For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚುವರಿ ತೆರಿಗೆ ಹೇರಿಕೆ ಮುಂದಾದ ಸರ್ಕಾರ

|

ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮತ್ತೊಮ್ಮೆ ನಿರ್ಧರಿಸಿದೆ. ಕೊರೊನಾವೈರಸ್ ಸೋಂಕು ನಿಯಂತ್ರಣ ಸಿಗದೆ ಆರ್ಥಿಕ ಹೊಡೆತ ನೀಡಿರುವುದರಿಂದ, ಸರ್ಕಾರದ ಬೊಕ್ಕಸ ತುಂಬಲು ಈ ಯೋಜನೆ ಹಾಕಿಕೊಳ್ಳಲಾಗಿದೆ. ಸುಮಾರು 6 ರಿಂದ 10 ರು ಪ್ರತಿ ಲೀಟರ್ ನಂತೆ ಬೆಲೆ ಏರಿಕೆ ನಿರೀಕ್ಷೆಯಿದೆ. ಈ ಮೂಲಕ ವಾರ್ಷಿಕ 60, 000 ಕೋಟಿ ರು ಸಂಗ್ರಹದ ನಿರೀಕ್ಷೆ ಹೊಂದಲಾಗಿದೆ.

ಮಾರ್ಚ್ ತಿಂಗಳಿನಲ್ಲಿ ಪೆಟ್ರೋಲ್ ಮೇಲೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ 18 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಮೇಲೆ 12 ರು ಪ್ರತಿ ಲೀಟರ್ ಹೇರಲು ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಆದರೆ, ಮೇ ತಿಂಗಳಿನಲ್ಲಿ ಪೆಟ್ರೋಲ್ ಮೇಲೆ ಸುಂಕ 12 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಮೇಲೆ ಸುಂಕ 9 ರು ಪ್ರತಿ ಲೀಟರ್ ಮಾತ್ರ ಏರಿಕೆ ಮಾಡಲಾಗಿತ್ತು. ಹೀಗಾಗಿ ಬಾಕಿ ಉಳಿದ 6 ರು ಹಾಗೂ 3 ರು ಸುಂಕವನ್ನು ಈಗ ಪ್ರಯೋಗಿಸಲು ಸರ್ಕಾರ ಮುಂದಾಗಿದೆ. ಒಟ್ಟಾರೆ, ಭಾರತದಲ್ಲಿ ಚಿಲ್ಲರೆ ಮಾರಾಟ ಬೆಲೆಯಲ್ಲಿ ಸುಂಕದ ಪ್ರಮಾಣ ಶೇ 70ರಷ್ಟಿದ್ದು, ಇದು ಜಗತ್ತಿನಲ್ಲೇ ಅಧಿಕವಾಗಿದೆ. ಸುಂಕ ಹೆಚ್ಚಳದ ಬಳಿಕ ಸಹಜವಾಗಿ ಆಯಾ ರಾಜ್ಯಗಳ ತೆರಿಗೆ ಸೇರಿಸಿ ಇಂಧನ ದರದಲ್ಲಿ ಏರಿಕೆ ನಿರೀಕ್ಷಿತವಾಗಿದೆ.

 

ಒಟ್ಟಾರೆ, ಸುಂಕ ಹೆಚ್ಚಳ ಮಾಡಿ ವಾರ್ಷಿಕ 1.75 ಲಕ್ಷ ಕೋಟಿ ರು ಆದಾಯ ಹಾಗೂ ಪೆಟ್ರೋಲಿಯಂ ಉತ್ಪನ್ನ ಮಾರಾಟದಿಂದ ಬರುವ 2 ಲಕ್ಷ ಕೋಟಿ ರು ಆದಾಯವನ್ನು ಕೊವಿಡ್ 19 ನಿಯಂತ್ರಣಕ್ಕೆ ಬಳಸಲು ಸರ್ಕಾರ ಮುಂದಾಗಿದೆ. ವಿತ್ತೀಯ ಕೊರತೆ ಎದುರಿಸುತ್ತಿರುವ ಸರ್ಕಾರ ಜಿಡಿಪಿ 8%, ಜಿಎಸ್ಟಿ ಸಂಗ್ರಹ ಇಳಿಕೆ ಸಮಸ್ಯೆಯನ್ನು ಎದುರಿಸುತ್ತಿದೆ. ಹೀಗಾಗಿ ಇಂಧನ ಮೇಲಿನ ಸುಂಕ ಹೆಚ್ಚಳದಿಂದ ಆದಾಯ ಗಳಿಕೆಗೆ ಸರ್ಕಾರ ಮುಂದಾಗಿದೆ.

ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚುವರಿ ತೆರಿಗೆ ಹೇರಿಕೆ ಮುಂದಾದ ಸರ್ಕಾರ

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸುತ್ತಾ ಬಂದಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರ, ಅಮೆರಿಕ-ಚೀನಾ ನಡುವಿನ ವಹಿವಾಟು ಆರಂಭದ ಮಾತುಕತೆ, ಕೊರೊನಾವೈರಸ್ ಆರ್ಥಿಕ ಹೊಡೆತ, ಭಾರತದಲ್ಲಿ ತೈಲದ ಮೇಲೆ ಹೆಚ್ಚಿದ ಅಬಕಾರಿ ಸುಂಕ ಎಲ್ಲವೂ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.

English summary

Petrol, diesel prices may go up further, Govt to raise excise duty

The Centre is reportedly planning to raise excise duty on petrol and diesel soon as Covid-19 pandemic continues to put pressure on revenue collection. It would help the government to generate additional revenue to the tune of almost ₹60,000 crore in a year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X