ಜಾಗತಿಕ ಮಾರ್ಕೆಟ್ ದರದ ಪಾತ್ರವೂ ಇದೆ
 

ಜಾಗತಿಕ ಮಾರ್ಕೆಟ್ ದರದ ಪಾತ್ರವೂ ಇದೆ

ಚಿಲ್ಲರೆ ಮಾರಾಟ ದರವನ್ನು ದಿನವೂ ಪರಿಷ್ಕರಣೆ ಮಾಡುವುದರ ಹಿಂದೆ ಜಾಗತಿಕವಾಗಿ ಮಾರ್ಕೆಟ್ ದರದ ಪಾತ್ರವಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಐವತ್ತು ಪರ್ಸೆಂಟ್ ಏರಿಕೆ ಆಗಿದೆ. ಬ್ರೆಂಟ್ ಕಚ್ಚಾ ತೈಲ ಬೆಂಚ್ ಮಾರ್ಕ್ ಬ್ಯಾರಲ್ ಗೆ $ 20ಗಿಂತ ಕಡಿಮೆ ಆಗಿತ್ತು. ಅದೀಗ ಬ್ಯಾರಲ್ ಗೆ $ 30ಕ್ಕಿಂತ ಹೆಚ್ಚಿದೆ. ಆದರೆ ಲಾಕ್ ಡೌನ್ ಕಾರಣಕ್ಕೆ ವಾಹನ ತೈಲ ಬೇಡಿಕೆ ಕೂಡ ಇಳಿಕೆಯಾಗಿದೆ. ಇದರಿಂದಾಗಿ ಬೆಲೆಯಲ್ಲಿ ಕೆಲವು ಮಟ್ಟಿಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಸಹಾಯವಾಗುತ್ತದೆ. ದೆಹಲಿಯಲ್ಲಿ ಪೆಟ್ರೋಲ್ ರೀಟೇಲ್ ದರ ಲೀಟರ್ ಗೆ 71.26 ರುಪಾಯಿ ಇದ್ದರೆ, ಡೀಸೆಲ್ 69.30 ರುಪಾಯಿ ಇದೆ. ಅದಕ್ಕೂ ಮುನ್ನ ಮಾರ್ಚ್ 16ರಿಂದ ಮೇ 4ರ ತನಕ ಎರಡೂ, ಪೆಟ್ರೋಲ್ 69.59 ರುಪಾಯಿ ಹಾಗೂ ಡೀಸೆಲ್ 62.28 ರುಪಾಯಿ ಇತ್ತು. ಆ ನಂತರ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ವ್ಯಾಟ್ ಏರಿಕೆ ಮಾಡಿತ್ತು.

ಶೇಕಡಾ ಐವತ್ತರಷ್ಟು ಬೇಡಿಕೆ ಕಡಿಮೆ

ಶೇಕಡಾ ಐವತ್ತರಷ್ಟು ಬೇಡಿಕೆ ಕಡಿಮೆ

ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ ಕೂಡ ಪೆಟ್ರೋಲ್- ಡೀಸೆಲ್ ರೀಟೇಲ್ ದರ ಏರಿಕೆ ಆಗುವುದು ಮುಖ್ಯ. ಮೊದಲಿಗೆ ಪ್ರತಿ ಲೀಟರ್ ಗೆ ಈ ಮಾರ್ಕೆಟಿಂಗ್ ಕಂಪೆನಿಗಳಿಗೆ ಲೀಟರ್ ಗೆ 12ರಿಂದ 18 ರುಪಾಯಿ ತನಕ ಇತ್ತು. ಆ ಲಾಭದ ಪ್ರಮಾಣವು ಬಹಳ ಕಡಿಮೆ ಆಗಿದೆ. ಅದಕ್ಕೆ ಕಾರಣವಾಗಿದ್ದು ಕೇಂದ್ರ ಸರ್ಕಾರ ಏರಿಸಿದ ಅಬಕಾರಿ ಸುಂಕ. ಅದರಿಂದ ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸ ಆಗಿಲ್ಲ. ತೈಲ ಮಾರ್ಕೆಟಿಂಗ್ ಕಂಪೆನಿಗಳ ಲಾಭದ ಪ್ರಮಾಣ ಕಡಿಮೆ ಆಗಿದೆ. ಜಾಗತಿಕ ಮಾರ್ಕೆಟ್ ನಲ್ಲೇ ಕಚ್ಚಾ ತೈಲ ಬೆಲೆ ಏರಿಕೆ ಮಾಡುತ್ತಿರುವ ಸಂದರ್ಭದಲ್ಲೂ ಬೆಲೆ ಏರಿಕೆ ಮಾಡದಿದ್ದರೆ ನಷ್ಟದ ಪ್ರಮಾಣ ಹೆಚ್ಚಾಗಲಿದೆ. ಅದರಲ್ಲೂ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿರುವಾಗ ಉತ್ಪನ್ನಗಳ ಬೇಡಿಕೆ ಶೇಕಡಾ 50ರಷ್ಟು ಕುಸಿದಿದೆ.

English summary

Petrol, Diesel Price May Be Dearer By 4 To 5 Rupees From Next Month, Why?

Oil marketing companies may increase petrol, diesel price by 4 to 5 rupees per litre from June. Know the reason why?
Story first published: Thursday, May 28, 2020, 16:24 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more