35 ದಿನಗಳಿಂದ ಪೆಟ್ರೋಲ್ ದರ ಇಳಿಕೆಯಾಗಿಲ್ಲ..! ಹೀಗಾದ್ರೆ ಏನ್ ಗತಿ?
ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತ 35 ದಿನ ಪೆಟ್ರೋಲ್ ದರವನ್ನು ತಗ್ಗಿಸದೇ ಗರಿಷ್ಠ ಪ್ರಮಾಣದಲ್ಲೇ ಇರಿಸಿರುವುದು ವಾಹನ ಸವಾರರಿಗೆ ಹೊರೆಯಾಗಿ ಪರಿಣಮಿಸಿದೆ. ಆದರೆ ಕಳೆದ ಮೂರು ದಿನಗಳು ಡೀಸೆಲ್ ದರ ಲೀಟರ್ಗೆ ಒಟ್ಟಾರೆ 60 ಪೈಸೆ ಇಳಿಕೆಯಾಗಿದ್ದರೂ ದುಬಾರಿಯಾಗೇ ಉಳಿದಿದೆ.
ಪೆಟ್ರೋಲ್ ದರಗಳು ಜುಲೈ 17 ರಂದು ಕೊನೆಯ ಬಾರಿಗೆ ಪ್ರತಿ ಲೀಟರ್ಗೆ 30 ಪೈಸೆ ಹೆಚ್ಚಾದ ಬಳಿಕ ಯಾವುದೇ ಬೆಲೆ ಪರಿಷ್ಕರಣೆಗೊಂಡಿಲ್ಲ. ಆದರೆ ಡೀಸೆಲ್ ದರವು ಆಗಸ್ಟ್ 18, 19, 20 ರಂದು ಮೂರು ದಿನ ಕೊಂಚ ಇಳಿಕೆಯಾಗಿದೆ. ಆದರೆ ಇಂದು ಯಾವುದೇ ವ್ಯತ್ಯಾಸಗೊಂಡಿಲ್ಲ.
ಶನಿವಾರ (ಆಗಸ್ಟ್ 21) ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 101.84 ರೂಪಾಯಿ ನಷ್ಟಿದ್ದು, ಡೀಸೆಲ್ ದರವು ಪ್ರತಿ ಲೀಟರ್ಗೆ 89.27 ರೂಪಾಯಿಗೆ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 21: 105.25
ಆಗಸ್ಟ್ 20: 105.25
ಆಗಸ್ಟ್ 19: 105.25
ಆಗಸ್ಟ್ 18: 105.25
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 21: 94.65
ಆಗಸ್ಟ್ 20: 94.65
ಆಗಸ್ಟ್ 19: 94.86
ಆಗಸ್ಟ್ 18: 95.05

ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 21: 101.84
ಆಗಸ್ಟ್ 20: 101.84
ಆಗಸ್ಟ್ 19: 101.84
ಆಗಸ್ಟ್ 18: 101.84
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 21: 89.27
ಆಗಸ್ಟ್ 20: 89.27
ಆಗಸ್ಟ್ 19: 89.47
ಆಗಸ್ಟ್ 18: 89.67
ಬರಲಿದೆ ಹೊಸ ಸ್ಕೋಡಾ ಕೊಡಿಯಾಕ್ ಕಾರು: ಡಿಸೆಂಬರ್ನಿಂದ ಉತ್ಪಾದನೆ ಶುರು

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 21: 107.83
ಆಗಸ್ಟ್ 20: 107.83
ಆಗಸ್ಟ್ 19: 107.83
ಆಗಸ್ಟ್ 18: 107.83
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 21: 96.84
ಆಗಸ್ಟ್ 20: 96.84
ಆಗಸ್ಟ್ 19: 97.04
ಆಗಸ್ಟ್ 18: 97.24

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 21: 93.84
ಆಗಸ್ಟ್ 20: 99.47
ಆಗಸ್ಟ್ 19: 99.47
ಆಗಸ್ಟ್ 18: 99.47
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 21: 93.84
ಆಗಸ್ಟ್ 20: 93.84
ಆಗಸ್ಟ್ 19: 94.02
ಆಗಸ್ಟ್ 18: 94.20

ಹೈದ್ರಾಬಾದ್ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 21: 105.83
ಆಗಸ್ಟ್ 20: 105.83
ಆಗಸ್ಟ್ 19: 105.83
ಆಗಸ್ಟ್ 18: 105.83
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 21: 97.33
ಆಗಸ್ಟ್ 20: 97.33
ಆಗಸ್ಟ್ 19: 97.53
ಆಗಸ್ಟ್ 18: 97.74

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.