ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ತೀಕ್ಷ್ಣ ಏರಿಕೆ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಶುಕ್ರವಾರ (ನವೆಂಬರ್ 27, 2020) ತೀಕ್ಷ್ಣ ಏರಿಕೆ ಕಂಡಿದೆ. ಜಾಗತಿಕ ತೈಲ ದರವು ಈ ಹಣಕಾಸು ವರ್ಷದಲ್ಲಿ ಗರಿಷ್ಠ ಮಟ್ಟವನ್ನು ಮುಟ್ಟಿ, ಸ್ಥಿರವಾಗಿದೆ. ಪೆಟ್ರೋಲ್ ದರವು ಪ್ರತಿ ಲೀಟರ್ ಗೆ 19 ಪೈಸೆ, ಡೀಸೆಲ್ ದರವು 24 ಪೈಸೆ ಏರಿಕೆ ಆಗಿದೆ. ಐದು ದಿನಗಳಲ್ಲಿ ಪೆಟ್ರೋಲ್ ದರವು 53 ಪೈಸೆ ಹಾಗೂ ಡೀಸೆಲ್ ದರವು 95 ಪೈಸೆ ಹೆಚ್ಚಳವಾಗಿದೆ.
ಈ ಶುಕ್ರವಾರದ ಏರಿಕೆಯೊಂದಿಗೆ ಕಳೆದ ಶುಕ್ರವಾರದ ಈಚೆಗೆ ಪೆಟ್ರೋಲ್ ದರ 83 ಪೈಸೆ ಹಾಗೂ 1 ರುಪಾಯಿ 40 ಪೈಸೆ ಏರಿಕೆ ಆಗಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ನೇ ತಾರೀಕಿನ ತನಕ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.
ಡಿಸೆಂಬರ್ 2ರಿಂದ 4 ಬರ್ಗರ್ ಕಿಂಗ್ ಐಪಿಒ; ಪ್ರತಿ ಷೇರಿಗೆ 59- 60
ಅಂತರರಾಷ್ಟ್ರೀಯ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್ ಗೆ $ 48 (ಐಸಿಇ) ಇದೆ. ನವೆಂಬರ್ ನಲ್ಲಿ ಬಹುತೇಕ ಬ್ಯಾರಲ್ ಗೆ $ 43 ಮೇಲ್ಮಟ್ಟದಲ್ಲೇ ಇತ್ತು. ಕಚ್ಚಾ ತೈಲದಲ್ಲಿ ಒಂದು ಅಮೆರಿಕನ್ ಡಾಲರ್ ಹೆಚ್ಚಳವಾದಲ್ಲಿ ತೈಲ ಮಾರ್ಕೆಟಿಂಗ್ ಕಂಪೆನಿಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ ನಲವತ್ತು ಪೈಸೆ ಹೆಚ್ಚಳ ಮಾಡುತ್ತವೆ.
ನವೆಂಬರ್ 27, 2020ರ ಶುಕ್ರವಾರ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ (ಲೀಟರ್ ಗೆ) ರುಪಾಯಿಗಳಲ್ಲಿ
ಬೆಂಗಳೂರು 84.63
ಹೈದರಾಬಾದ್ 85.17
ನವದೆಹಲಿ 81.89
ಚೆನ್ನೈ 84.91
ಕೋಲ್ಕತ್ತಾ 83.44
ಮುಂಬೈ 88.58
ಪ್ರಮುಖ ನಗರಗಳಲ್ಲಿ ಡೀಸೆಲ್ ದರ (ಲೀಟರ್ ಗೆ) ರುಪಾಯಿಗಳಲ್ಲಿ
ಬೆಂಗಳೂರು 76.18
ಹೈದರಾಬಾದ್ 78.41
ನವದೆಹಲಿ 71.86
ಚೆನ್ನೈ 77.30
ಕೋಲ್ಕತ್ತಾ 75.43
ಮುಂಬೈ 78.38